Don't Miss!
- News
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪತ್ರ ನಕಲಿ ಎಂದ ಸಿದ್ದರಾಮಯ್ಯ.! ಆ ಪತ್ರದಲ್ಲಿ ಏನಿದೆ.?
- Sports
IND-W vs SA-W T20 Tri-series Final: ಭಾರತ ವನಿತೆಯರ ವಿರುದ್ಧ ದಕ್ಷಿಣ ಆಫ್ರಿಕಾಗೆ ಜಯ
- Lifestyle
ಮಗುವಿಗೆ ತುಂಬಾ ಜ್ವರ ಇದ್ದಾಗ ಏನು ಮಾಡಬೇಕು?
- Finance
6 ತಿಂಗಳಲ್ಲಿ 2ನೇ ಬಾರಿಗೆ ಉದ್ಯೋಗಿಗಳನ್ನು ವಜಾಗೊಳಿಸಿದ Byju's: ಈ ಬಾರಿ ಎಷ್ಟು ನೌಕರರು?
- Automobiles
ಭಾರತದಲ್ಲಿ ಮಾರುತಿ ಜಿಮ್ನಿ ಎಸ್ಯುವಿಗೆ ಭಾರೀ ಡಿಮ್ಯಾಂಡ್: ಪ್ರತಿಸ್ಪರ್ಧಿಗಳಿಗೆ ಹೆಚ್ಚಿದ ಆತಂಕ
- Technology
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸ್ಯಾಂಡಲ್‌ವುಡ್‌ನಿಂದ ಬಾಲಿವುಡ್‌ಗೆ ಹಾರಿದ ರಾಗಿಣಿ ದ್ವಿವೇದಿ: ಲಂಡನ್‌ನಲ್ಲಿ ಶೂಟಿಂಗ್!
ಇಷ್ಟು ದಿನ ರಾಗಿಣಿ ದ್ವಿವೇದಿ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದೇ ಹೆಚ್ಚು. ಹೆಚ್ಚು ಕಡಿಮೆ 13 ವರ್ಷಗಳಿಂದ ಸ್ಯಾಂಡಲ್‌ವುಡ್ ಸಿನಿಮಾಗಳಲ್ಲೇ ಹೆಚ್ಚಾಗಿ ನಟಿಸಿದ್ದರು. ಈಗ ತಮ್ಮ ವೃತ್ತಿ ಬದುಕಿನ ಮತ್ತೊಂದು ಹಂತಕ್ಕೆ ಏರಿದ್ದಾರೆ.
ಕನ್ನಡಕ್ಕಿಂತ
ತಮಿಳಿನಲ್ಲಿಯೇ
ರಾಗಿಣಿ
ಬ್ಯುಸಿ:
ಸ್ಯಾಂಡಲ್‌ವುಡ್
ಬಗ್ಗೆ
ಏನಂತಾರೆ
ತುಪ್ಪದ
ಬೆಡಗಿ?
ಹೌದು.. ರಾಗಿಣಿ ದ್ವಿವೇದಿ ಹಿಂದಿ ಸಿನಿಮಾವೊಂದರಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಈ ಸಿನಿಮಾದ ಫಸ್ಟ್ ಶೆಡ್ಯೂಲ್ ಶೂಟಿಂಗ್ ಕೂಡ ಮುಗಿದಿದೆ. ಅದೂ ಲಂಡನ್‌ನಲ್ಲಿ. ಮೊದಲ ಹಂತದ ಶೂಟಿಂಗ್ ಮುಗಿಸಿಕೊಂಡು ರಾಗಿಣಿ ಬೆಂಗಳೂರಿಗೆ ಮರಳಿದ್ದಾರೆ. ಈ ವೇಳೆ ಹೊಸ ಜರ್ನಿಯ ಬಗ್ಗೆ ರಾಗಿಣಿ ದ್ವಿವೇದಿ ಮನಬಿಚ್ಚಿ ಮಾತಾಡಿದ್ದಾರೆ.
ಅಂದ್ಹಾಗೆ ರಾಗಿಣಿ ದ್ವಿವೇದಿ ಹಿಂದಿ ಸಿನಿಮಾದ ಹೆಸರು 'ವಾಕ್ರೋ ಹೌಸ್'. ಇದೊಂದು ಹಾರರ್ ಕಮ್ ಥ್ರಿಲ್ಲರ್ ಸಿನಿಮಾ. ಹಿಂದಿಯಲ್ಲಿ ಯಶಸ್ವಿ ಸಿನಿಮಾಗಳನ್ನು ನಿರ್ದೇಶನ ಮಾಡಿರೋ ಆಯುರ್ ಶರ್ಮಾ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ರಾಗಿಣಿ ಲಂಡನ್ ಮೂಲದ ಲೇಖಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಈ ಸಿನಿಮಾ ಬಗ್ಗೆ ರಾಗಿಣಿ ಹೀಗಂತಾರೆ, " ಮೊದಲ ಹಂತದ ಶೂಟಿಂಗ್ ಲಂಡನ್‌ನಲ್ಲಿ ಮಾಡಲಾಗಿದೆ. ಈ ಸಿನಿಮಾದಲ್ಲಿ ನನ್ನೊಂದಿಗೆ ಪರಂವ್ಹಾ ಸೇರಿದಂತೆ ಒಳ್ಳೊಳ್ಳೆ ಕಲಾವಿದರು ನಟಿಸಿದ್ದಾರೆ. ನನ್ನ ಮೊದಲ ಹಿಂದಿ ಸಿನಿಮಾವೇ ಹಾರರ್ ಆಗಿದೆ. ಒಳ್ಳೆಯ ಕಥೆ ಹಾಗೂ ಪಾತ್ರ ಇದ್ದು, ಈ ಸಿನಿಮಾದಿಂದ ಖುಷಿಯಾಗಿದ್ದೇನೆ. ಈ ಹಿಂದಿ ಸಿನಿಮಾ ಮಾಡುತ್ತಿರೋದು ನಮ್ಮ ತಂದೆ-ತಾಯಿಗೂ ಖುಷಿ ಕೊಟ್ಟಿದೆ." ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
Star
Suvarna
Holi:
ಸ್ಟಾರ್
ಸುವರ್ಣದಲ್ಲಿ
ರಾಗಿಣಿ,
ಶುಭಾ
ಪೂಂಜಾ,
ಗುರುಕಿರಣ್
ಹೋಳಿ
ಹಬ್ಬ
ರಾಗಿಣಿ 2022ರಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದರು. ಕಳೆದ ವರ್ಷ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಿಂದಿಯಲ್ಲಷ್ಟೇ ಅಲ್ಲದೆ, ಮಲಯಾಳಂನಲ್ಲಿ ಒಂದು, ತಮಿಳು ಮೂರು ಹಾಗೂ ತೆಲುಗು ಒಂದು ಸಾಂಗ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯಕ್ಕೀಗ ಕನ್ನಡದಲ್ಲಿ 2 ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

"ಓಟಿಟಿ ಬಂದು ನಮ್ಮಂತ ಕಲಾವಿದರಿಗೆ ದೊಡ್ಡ ವೇದಿಕೆ ಆಗಿದೆ. ಕನ್ನಡದ 'ವಿಕ್ರಾಂತ್ ರೋಣ', 'ಕಾಂತಾರ' ಸಿನಿಮಾಗಳು ಆಸ್ಕರ್‌ಗೆ ಹೋಗಿದ್ದು ಖುಷಿ ಕೊಟ್ಟಿದೆ. 'ಕಾಂತಾರ' ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದು, ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದೆ. ಇದು ನಮ್ಮ ಹೆಮ್ಮೆ. ಹಲವೆಡೆ ಕಡೆ ಕನ್ನಡ ಇಂಡಸ್ಟ್ರಿ ಬಗ್ಗೆ ಒಳ್ಳೆ ಮಾತುಗಳನ್ನು ಆಡುತ್ತಾರೆ. ಈ ವರ್ಷ ಮಾರ್ಚ್‌ನಿಂದ ನನ್ನ ಸಿನಿಮಾಗಳು ಎಲ್ಲಾ ಭಾಷೆಯಿಂದ ಒಂದೊಂದು ರಿಲೀಸ್ ಆಗಬಹುದು." ಎಂದು ಭರವಸೆಯ ಮಾತುಗಳನ್ನಾಡಿದ್ದಾರೆ ರಾಗಿಣಿ.