»   » 'ಲವ್ ಯೂ ಆಲಿಯಾ'ಗೆ ನಿಖಿಶಾ ಪಟೇಲ್ ಎಂಟ್ರಿ

'ಲವ್ ಯೂ ಆಲಿಯಾ'ಗೆ ನಿಖಿಶಾ ಪಟೇಲ್ ಎಂಟ್ರಿ

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ಸ್ಟೈಲಿಶ್ ನಿರ್ದೇಶಕ ಎಂದು ಗುರುತಿಸಿಕೊಂಡವರು ಇಂದ್ರಜಿತ್ ಲಂಕೇಶ್. ಚಿತ್ರವೊಂದಕ್ಕೆ ಹೇಗೆಲ್ಲಾ ಪ್ರಚಾರ ನೀಡಬಹುದು, ಏನೆಲ್ಲಾ ತಂತ್ರಗಳನ್ನು ಬಳಸಬಹುದು ಎಂಬುದನ್ನು ಅರಿತ ಕೆಲವೇ ಕೆಲವು ನಿರ್ದೇಶಕರಲ್ಲಿ ಒಬ್ಬರು.

ಇಂದ್ರಜಿತ್ ನಿರ್ದೇಶನದ 'ಲವ್ ಯೂ ಆಲಿಯಾ' ಚಿತ್ರ ಆರಂಭದಿಂದಲೂ ಸದ್ದು ಮಾಡುತ್ತಿದ್ದು ಚಿತ್ರೀಕರಣ ಭರದಿಂದ ಸಾಗುತ್ತಿದೆ. ಇದೀಗ ಚಿತ್ರಕ್ಕೆ ಹೊಸದಾಗಿ ಎಂಟ್ರಿ ಕೊಡುತ್ತಿದ್ದಾರೆ ಚೆಂದುಳ್ಳಿ ಚೆಲುವೆ ನಿಖಿಶಾ ಪಟೇಲ್. ಚಿತ್ರದಲ್ಲಿ ಅವರದು ಅತಿಥಿ ಪಾತ್ರವಂತೆ. [ತುಂಡುಡುಗೆಯಲ್ಲಿ ಹುಟ್ಟುಮಚ್ಚೆ ಪ್ರದರ್ಶಿಸಿದ ನಿಕೇಶಾ]

ಕ್ರೇಜಿಸ್ಟಾರ್ ರವಿಚಂದ್ರನ್, ಭೂಮಿಕಾ ಚಾವ್ಲಾ, ಚಂದನ್ ಮುಖ್ಯಭೂಮಿಕೆಯಲ್ಲಿರುವ ಚಿತ್ರ ಇದಾಗಿದೆ. ಹಲವು ತಾರೆಗಳ, ಹಲವು ವಿಶೇಷಗಳ ಸಂಗಮ 'ಲವ್ ಯೂ ಆಲಿಯಾ' ಚಿತ್ರ ಎನ್ನಬಹುದು. ಇಂದ್ರಜಿತ್ ಲಂಕೇಶ್ ಅವರ ಪುತ್ರ ಸಮರ್ ಜಿತ್ ಸಹ ಚಿತ್ರದಲ್ಲಿ ಕಾಣಿಸಲಿದ್ದಾರೆ.


ಇನ್ನು ನಿಖಿಶಾ ಪಟೇಲ್ ವಿಚಾರಕ್ಕೆ ಬರುವುದಾದರೆ, ಇವರು ಈ ಹಿಂದೆ ನಮಸ್ತೇ ಮೇಡಂ, ವರದನಾಯಕ, ಡಕೋಟಾ ಪಿಕ್ಚರ್ ಹಾಗೂ ನರಸಿಂಹ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅವರ ಅಭಿನಯದ 'ಅಲೋನ್' ಚಿತ್ರ ಇನ್ನಷ್ಟೇ ತೆರೆಕಾಣಬೇಕಾಗಿದೆ.

ಯುಕೆಯಲ್ಲಿ ಹುಟ್ಟಿದ ನಿಖಿಶಾ ಅವರು ಬ್ರಿಟಿಷ್ ಇಂಡಿಯನ್ ಮಾಡೆಲ್ ಆಗಿ ಗುರುತಿಸಿಕೊಂಡವರು. ಬಿಬಿಸಿ ಟಿವಿ ಶೋಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಈ ತಾರೆ ತೆಲುಗಿನ 'ಪುಲಿ' ಚಿತ್ರದ ಮೂಲಕ ಬೆಳ್ಳಿತೆರೆಗೆ ಅಡಿಯಿಟ್ಟರು. ಹೆಚ್ಚಾಗಿ ಕನ್ನಡ ಚಿತ್ರಗಳಲ್ಲಿ ಅಭಿನಯಿಸಿರುವುದು ವಿಶೇಷ.

ಲವ್ ಯೂ ಆಲಿಯಾ ಚಿತ್ರದ ಒಂದು ವಿಶೇಷ ಪಾತ್ರದಲ್ಲಿ ಶಕೀಲಾ ಸಹ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ನಿಖಿಶಾ ಪಟೇಲ್ ಹೊಸ ಎಂಟ್ರಿ ಎನ್ನಬಹುದು. ಈ ಚಿತ್ರದ ಉಳಿದ ಪಾತ್ರವರ್ಗದಲ್ಲಿ ಸಯ್ಯಾಜಿ ಶಿಂಧೆ, ಬುಲೆಟ್ ಪ್ರಕಾಶ್, ರವಿಶಂಕರ್ ಸೇರಿದಂತೆ ಮುಂತಾದವರಿದ್ದಾರೆ. ಫೆಬ್ರವರಿ ತಿಂಗಳಲ್ಲಿ ಆಡಿಯೋ ಬಿಡುಗಡೆಗೆ ಪ್ಲಾನ್ ಮಾಡಲಾಗಿದೆ. (ಏಜೆನ್ಸೀಸ್)

English summary
After 'Namaste Madam' charming heroine Nikesha Patel again enters to Sandalwood. This time Nikesha to play a guest role in Indrajith Lankesh's 'Love You Aliya', in which V Ravichandran, Bhumika Chawla, Chandan in the lead.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada