For Quick Alerts
  ALLOW NOTIFICATIONS  
  For Daily Alerts

  ಮನೆಯಲ್ಲಿಯೇ ಕೇಕ್ ತಯಾರಿಸಿ ಸಂಭ್ರಮಿಸಿದ ಪ್ರೇಮ್ & ಟೀಂ: ಹ್ಯಾಪಿ ಬರ್ಥಡೇ ಕ್ರೇಜಿ ಕ್ವೀನ್

  |

  ಒಂದು ಕಾಲದಲ್ಲಿ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ, ಈಗಲೂ ಸಾವಿರಾರು ಅಭಿಮಾನಿಗಳನ್ನು ಹೊಂದಿರುವ ನಟಿ ಕ್ರೇಜಿ ಕ್ವೀನ್ ರಕ್ಷಿತಾ ಪ್ರೇಮ್ 36ರ ಹರೆಯಕ್ಕೆ ಕಾಲಿರಿಸಿದ್ದಾರೆ. ಅವರ ಜನ್ಮದಿನದ ಸಡಗರ ಈ ಹಿಂದಿನಂತಿಲ್ಲ. ಏಕೆಂದರೆ ಅಭಿಮಾನಿಗಳು ಮನೆಗೆ ಬಂದು ಶುಭ ಹಾರೈಸುವಂತಿಲ್ಲ. ಹಾಗೆಂದು ಹುಟ್ಟುಹಬ್ಬ ತೀರಾ ನಿರಾಶಾದಾಯಕವಾಗುವಂತಾಗಲು ಪ್ರೇಮ್ ಮತ್ತವರ ತಂಡ ಬಿಟ್ಟಿಲ್ಲ.

  ನಿರ್ದೇಶಕ ಪ್ರೇಮ್, ಮಗ ಸೂರ್ಯ ಹಾಗೂ ಅವರ ಬಳಗ ಸೇರಿಕೊಂಡು ಮನೆಯಲ್ಲಿಯೇ ಅಂದವಾದ ಕೇಕ್ ತಯಾರಿಸಿ ರಕ್ಷಿತಾ ಜನ್ಮದಿನ ಆಚರಿಸಿದ್ದಾರೆ. ಇದೇ ಮೊದಲ ಬಾರಿ ಮನೆಯೊಳಗೇ ಇದ್ದು ರಕ್ಷಿತಾ ಜನ್ಮದಿನ ಆಚರಿಸುತ್ತಿದ್ದೇವೆ ಎಂದು ಪ್ರೇಮ್ ತಿಳಿಸಿದ್ದಾರೆ. ಅದಕ್ಕಾಗಿ ಫಸ್ಟ್ ಟೈಂ ಕೇಕ್ ತಯಾರಿಸುವುದನ್ನೂ ಕಲಿತ ಖುಷಿಯನ್ನು ಅವರು ಹೇಳಿಕೊಂಡಿದ್ದಾರೆ. ಮುಂದೆ ಓದಿ...

  ಮದುವೆ ವಾರ್ಷಿಕೋತ್ಸವ ಸಂಭ್ರಮದಲ್ಲಿ ರಕ್ಷಿತಾ-ಪ್ರೇಮ್ಮದುವೆ ವಾರ್ಷಿಕೋತ್ಸವ ಸಂಭ್ರಮದಲ್ಲಿ ರಕ್ಷಿತಾ-ಪ್ರೇಮ್

  ಮನೆಯೊಳಗೇ ಸೆಲಬ್ರೇಷನ್

  ಪ್ರತೀ ವರ್ಷ ಅವರ ಬರ್ತ್ಡೇನಾ ಹೊರಗಡೆ celebrate ಮಾಡ್ತಿದ್ವಿ. ಆದರೆ ಈ ವರ್ಷ #Stayhome #Staysafe ಅನ್ನಕಾರಣಕ್ಕೇ ಎಲ್ರೂ ಮನೆ ಒಳಗಿದ್ದೇ ಸೆಲೆಬ್ರೇಟ್ ಮಾಡ್ತಿದೀವಿ. ಮತ್ತು 1st ಟೈಂ ಅವರ ಬರ್ತ್ಡೇಗೋಸ್ಕರ ನಾವ್ ಕೇಕ್ ಮಾಡೋದನ್ನ ಕಲ್ತ್ವಿ So this will be very special ಎಂದು ಪ್ರೇಮ್ ಟ್ವೀಟ್ ಮಾಡಿದ್ದಾರೆ.

  'ಸೋ ಕ್ಯೂಟ್' ಎಂದು ಖುಷಿ ಪಟ್ಟ ರಕ್ಷಿತಾ

  ಪ್ರೇಮ್ ಮತ್ತು ಅವರ ತಂಡ ತಯಾರಿಸಿದ ಕೇಕ್‌ಅನ್ನು ಮಧ್ಯರಾತ್ರಿ ರಕ್ಷಿತಾ ಅವರಿಂದ ಕಟ್ ಮಾಡಿಸಿದರು. ವೃತ್ತಿಪರ ಪರಿಣತರಂತೆಯೇ ತಯಾರಿಸಿದ್ದ ಕೇಕ್ ಕಂಡು ರಕ್ಷಿತಾ ಬೆರಗಾಗಿದ್ದಾರೆ. ಒಂದು ಕೇಕ್‌ಅನ್ನು ಅವರ ಕುಟುಂಬದ ಸೂರ್ಯ ಮಂಜು ತಯಾರಿಸಿದ್ದರೆ ಮತ್ತೊಂದು ಕೇಕ್‌ಅನ್ನು ಹೊರಗಿನಿಂದ ತರಿಸಿದ್ದರು. ಅವುಗಳನ್ನು ಕಂಡು 'ಸೋ ಕ್ಯೂಟ್' ಎಂದು ರಕ್ಷಿತಾ ಉದ್ಗಾರ ತೆಗೆದಿದ್ದಾರೆ.

  ಎಲ್ಲರನ್ನೂ ಮಿಸ್ ಮಾಡಿಕೊಳ್ಳುತ್ತಿದ್ದೇನೆ

  ಎಲ್ಲರನ್ನೂ ಮಿಸ್ ಮಾಡಿಕೊಳ್ಳುತ್ತಿದ್ದೇನೆ

  ಸೂರ್ಯ, ಮಂಜು ಕೇಕ್ ಬೇಕ್ ಮಾಡಿದರು, ಪ್ರೇಮ್ ಎಲ್ಲವನ್ನೂ ಸಂಘಟನೆ ಮಾಡಿದರು. ಅಮ್ಮ, ನನ್ನ ಕುಟುಂಬ, ನನ್ನ ಸ್ನೇಹಿತರು ಮತ್ತು ನನ್ನ ಜೀವನದ ಆತ್ಮೀಯರನ್ನು ಈ ಸಂದರ್ಭದಲ್ಲಿ ಮಿಸ್ ಮಾಡಿಕೊಳ್ಳುತ್ತಿರುವ ಈ ವೇಳೆಯನ್ನು ಸುಂದರವಾಗಿಸಲು ಅವರು ಪ್ರಯತ್ನಿಸಿದ್ದಾರೆ ಎಂದು ರಕ್ಷಿತಾ ಹೇಳಿದ್ದಾರೆ.

  ಎಲ್ಲ ಮುಗಿದ ಮೇಲೆ ಪಾರ್ಟಿ ಮಾಡೋಣ

  ಎಲ್ಲ ಮುಗಿದ ಮೇಲೆ ಪಾರ್ಟಿ ಮಾಡೋಣ

  ನಿಮ್ಮೆಲ್ಲರ ಹಾರೈಕೆ ನಾನು ಈಗಲೂ ಸಂತಸದಿಂದ ಇರುವಂತೆ ಮಾಡಿದೆ. ಕೆಲವರನ್ನು ನೋಡಬೇಕು ಎನಿಸುತ್ತದೆ. ಆದರೆ ಎಲ್ಲವೂ ಸುರಕ್ಷಿತವಾದ ಬಳಿಕ ಭರ್ಜರಿಯಾಗಿ ಪಾರ್ಟಿ ಮಾಡೋಣ ಎಂದು ರಕ್ಷಿತಾ ಇನ್‌ಸ್ಟಾಗ್ರಾಂನಲ್ಲಿ ಬರೆದಿದ್ದಾರೆ.

  English summary
  Actress Rakshitha Prem turns 36 on March 31st. Prem and his team baked a cake at home to celebrate her birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X