»   » 'ಟ್ವಿಟ್ಟರ್'ನಲ್ಲಿ ಸುದೀಪ್ ಗಿಂತ ಈ ನಟಿಗೆ ಫಾಲೋವರ್ಸ್ ಜಾಸ್ತಿ

'ಟ್ವಿಟ್ಟರ್'ನಲ್ಲಿ ಸುದೀಪ್ ಗಿಂತ ಈ ನಟಿಗೆ ಫಾಲೋವರ್ಸ್ ಜಾಸ್ತಿ

Posted By:
Subscribe to Filmibeat Kannada

ಕನ್ನಡದ ಆರಡಿ ಕಟೌಟ್, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಟ್ವಿಟ್ಟರ್ ಫಾಲೋವರ್ಸ್ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಆಗಸ್ಟ್ 17ನೇ ದಿನಕ್ಕೆ ಸುದೀಪ್ ಅವರ ಫಾಲೋವರ್ಸ್ ಸಂಖ್ಯೆ 9 ಲಕ್ಷದ ಗಡಿ ದಾಟಿದೆ. ಒಂದು ತಿಂಗಳ ಹಿಂದೆ ಅಂದ್ರೆ, ಜುಲೈ 16ಕ್ಕೆ ಸುದೀಪ್ ಫಾಲೋವರ್ಸ್ ಸಂಖ್ಯೆ 8 ಲಕ್ಷವಿತ್ತು.

ಕೇವಲ ಒಂದು ತಿಂಗಳಲ್ಲಿ ಬರೋಬ್ಬರಿ ಒಂದು ಲಕ್ಷಕ್ಕಿಂತ ಹೆಚ್ಚು ಜನ ಕಿಚ್ಚನ ಫಾಲೋವರ್ಸ್ ಹೆಚ್ಚಾಗಿದ್ದಾರೆ. ಬಹುಶಃ ಕನ್ನಡದ ಮಟ್ಟಿಗೆ ಟ್ವಿಟ್ಟರ್ ನಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ನಟ ಅಂದ್ರೆ ಸುದೀಪ್ ಎನ್ನಬಹುದು.

ಮಿಂಚಿನ ವೇಗದಲ್ಲಿ ಬೆಳೆಯುತ್ತಿದೆ ಕಿಚ್ಚ ಸುದೀಪ್ ಫಾಲೋವರ್ಸ್ ಸಂಖ್ಯೆ!

ಅಚ್ಚರಿ ಅಂದ್ರೆ ಸುದೀಪ್ ಅವರಿಗಿಂತ, ಸುದೀಪ್ ಜೊತೆಯಲ್ಲಿ ನಟಿಸಿದ್ದ ನಟಿಯೊಬ್ಬರಿಗೆ ಟ್ವಿಟ್ಟರ್ ನಲ್ಲಿ ಫಾಲೋವರ್ಸ್ ಹೆಚ್ಚಿದ್ದಾರೆ. ಹೀಗಾಗಿ, ಟ್ವಿಟ್ಟರ್ ನಲ್ಲಿ ಈ ನಟಿಯ ಖ್ಯಾತಿ ಕೂಡ ಸುದೀಪ್ ಅವರಷ್ಟೆ ಹೆಚ್ಚಿದೆ. ಯಾರುದು? ಮುಂದೆ ಓದಿ.....

ಇವರೇ ಈ ನಟಿ

ಸುದೀಪ್ ಗಿಂತ ಹೆಚ್ಚು ಟ್ವಿಟ್ಟರ್ ಫಾಲೋವರ್ಸ್ ಹೊಂದಿರುವ ನಟಿ ಪ್ರಿಯಾಮಣಿ. ಸುದೀಪ್ ಟ್ವಿಟ್ಟರ್ ಫಾಲೋವರ್ಸ್ ಸಂಖ್ಯೆ 9 ಲಕ್ಷ 85 ಸಾವಿರವಿದೆ. ಆದ್ರೆ, ನಟಿ ಪ್ರಿಯಾಮಣಿಯ ಫಾಲೋವರ್ಸ್ ಕಿಚ್ಚನಿಗಿಂತ ಹೆಚ್ಚಿದೆ.

ಟ್ವಿಟ್ಟರ್ ನಲ್ಲಿ ಕಿಚ್ಚ ಸುದೀಪ್ ಗೆ 8 ಲಕ್ಷ ಫಾಲೋವರ್ಸ್ .!

ಪ್ರಿಯಾಮಣಿ ಫಾಲೋವರ್ಸ್ ಎಷ್ಟು?

ಬಹುಭಾಷಾ ನಟಿ ಪ್ರಿಯಾಮಣಿ ಅವರು ಟ್ವಿಟ್ಟರ್ ಫಾಲೋವರ್ಸ್ ಸಂಖ್ಯೆ 11 ಲಕ್ಷದ 20 ಸಾವಿರ ಜನ ಇದ್ದಾರೆ. ಈ ಮೂಲಕ ಸುದೀಪ್ ಅವರಿಗಿಂತ ಮುಂದಿದ್ದಾರೆ.

ಸುದೀಪ್ ಜೊತೆಯಲ್ಲಿ ನಟನೆ

ಪ್ರಿಯಾಮಣಿ ಮತ್ತು ಸುದೀಪ್ ಇಬ್ಬರು ಒಟ್ಟಿಗೆ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. 'ವಿಷ್ಣುವರ್ಧನ' ಚಿತ್ರದಲ್ಲಿ ಸುದೀಪ್ ಜೊತೆ ಪ್ರಿಯಾಮಣಿ ತೆರೆ ಹಂಚಿಕೊಂಡಿದ್ದಾರೆ.

Sudeep is not acting in Chiranjeevi's 151st movie

ಇಬ್ಬರು ಬಹುಭಾಷಾ ಕಲಾವಿದರು

ಪ್ರಿಯಾಮಣಿ ಕನ್ನಡ, ತಮಿಳು, ತೆಲುಗು, ಮಲಯಾಳಂ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಮತ್ತೊಂದೆಡೆ ಸುದೀಪ್ ಕೂಡ ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿಯಲ್ಲಿ ಅಭಿನಯಿಸಿದ್ದಾರೆ.

ಕನ್ನಡದ ಈ ನಟನನ್ನು ನಿರ್ದೇಶಕ ರಾಜಮೌಳಿ ಫಾಲೋ ಮಾಡ್ತಿದ್ದಾರೆ..!

English summary
Kannada Actress Priyamani Have 1.12 million Followers In Her Twitter Account.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada