»   » ಚಿತ್ರಗಳು: ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಹುಭಾಷಾ ತಾರೆ ನಮಿತಾ

ಚಿತ್ರಗಳು: ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಹುಭಾಷಾ ತಾರೆ ನಮಿತಾ

Posted By:
Subscribe to Filmibeat Kannada
ನಮಿತಾ ಹಾಗು ವೀರೇಂದ್ರ ಚೌದರಿ ಮದುವೆ ಫೋಟೋಗಳು | Filmibeat Kannada

ಬಹುಭಾಷಾ ತಾರೆ ನಮಿತಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತಿರುಪತಿ ತಿಮ್ಮಪ್ಪನ ಆಶೀರ್ವಾದದೊಂದಿಗೆ ನಟಿ ನಮಿತಾ ವೈವಾಹಿಕ ಜೀವನಕ್ಕೆ ಅಡಿಯಿಟ್ಟಿದ್ದಾರೆ.

ಮಾದಕ ಮೈಮಾಟದಿಂದಲೇ ಸೌತ್ ಸಿನಿ ರಂಗದಲ್ಲಿ ಬಹು ಬೇಡಿಕೆ ಹೊಂದಿದ್ದ ನಟಿ ನಮಿತಾ ಇಂದು ತಮ್ಮ ಗೆಳೆಯ ವೀರೇಂದ್ರ ಜೊತೆ ಹಸೆಮಣೆ ಏರಿದ್ದಾರೆ.

ನಟಿ ನಮಿತಾ ಮನೆಯಲ್ಲಿ 'ಮದುವೆ'ಯ ಸಂಭ್ರಮ ಸಡಗರ

ಇವತ್ತು ಮುಂಜಾನೆ ತಿರುಪತಿಯಲ್ಲಿ ನಡೆದ ನಟಿ ನಮಿತಾ-ವೀರೇಂದ್ರ ವಿವಾಹ ಮಹೋತ್ಸವದ ಫೋಟೋ ಆಲ್ಬಂ ನಿಮ್ಮ 'ಫಿಲ್ಮಿಬೀಟ್ ಕನ್ನಡ'ಗೆ ಲಭ್ಯವಾಗಿದೆ. ನೋಡಿ....

ಹೊಸ ಜೀವನ ಶುರು ಮಾಡಿದ ನಮಿತಾ-ವೀರೇಂದ್ರ

'ನೀಲಕಂಠ', 'ಹೂ', 'ನಮಿತಾ ಐ ಲವ್ ಯು' ಸೇರಿದಂತೆ ಕನ್ನಡದ ಹಲವು ಚಿತ್ರಗಳಲ್ಲಿ ಮಿಂಚಿದ್ದ ನಟಿ ನಮಿತಾ ಇಂದು ತಮ್ಮ ಇನಿಯ ವೀರೇಂದ್ರ ಜೊತೆ ಹಸೆಮಣೆ ಏರಿದರು.

ನಮಿತಾ ಕೊರಳಿಗೆ ಮಾಂಗಲ್ಯಧಾರಣೆ

ಇಂದು ಮುಂಜಾನೆ 5.30ಕ್ಕೆ ಇದ್ದ ಶುಭ ಮುಹೂರ್ತದಲ್ಲಿ ನಮಿತಾ ಕೊರಳಿಗೆ ವೀರೇಂದ್ರ ಚೌಧರಿ ಮಾಂಗಲ್ಯಧಾರಣೆ ಮಾಡಿದರು.

ತಿಮ್ಮಪ್ಪನ ಆಶೀರ್ವಾದ

ತಮ್ಮ ಇಚ್ಚೆಯಂತೆ ನಮಿತಾ-ವೀರೇಂದ್ರ ವಿವಾಹ ತಿರುಪತಿಯಲ್ಲಿ ಇರುವ ಇಸ್ಕಾನ್ ನಲ್ಲಿ ನಡೆದಿದೆ.

ಚಿತ್ರರಂಗದ ಗಣ್ಯರು ಭಾಗಿ

ನಮಿತಾ-ವೀರೇಂದ್ರ ವಿವಾಹಕ್ಕೆ ಚಿತ್ರರಂಗದ ಗಣ್ಯರು ಸಾಕ್ಷಿಯಾಗಿದ್ದರು. ರಾಧಿಕಾ-ಶರತ್ ಕುಮಾರ್ ದಂಪತಿ ಕೂಡ ಮದುವೆ ಸಂಭ್ರಮದಲ್ಲಿ ಪಾಲ್ಗೊಂಡು ವಧು-ವರನಿಗೆ ಶುಭ ಹಾರೈಸಿದರು.

ಮೇಡ್ ಫಾರ್ ಈಚ್ ಅದರ್

ಪ್ರೀತಿಸಿ ಮದುವೆ ಆಗಿರುವ ನಮಿತಾ ಹಾಗೂ ವೀರೇಂದ್ರಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

ಮೊನ್ನೆ ಮೆಹೆಂದಿ ಇಂದು ಮದುವೆ

ನವೆಂಬರ್ 22 ರಂದು ತಿರುಪತಿಯಲ್ಲಿಯೇ ನಮಿತಾ ರವರ ಮೆಹೆಂದಿ ಮತ್ತು ಸಂಗೀತ ಕಾರ್ಯಕ್ರಮದ ನಡೆದಿತ್ತು.

ಚೆನ್ನೈನಲ್ಲಿ ಆರತಕ್ಷತೆ

ಕುಟುಂಬಸ್ಥರು ಹಾಗೂ ಚಿತ್ರರಂಗದ ಗಣ್ಯರಿಗಾಗಿ ನಮಿತಾ-ವೀರೇಂದ್ರ ಆರತಕ್ಷತೆ ಕಾರ್ಯಕ್ರಮ ಚೆನ್ನೈನಲ್ಲಿ ನಡೆಯಲಿದೆ.

ಒಂದ್ಕಾಲದಲ್ಲಿ ಬಹುಬೇಡಿಕೆಯ ನಟಿ

2001 ರಲ್ಲಿ 'ಮಿಸ್ ಇಂಡಿಯಾ' ಸ್ಪರ್ಧಿಯಾಗಿದ್ದ ನಮಿತಾ ಬಳಿಕ ತೆಲುಗು ಚಿತ್ರದ ಮೂಲಕ ಬಣ್ಣದ ಬದುಕಿಗೆ ಪದಾರ್ಪಣೆ ಮಾಡಿದರು. ತೆಲುಗು, ತಮಿಳು, ಕನ್ನಡ ಹಾಗೂ ಮಲಯಾಳಂನಲ್ಲಿ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ ನಮಿತಾ ಒಂದ್ಕಾಲದಲ್ಲಿ ಬಹುಬೇಡಿಕೆಯ ನಟಿಯಾಗಿದ್ದರು.

'ಬಿಗ್ ಬಾಸ್' ಸ್ಪರ್ಧಿ

ತಮಿಳಿನ 'ಬಿಗ್ ಬಾಸ್' ಕಾರ್ಯಕ್ರಮದಲ್ಲಿಯೂ ಸ್ಪರ್ಧಿಸಿದ್ದ ನಟಿ ನಮಿತಾ ಇದೀಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

English summary
Actress Namitha marries Veerandra Chowdary today (November 24th) at Iskon, Tirupati.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada