For Quick Alerts
  ALLOW NOTIFICATIONS  
  For Daily Alerts

  ಪಾರೂಲ್ ಈಗ ಸೋಲೋ ಹೀರೋಯಿನ್

  By Rajendra
  |

  ಪರುಲ್ ಯಾದವ್ ಅನ್ನೋ ನಟಿಯನ್ನ ನಾವು ಒಬ್ಬ ಸ್ಟಾರ್ ನಟಿಯಂತೆ ನೋಡ್ತೀವಿ. ಯಾಕಂದ್ರೆ ಪರೂಲ್ ಅಭಿನಯಿಸಿದ ಮೊದಲ ಸಿನಿಮಾನೇ ಸೂಪರ್ ಡ್ಯೂಪರ್ ಹಿಟ್. 'ಗೋವಿಂದಾಯ ನಮಃ'ದಲ್ಲಿ ಕನ್ನಡದ ಮೇಲೆ ಪರುಲ್ ಗೆ, ಪರುಲ್ ಮೇಲೆ ಕನ್ನಡ ಚಿತ್ರಪ್ರೇಮಿಗಳಿಗೆ ಪ್ಯಾರ್ಗೆ ಆಗ್ಬಿಟ್ಟಿದೆ. ಅಲ್ಲಿಂದ ಈ ಚೆಲುವೆ ಅಭಿನಯಿಸಿದ್ದು ಕೂಡ ದೊಡ್ಡ ಸಿನಿಮಾಗಳಲ್ಲೇ.

  ಕಿಚ್ಚ ಸುದೀಪ್ ಅಭಿನಯದ 'ಬಚ್ಚನ್' ಸಿನಿಮಾದಲ್ಲಿ ಚಮ್ಮಕ್ ಚಲ್ಲೋ ಆಗಿ ಪಾರುಲ್ ಮೋಡಿ ಮಾಡಿದರು. ಬಹು ಬೇಡಿಕೆಯ ನಟಿಯಾದರು. ನಟನೆಗೆ ಸಮನಾಗಿ ಗ್ಲಾಮರನ್ನೂ ತುಂಬಿಕೊಂಡಿರೋ ಈ ಬ್ಯೂಟಿಗೆ ಸಿಕ್ಕಾಪಟ್ಟೆ ಬೇಡಿಕೆ ಇದೆ. ಕಿಚ್ಚ ಸುದೀಪ್ ನಂತ್ರ ದುನಿಯಾ ವಿಜಯ್ಗೆ ಜೋಡಿಯಾಗಿ ಶಿವಾಜಿನಗರದಲ್ಲಿ ಚಿಂದಿ ಉಡಾಯಿಸಲಿದ್ದಾರೆ.

  ಇತ್ತೀಚೆಗೆ 'ಶ್ರಾವಣಿ ಸುಬ್ರಹ್ಮಣ್ಯ' ಸಿನಿಮಾದಲ್ಲಿ ಪಾರೂಲ್ ಪಡ್ಡೆಗಳ ಎದೆಗೆ ಕಿಚ್ಚು ಹಚ್ಚಿದರು ಈ ಹಾಟ್ ಡಾಲ್. ಆದರೆ ಪಾರುಲ್ ಅಂತಹಾ ಸ್ಟಾರ್ ನಟರಿಗೆ ಜೋಡಿಯಾದ್ರೂ 'ಶಿವಾಜಿನಗರ' ಚಿತ್ರ ಅವರ ಮೊದಲ ಸೋಲೋ ಹೀರೋಯಿನ್ ಸಿನಿಮಾ.

  ಹಾಗಾಗಿ ಸಹಜವಾಗೇ ಒಂದು ಕಡೆ ಖುಷಿ ಇದ್ರೆ ಮತ್ತೊಂದು ಕಡೆ ಭಯ ಇದೆಯಂತೆ. ಪಾರುಲ್ ಕೂಡ ಕನ್ನಡ ಬಿಟ್ಟು ಎಲ್ಲೂ ಹೋಗಲ್ಲ ಅಂತ ಹೇಳಿದ್ದಾರೆ. ಏನೇ ಆಗ್ಲಿ ಈ ಬಿಹಾರಿ ಮೂಲದ ಬೆಡಗಿ ಮತ್ತೆ ಮತ್ತೆ ಗೆಲ್ಲೋ ಹೀರೋಯಿನ್ನಾಗ್ಲಿ. (ಏಜೆನ್ಸೀಸ್)

  English summary
  Actress Parul Yadav is now solo heroine In Shivajinagara, she plays a Kannada Brahmin girl, clad in langa dhavani. But the actress, who has been the recipient of style icon awards in the industry, was not entirely deglam in the film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X