»   » ಯಶ್, ಉಪ್ಪಿ, ವಿಷ್ಣು ನಂತರ ಶಕ್ತಿದೇವತೆ ಮೊರೆ ಹೋದ ರಚಿತಾ ರಾಮ್

ಯಶ್, ಉಪ್ಪಿ, ವಿಷ್ಣು ನಂತರ ಶಕ್ತಿದೇವತೆ ಮೊರೆ ಹೋದ ರಚಿತಾ ರಾಮ್

Posted By:
Subscribe to Filmibeat Kannada

ಎಂತಹ ಸ್ಟಾರ್ ಗಳೇ ಆದರೂ ಗುರುಗಳು ಹಾಗೂ ದೇವರ ಭಕ್ತರಾಗಿರುತ್ತಾರೆ. ಅದೇ ರೀತಿಯಲ್ಲಿ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಕಲಾವಿದರು ಶಕ್ತಿದೇವತೆಗಳ ಪೂಜಿಸುತ್ತಾ ಬಂದಿದ್ದಾರೆ. ಹ್ಯಾಟ್ರಿಕ್ ಹೀರೋ ಶಿಂಷಾ ಮಾರಮ್ಮ ದೇವಿಯನ್ನ ಪೂಜೆ ಮಾಡಿದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೈಸೂರಿನ ಚಾಮುಂಡೇಶ್ವರಿಯನ್ನ ಪೂಜಿಸುತ್ತಾರೆ.

ಇನ್ನು ಅನೇಕ ಸ್ಟಾರ್ ಗಳ ಆರಾಧ್ಯ ದೈವ ಆಗಿರುವ ಈ ದೇವತೆಯ ಮೊರೆ ಹೋಗಿದ್ದಾರೆ ಚಂದನವನದ ಡಿಂಪಲ್ ಕ್ವೀನ್ ರಚಿತಾ ರಾಮ್. ತುಮಕೂರಿನ ಬಳಿ ಇರುವ ದಸರಿಘಟ್ಟದಲ್ಲಿರುವ ಚೌಡೇಶ್ವರಿ ದೇವಿಯ ದೇವಾಸ್ಥಾನಕ್ಕೆ ರಚಿತಾ ರಾಮ್ ಇತ್ತಿಚಿಗಷ್ಟೇ ಭೇಟಿ ಕೊಟ್ಟಿದ್ದಾರೆ.

Actress Rachita Ram visited the Dasarighatta Temple in Tumkur

ವಿಶ್ವಮಟ್ಟದಲ್ಲಿ ಪ್ರಖ್ಯಾತಿ ಪಡೆದಿರುವ ದರಸಿಘಟ್ಟ ಚೌಡೇಶ್ವರಿ ದೇವಿಯ ಮೊರೆ ಹೋಗಿರೋ ರಚಿತಾ ರಾಮ್ ತಮ್ಮ ವೈಯಕ್ತಿಕ ವಿಚಾರಗಳ ಬಗ್ಗೆ ದೇವಿಯ ಪೂಜೆ ಮಾಡುವ ಅರ್ಚಕರ ಬಳಿ ಮಾತನಾಡಿದ್ದಾರಂತೆ.

ದಚ್ಚು ಚಿತ್ರಕ್ಕೆ ಮತ್ತೆ ರಚ್ಚುನೇ ನಾಯಕಿ

Actress Rachita Ram visited the Dasarighatta Temple in Tumkur

ರಚಿತಾ ರಾಮ್ ಅವರಿಗೂ ಮುಂಚೆ ಸಾಕಷ್ಟು ಸ್ಟಾರ್ ಕಲಾವಿದರು ಈ ದೇವಾಲಯಕ್ಕೆ ಬೇಟಿ ಕೊಟ್ಟಿದ್ದಾರೆ. ಶಕ್ತಿದೇವತೆ ಎಂದೇ ಪ್ರಖ್ಯಾತಿ ಪಡೆದಿರುವ ಧಸರಿಘಟ್ಟದ ದೇವಾಲಯಕ್ಕೆ ಯಶ್ಮ ಉಪೇಂದ್ರ ಹಾಗೂ ಮೈಸೂರಿನ ಮಹಾರಾಜರು, ಪ್ರಧಾನಿ ನರೇಂದ್ರ ಮೋದಿ ಇನ್ನೂ ಅನೇಕರು ಬಂದು ದೇವಿಗೆ ಪೂಜೆ ಸಲ್ಲಿಸಿದ್ದಾರೆ.

English summary
kannada film Actress Rachita Ram visited the Dasarighatta Temple in Tumkur. Earlier actor Yash and the Maharaja of Mysore visited Dasarighatta

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X