ಲೈಂಗಿಕ ದೌರ್ಜನ್ಯದ ಬಗ್ಗೆ ರಾಗಿಣಿ, ಪ್ರಣೀತಾ ಮಾತು

ಚಿತ್ರರಂಗದಲ್ಲಿ ನಡೆಯುವ ಲೈಂಗಿಕ ದೌರ್ಜನ್ಯದ ಬಗ್ಗೆ ಕನ್ನಡ ನಟಿಯರು ಕೂಡ ಧೈರ್ಯವಾಗಿ ಮಾತನಾಡುತ್ತಿದ್ದಾರೆ. ಇದೀಗ ನಟಿ ರಾಗಿಣಿ ದ್ವಿವೇದಿ ಹಾಗೂ ಪ್ರಣೀತಾ ಈ ಬಗ್ಗೆ ಮೌನ ಮುರಿದಿದ್ದಾರೆ.

ಬಾಲಿವುಡ್ ನಲ್ಲಿ ದೊಡ್ಡ ಸುದ್ದಿ ಮಾಡಿದ್ದ ಮೀಟೂ ಅಭಿಯಾನ ಕನ್ನಡಕ್ಕೆ ಕೂಡ ಬಂದಿತ್ತು. ಈಗಾಗಲೇ ಈ ಬಗ್ಗೆ ನಟಿ ಸಂಗೀತ ಭಟ್, ಐಂದ್ರಿತಾ ರೇ, ಶೃತಿ ಹರಿಹರನ್ ಮಾತನಾಡಿದ್ದಾರೆ. ಈಗ ಈ ಅಭಿಯಾನದ ಬಗ್ಗೆ ರಾಗಿಣಿ ಹಾಗೂ ಪ್ರಣೀತಾ ಸಹ ಹೇಳಿಕೆ ನೀಡಿದ್ದಾರೆ.

ಸ್ಯಾಂಡಲ್ ವುಡ್ ನಲ್ಲಿ ಸದ್ಯ ಮೀಟೂ ಅಭಿಯಾನ ದೊಡ್ಡ ಚರ್ಚೆ ಹುಟ್ಟು ಹಾಕಿದೆ. ಅದಕ್ಕೆ ಈ ಇಬ್ಬರು ನಟಿಯರು ಧ್ವನಿಗೂಡಿಸಿದ್ದಾರೆ. ಮುಂದೆ ಓದಿ..

ಗಿಮಿಕ್ ಆಗಿ ತೆಗೆದುಕೊಳ್ಳಬಾರದು

ಗಿಮಿಕ್ ಆಗಿ ತೆಗೆದುಕೊಳ್ಳಬಾರದು

''ನಾನು ಚಿತ್ರರಂಗಕ್ಕೆ ಬಂದು 10 ವರ್ಷವಾಯ್ತು. ನನಗೆ ಇದುವರೆಗೆ ಈ ರೀತಿಯ ತೊಂದರೆ ಆಗಿಲ್ಲ. ಇದನ್ನು ‌ಪ್ರಚಾರದ ಗಿಮಿಕ್ ಆಗಿ ತೆಗೆದುಕೊಳ್ಳಬಾರದು. ಕೆಲವು ಘಟನೆಗಳನ್ನ ನೋಡಿದಾಗ ಇದನ್ನ ಪ್ರಚಾರಕ್ಕೆ ತೆಗೆದುಕೊಳ್ಳುತ್ತಿದ್ದಾರೆಂದು ತಿಳಿಯಲಾಗುತ್ತೆ. '' - ರಾಗಿಣಿ ದ್ವಿವೇದಿ, ನಟಿ

ಒಳ್ಳೆಯ ಉದ್ದೇಶಕ್ಕಾಗಿ ಅಭಿಯಾನ ಪ್ರಾರಂಭವಾಗಿದೆ

ಒಳ್ಳೆಯ ಉದ್ದೇಶಕ್ಕಾಗಿ ಅಭಿಯಾನ ಪ್ರಾರಂಭವಾಗಿದೆ

''ಒಳ್ಳೆಯ ಉದ್ದೇಶಕ್ಕಾಗಿ ಇದೊಂದು ಅಭಿಯಾನ ಪ್ರಾರಂಭವಾಗಿದೆ. ಈ ರೀತಿ ತೊಂದರೆಗೆ ಸಿಲುಕಿದವರು ಮುಂದೆ ಬಂದು‌ ಮಾತನಾಡಿ. ಇದಕ್ಕೆ ನನ್ನ ಬೆಂಬಲವಿದೆ. ಶೋಷಣೆಗೆ ಒಳಗಾದವರು ಮುಂದೆ ಬಂದು ಹೇಳಿಕೆ ನೀಡುತ್ತಿರುವುದು ಸ್ವಾಗತಾರ್ಹ. ಸಮಾಜದಲ್ಲಿ ಇದರಿಂದ ಒಂದು ಉತ್ತಮ ಬದಲಾವಣೆ ತರಲು ಸಾಧ್ಯ.'' - ರಾಗಿಣಿ ದ್ವಿವೇದಿ, ನಟಿ

ಒಂದು ವೇದಿಕೆ ಇರಲಿಲ್ಲ

ಒಂದು ವೇದಿಕೆ ಇರಲಿಲ್ಲ

''ಮೀಟೂ ಅಭಿಯಾನದ ಮೂಲಕ ಎಲ್ಲ ಹೆಣ್ಣು ಮಕ್ಕಳಿಗೆ ಒಂದು ಧ್ವನಿ ಸಿಕ್ಕಂತಾಗಿದೆ. ಇಷ್ಟು ದಿನ ಒಂದು ವೇದಿಕೆ ಇರಲಿಲ್ಲ. ಈಗ ಆ ರೀತಿಯ ಅನುಭವ ಆಗಿರುವವರು ಮುಂದೆ ಬಂದು ಹೇಳಿಕೊಳ್ಳಲು ಒಂದು ಶಕ್ತಿ ಸಿಕ್ಕಿದೆ.'' - ಪ್ರಣೀತಾ, ನಟಿ

ನನಗೆ ಲೈಂಗಿಕ ದೌರ್ಜನ್ಯದ ಅನುಭವಾಗಿಲ್ಲ

ನನಗೆ ಲೈಂಗಿಕ ದೌರ್ಜನ್ಯದ ಅನುಭವಾಗಿಲ್ಲ

''ನನಗೆ ಎಲ್ಲಿಯೂ ಲೈಂಗಿಕ ದೌರ್ಜನ್ಯದಂತಹ ಅನುಭವಾಗಿಲ್ಲ. ಮೀಟೂ ಬಂದ ಮೇಲೆ ಎಲ್ಲರೂ ಧೈರ್ಯವಾಗಿ ತಮ್ಮ ಕರಾಳ ಅನುಭವವನ್ನು ಹೊರ ಹಾಕುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ.'' - ಪ್ರಣೀತಾ, ನಟಿ

More from Filmibeat

English summary
Kannada actress Ragini Dwivedi and Praneetha spoke about Me Too movement.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X