Just In
Don't Miss!
- News
ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಶಾಸಕಾಂಗ ಸಭೆ ನಿರ್ಣಯಗಳು
- Automobiles
ಹೊಸ ರೂಪದೊಂದಿಗೆ ರಸ್ತೆಗಿಳಿಯಲಿವೆ ತೆರೆಮರೆಗೆ ಸರಿದ ಜಟಕಾ ಬಂಡಿ
- Sports
ಐಪಿಎಲ್: ಫೈನಲ್ಗಾಗಿ ನಾರ್ಥ್ ಈಸ್ಟ್, ಬಾಗನ್ ನಡುವೆ ಫೈನಲ್ ಫೈಟ್
- Lifestyle
ಮಾ.11ಕ್ಕೆ ಕುಂಭ ರಾಶಿಗೆ ಬುಧನ ಪ್ರವೇಶ: ನಿಮ್ಮ ಬದುಕಿನಲ್ಲಿ ಆಗಲಿದೆ ಈ ಬದಲಾವಣೆ
- Finance
ಅಡಿಕೆ, ಕಾಫೀ, ಮೆಣಸು ಹಾಗೂ ರಬ್ಬರ್ನ ಮಾ. 08ರ ಮಾರುಕಟ್ಟೆ ದರ ಇಲ್ಲಿದೆ
- Education
Indian Postal Circle Recruitment 2021: 1421 ಬಿಪಿಎಂ, ಅಬಿಪಿಎಂ ಮತ್ತು ದಖ್ ಸೇವಕ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
8 ವರ್ಷದ ಬಳಿಕ ತವರಿಗೆ ಮರಳಿದ ಸಂಭ್ರಮದಲ್ಲಿ ಪ್ರಿಯಾಂಕಾ ಉಪೇಂದ್ರ
ಸ್ಯಾಂಡಲ್ ವುಡ್ ನ ಖ್ಯಾತ ನಟಿ ಪ್ರಿಯಾಂಕಾ ಉಪೇಂದ್ರ ಸದ್ಯ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಗ್ಯಾಪ್ ನ ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿರುವ ಪ್ರಿಯಾಂಕಾ ಮತ್ತೊಂದು ಸಿಹಿ ಸುದ್ದಿ ಹಂಚಿಕೊಂಡಿದ್ದಾರೆ. ಹೌದು, ಪ್ರಿಯಾಂಕಾ 8 ವರ್ಷದ ಬಳಿಕ ತನ್ನ ತವರಿಗೆ ಮರಳುತ್ತಿದ್ದಾರೆ.
ಅಂದರೆ ಪ್ರಿಯಾಂಕಾ ತನ್ನ ಕುಟುಂಬದವರನ್ನು ಭೇಟಿ ಮಾಡಲು ಹೋಗುತ್ತಿಲ್ಲ. 8ವರ್ಷದ ಬಳಿಕ ಪ್ರಿಯಾಂಕಾ ಬೆಂಗಾಲಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಬಗ್ಗೆ ಪ್ರಿಯಾಂಕಾ ಸಖತ್ ಎಕ್ಸಾಯಿಟ್ ಆಗಿದ್ದಾರೆ. ಪ್ರಿಯಾಂಕಾ ಬೆಂಗಾಲಿ ಸಿನಿಮಾಗೆ ಸಾಗ್ನಿಕ್ ಚಟರ್ಜಿ ನಿರ್ದೇಶನದ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ಪ್ರಿಯಾಂಕಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.
'1980' ಸಿನಿಮಾದ ಶೂಟಿಂಗ್ ಮುಗಿಸಿದ ನಟಿ ಪ್ರಿಯಾಂಕಾ ಉಪೇಂದ್ರ

ಮಾಸ್ಟರ್ ಅನ್ಶುಮಾನ್ ಸಿನಿಮಾದಲ್ಲಿ ಪ್ರಿಯಾಂಕಾ
ಪ್ರಿಯಾಂಕಾ ಬೆಂಗಾಲಿ ಚಿತ್ರಕ್ಕೆ 'ಮಾಸ್ಟರ್ ಅನ್ಶುಮಾನ್' ಎಂದು ಟೈಟಲ್ ಇಡಲಾಗಿದೆ. ವಿಶೇಷ ಎಂದರೆ ಮಾಸ್ಟರ್ ಅನ್ಶುಮಾನ್ ಐಕಾನಿಕ್ ನಿರ್ದೇಶಕ ಸತ್ಯಜಿತ್ ರೇ ಅವರ ಕಾದಂಬರಿ. ಅವರ ಕಾದಂಬರಿಯನ್ನು ಅದೇ ಹೆಸರಿನಲ್ಲಿ ಸಿನಿಮಾ ಮಾಡುತ್ತಿದ್ದಾರೆ ನಿರ್ದೇಶಕ ಸಾಗ್ನಿಕ್ ಚಟರ್ಜಿ.

ಖ್ಯಾತ ನಟ ಜೀತ್ ಜೊತೆ ತೆರೆಹಂಚಿಕೊಂಡಿದ್ದ ಪ್ರಿಯಾಂಕಾ
ಪ್ರಿಯಾಂಕಾ ಕೊನೆಯದಾಗಿ ಬೆಂಗಾಲಿಯಲ್ಲಿ ಖ್ಯಾತ ನಟ ಜೀತ್ ಅವರ ಜೊತೆ ತೆರೆಹಂಚಿಕೊಂಡಿದ್ದರು. ಅನೇಕ ವರ್ಷಗಳ ನಂತರ ಮತ್ತೆ ಬೆಂಗಾಲಿಯಲ್ಲಿ ಮಿಂಚಲು ಸಜ್ಜಾಗಿದ್ದಾರೆ. ನಿರ್ದೇಶಕ ಸಾಗ್ನಿಕ್ ಸಿನಿಮಾದ ಬಗ್ಗೆ ವಿವರಣೆ ನೀಡಿದ ತಕ್ಷಣ ಗ್ರೀನ್ ಸಿಗ್ನಿಲ್ ನೀಡಿರುವುದಾಗಿ ಪ್ರಿಯಾಂಕಾ ಹೇಳಿದ್ದಾರೆ.
ಪ್ರಿಯಾಂಕಾ ಉಪೇಂದ್ರ ಕೈಯಲ್ಲಿ ಲಾಂಗ್ ಕೊಟ್ಟ ನಿರ್ದೇಶಕ

ಲುಕ್ ಟೆಸ್ಟ್ ಮಾಡಿಸಿರುವ ಪ್ರಿಯಾಂಕಾ
ರಾಷ್ಟ್ರಪ್ರಶಸ್ತಿ ವಿಜೇತ ಸಾಗ್ನಿಕ್ ಅವರ ಜೊತೆ ಕೆಲಸ ಮಾಡಲು ಉತ್ಸುಕಳಾಗಿರುವುದಾಗಿ ಪ್ರಿಯಾಂಕಾ ಹೇಳಿದ್ದಾರೆ. ಚಿತ್ರದಲ್ಲಿ ಪ್ರಿಯಾಂಕಾ ಬೆಂಗಾಲಿಯ ಖ್ಯಾತ ನಟಿ ಮಧಾಬಿ ಸೇನ್ ಜೊತೆ ನಟಿಸುತ್ತಿದ್ದಾರೆ. ಈಗಾಗಲೇ ಕಲ್ಕತ್ತಾ ತಲುಪಿರುವ ಪ್ರಿಯಾಂಕಾ ಪಾತ್ರದ ಲುಕ್ ಟೆಸ್ಕ್ ಮಾಡಿಸಿದ್ದಾರೆ. ಇನ್ನು ಕೊಲ್ಕತ್ತಾಗೆ ತೆರಳಿರುವ ಪ್ರಿಯಾಂಕಾ ಬಹಳ ಸಮಯದ ನಂತರ ಅವರ ತಾಯಿ ಮತ್ತು ಸಹೋದರರನ್ನು ಭೇಟಿಯಾಗುತ್ತಿದ್ದಾರೆ.

ಅನ್ಶುಮಾನ್ ಎನ್ನುವ ಹುಡುಗನ ಕಥೆ
ಚಿತ್ರದಲ್ಲಿ ಬೆಂಗಾಲಿಯ ಖ್ಯಾತ ಕಲಾವಿದರು ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರ ಅನ್ಶುಮಾನ್ ಎನ್ನುವ ಹುಡುಗನ ಬಗ್ಗೆ ಇರುವ ಕಥೆಯಾಗಿದೆ. ಆತ ಕಿರು ಚಿತ್ರ ಮಾಡುವ ಉದ್ದೇಶದಿಂದ ಮೊದಲ ಬಾರಿಗೆ ಮನೆ ಬಿಟ್ಟು ಹೋಗುತ್ತಾನೆ. ಸಿನಿಮಾದ ಚಿತ್ರೀಕರಣ ಡಾರ್ಜೀಲಿ೦ಗ್ ಮತ್ತು ಕಲ್ಕತ್ತಾದಲ್ಲಿ ನಡೆಯಲಿದ್ದು, ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭವಾಗಿದೆ.