»   » ನಟಿ ನಮಿತಾ ಮನೆಯಲ್ಲಿ 'ಮದುವೆ'ಯ ಸಂಭ್ರಮ ಸಡಗರ

ನಟಿ ನಮಿತಾ ಮನೆಯಲ್ಲಿ 'ಮದುವೆ'ಯ ಸಂಭ್ರಮ ಸಡಗರ

Posted By:
Subscribe to Filmibeat Kannada
ನಟಿ ನಮಿತಾ ಮನೆಯಲ್ಲಿ 'ಮದುವೆ'ಯ ಸಂಭ್ರಮ ಸಡಗರ | Filmibeat Kannada

ಸಿನಿಮಾರಂಗದಲ್ಲಿ ಕದ್ದು ಮುಚ್ಚಿ ಮದುವೆಯಾಗುವವರೇ ಹೆಚ್ಚು. ಆದ್ರೆ ''ನಾನು ಮದುವೆ ಆಗ್ತಿದ್ದೀನಿ'' ಅಂತ ಧೈರ್ಯವಾಗಿ ಹೇಳಿಕೊಂಡಿದ್ದ ನಟಿ ನಮಿತಾ ಮನೆಯಲ್ಲಿ ಇದೀಗ ಮದುವೆ ಸಂಭ್ರಮ ಜೋರಾಗಿದೆ.

ಸೌತ್ ಸಿನಿ ದುನಿಯಾದಲ್ಲೇ ಸಖತ್ ಸುದ್ದಿ ಮಾಡಿರುವ ನಟಿ ನಮಿತಾ ತನ್ನ ಬಹುದಿನದ ಸ್ನೇಹಿತನ ಜೊತೆ ದಾಂಪತ್ಯಕ್ಕೆ ಕಾಲಿಡುತ್ತಿದ್ದಾರೆ. ಮದುವೆಗೆ ಇನ್ನು ಎರಡು ದಿನಗಳಷ್ಟೇ ಬಾಕಿ ಇದೆ. ಎರಡು ದಿನದ ಹಿಂದೆಯೇ ನಮಿತಾ ನಿವಾಸದಲ್ಲಿ ಮದುವೆ ಸಂಭ್ರಮ ಸಡಗರ ಮನೆ ಮಾಡಿದೆ.

ನಮಿತಾ ಮನೆಯಲ್ಲಿ ಮದುವೆ ಸಂಭ್ರಮ

ಕಾಲಿವುಡ್ ನ ಹಾಟ್ 'ಬ್ಯೂಟಿ ನಮಿತಾ' ಮದುವೆ ನವೆಂಬರ್ 24 ರಂದು ನಡೆಯಲಿದೆ. ಇನ್ನೆರಡು ದಿನಗಳು ಬಾಕಿ ಇರುವ ಮದುವೆಗೆ ಎಲ್ಲಾ ತಯಾರಿ ನಡೆದಿದ್ದು, ನಟಿ ನಮಿತಾ ಮುಖದಲ್ಲಿ ವಧುವಿನ ಕಳೆ ಬಂದಿದೆ.

ಮೆಹೆಂದಿಯಿಂದ ಸಿಂಗಾರಗೊಂಡ ಕೈಗಳು

ನಮಿತಾ ತನ್ನ ಬಾಲ್ಯ ಗೆಳೆಯನಾದ ವೀರೇಂದ್ರ ರವರನ್ನ ಮದುವೆಯಾಗುತ್ತಿದ್ದು, ಇಬ್ಬರ ಮನೆಯಲ್ಲೂ ಒಪ್ಪಿಗೆ ಪಡೆದು ಸಂಪ್ರದಾಯ ಬದ್ಧವಾಗಿ ಮದುವೆ ನಡೆಯುತ್ತಿದೆ. ಈಗಾಗಲೇ ಮೆಹೆಂದಿ ಕಾರ್ಯಕ್ರಮ ನಡೆದಿದ್ದು, ಹಾಟ್ ಬ್ಯೂಟಿ ಕೈತುಂಬ ಮೆಹೆಂದಿ ಹಾಕಿಕೊಂಡು ಸಂತೋಷ ಪಟ್ಟಿದ್ದಾರೆ.

'ಚಿತ್ರರಂಗದ ಗಣ್ಯ'ರು ಭಾಗಿ

24ರಂದು ಮದುವೆಯಾಗಲಿರುವ ಜೋಡಿ ಇಂದು ತಮ್ಮ ಸ್ನೇಹಿತರಿಗಾಗಿ ಸಂಗೀತ್ ಪಾರ್ಟಿಯನ್ನ ಆಯೋಜಿಸಿದೆ. ಸಂಜೆ 7 ಗಂಟೆಗೆ ತಿರುಪತಿಯ ಖಾಸಗಿ ಹೋಟೆಲ್ ನಲ್ಲಿ ಸಂಗೀತ್ ನಡೆಯಲಿದ್ದು, ಪಾರ್ಟಿಯಲ್ಲಿ ಚಿತ್ರರಂಗದ ಸ್ನೇಹಿತರು ಮತ್ತು ಎರಡು ಕುಟುಂಬದ ಗಣ್ಯರು ಭಾಗಿಯಾಗಲಿದ್ದಾರೆ.

'ತಿಮ್ಮಪ್ಪ'ನ ಆಶೀರ್ವಾದ' ಪಡೆಯಲಿರೋ ಜೋಡಿ

ಅದೆಷ್ಟೇ ಪ್ರಖ್ಯಾತಿ ಪಡೆದರೂ ಕೂಡ, ನಮಿತಾ ಮತ್ತು ವೀರೇಂದ್ರ ತಮ್ಮ ಮದುವೆಯನ್ನ ತಿರುಪತಿಯಲ್ಲೇ ಮಾಡಿಕೊಳ್ಳಲು ನಿರ್ಧಾರ ಮಾಡಿದ್ದಾರೆ. ಕಾಲಿವುಡ್ ಹಾಗೂ ಟಾಲಿವುಡ್ ಸ್ಟಾರ್ ಗಳೆಲ್ಲರೂ ಇಷ್ಟಪಡುವ ಶ್ರೀ ವೆಂಕಟೇಶ್ವರ ಸನ್ನಿಧಿಯಲ್ಲಿ ನಮಿತಾ-ವೀರೇಂದ್ರ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ

ನಮಿತಾ ಮೆಹಂದಿ ಶಾಸ್ತ್ರದ ಹೆಚ್ಚಿನ ಫೋಟೋ ಮುಂದಿದೆ ನೋಡಿ

Read more about: namitha marriage ನಮಿತಾ
English summary
Marriage Preparation in Actress Namitha house. ಇದೇ ತಿಂಗಳ 24 ರಂದು ನಡೆಯಲಿರೋ ನಟಿ ನಮಿತಾ ಮದುವೆಗೆ ಸಖಲ ತಯಾರಿ ನಡೆದಿದೆ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada