For Quick Alerts
  ALLOW NOTIFICATIONS  
  For Daily Alerts

  ನಟಿ ರಂಭಾ ಕಾರು ಭೀಕರ ಅಪಘಾತ; 3 ಮಕ್ಕಳ ಜತೆ ಅಪಘಾತಕ್ಕೀಡಾಗಿದ್ದ ನಟಿ ಸ್ಥಿತಿ ಈಗ ಹೇಗಿದೆ?

  |

  ತೊಂಬತ್ತರ ದಶಕದಲ್ಲಿ ದಕ್ಷಿಣ ಭಾರತದ ಟಾಪ್ ನಟಿಯರಲ್ಲಿ ಓರ್ವರಾಗಿ ಮಿಂಚಿದ್ದ ನಟಿ ರಂಭಾ ಸದ್ಯ ಕೆನಡಾದ ಒಂಟಾರಿಯೊ ಪ್ರಾಂತ್ಯದ ರಾಜಧಾನಿ ಟೊರಂಟೊ ನಗರದಲ್ಲಿ ತಮ್ಮ ಪತಿ ಹಾಗೂ ಮೂವರು ಮಕ್ಕಳೊಂದಿಗೆ ವಾಸವಿದ್ದಾರೆ.

  ಹೌದು, ಶ್ರೀಲಂಕಾ ತಮಿಳಿಗ ವ್ಯವಹಾರಸ್ಥರಾದ ಇಂದ್ರಕುಮಾರ್ ಪತ್ಮನಾಥನ್ ಎಂಬುವವರನ್ನು ವಿವಾಹವಾದ ನಟಿ ಕೆನಡಾದಲ್ಲಿ ನೆಲೆಸಿ ಜೀವನ ಸಾಗಿಸುತ್ತಿದ್ದರು. ಹೀಗೆ ನವೆಂಬರ್ 1ರಂದು ಎಂದಿನ ದಿನದಂತೆ ತಮ್ಮ ಮೂವರು ಮಕ್ಕಳನ್ನು ಶಾಲೆಯಿಂದ ಕರೆತರಲು ನಟಿ ರಂಭಾ ತಮ್ಮ ಟೆಸ್ಲಾ ಕಾರನ್ನು ತೆಗೆದುಕೊಂಡು ಹೋಗಿದ್ದರು. ಮಕ್ಕಳನ್ನು ಕೆಲಸದಾಕೆಯೊಡನೆ ವಾಪಸ್ ಕರೆತರುತ್ತಿದ್ದ ವೇಳೆ ಬಲಬದಿಯಿಂದ ಬಂದ ಕಾರೊಂದು ರಂಭಾ ಚಲಾಯಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ.

  ಹೀಗೆ 2 ಕಾರುಗಳ ನಡುವೆ ಭೀಕರ ಡಿಕ್ಕಿ ಸಂಭವಿಸಿದ ಪರಿಣಾಮ ನಟಿ ರಂಭಾ ಚಲಾಯಿಸುತ್ತಿದ್ದ ಕಾರಿನ ಬಲ ಭಾಗಕ್ಕೆ ಸಾಕಷ್ಟು ಪೆಟ್ಟಾಗಿತ್ತು ಹಾಗೂ ಕಾರಿನೊಳಗಿನ ಏರ್ ಬ್ಯಾಗ್ ಡಿಕ್ಕಿ ಹೊಡೆದ ರಭಸಕ್ಕೆ ತೆರೆದುಕೊಂಡಿದ್ದವು. ಹೀಗೆ ತಮ್ಮ ಕಾರು ಅಪಘಾತಕ್ಕೀಡಾದ ಬೆನ್ನಲ್ಲೇ ನಟಿ ರಂಭಾ ತಮ್ಮ ಅಧಿಕೃತ ಇನ್ ಸ್ಟಾಗ್ರಾಂ ಖಾತೆಯಲ್ಲಿ ಅಪಘಾತದ ಕುರಿತು ಬರೆದುಕೊಂಡಿದ್ದರು.

   ತಮಗಾಗಿ ಪ್ರಾರ್ಥಿಸಿ ಎಂದಿದ್ದ ರಂಭಾ

  ತಮಗಾಗಿ ಪ್ರಾರ್ಥಿಸಿ ಎಂದಿದ್ದ ರಂಭಾ

  ತಮ್ಮ ಕಾರು ಅಪಘಾತಕ್ಕೀಡಾಗಿರುವ ವಿಷಯವನ್ನು ಸ್ವತಃ ಅವರೇ ತಮ್ಮ ಅಧಿಕೃತ ಇನ್ ಸ್ಟಾಗ್ರಾಂ ಖಾತೆಯಲ್ಲಿ ಅಪಘಾತದ ಚಿತ್ರಗಳನ್ನು ಹಂಚಿಕೊಳ್ಳುವುದರ ಮೂಲಕ ತಿಳಿಸಿದ್ದರು. ಮಕ್ಕಳನ್ನು ಶಾಲೆಯಿಂದ ವಾಪಸ್ ಕರೆ ತರುವಾಗ ಈ ರೀತಿ ಅಪಘಾತ ಸಂಭವಿಸಿದೆ, ನಾವೆಲ್ಲರೂ ಸಣ್ಣಪುಟ್ಟ ಗಾಯಕ್ಕೊಳಗಾಗಿದ್ದೇವೆ ಆದರೆ ನನ್ನ ಕಿರಿಯ ಮಗಳು ಇನ್ನೂ ಸಹ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾಳೆ ದಯವಿಟ್ಟು ನಮಗಾಗಿ ಪ್ರಾರ್ಥಿಸಿ ಎಂದು ಬರೆದುಕೊಂಡಿದ್ದರು.

   ಶೀಘ್ರದಲ್ಲಿಯೇ ಗುಣಮುಖರಾಗಿ ಎಂದು ಆಶಿಸಿದ್ದ ನೂರಾರು ನೆಟ್ಟಿಗರು

  ಶೀಘ್ರದಲ್ಲಿಯೇ ಗುಣಮುಖರಾಗಿ ಎಂದು ಆಶಿಸಿದ್ದ ನೂರಾರು ನೆಟ್ಟಿಗರು

  ರಂಭಾ ಪೋಸ್ಟ್ ವೀಕ್ಷಿಸುತ್ತಿದ್ದಂತೆಯೇ ಇದರ ಕುರಿತು ಪ್ರತಿಕ್ರಿಯಿಸಿದ ಹಲವಾರು ನೆಟ್ಟಿಗರು ದೇವರ ಆಶೀರ್ವಾದ ನಿಮ್ಮ ಮೇಲಿರಲಿ, ನೀವು ಹಾಗೂ ನಿಮ್ಮ ಮಕ್ಕಳು ಆದಷ್ಟು ಬೇಗ ಗುಣಮುಖರಾಗಿ ಎಂದು ಕಾಮೆಂಟ್ ಮಾಡುವ ಮೂಲಕ ಆಶಿಸಿದ್ದರು.

   ಪ್ರಾರ್ಥಿಸಿದವರಿಗೆ ಧನ್ಯವಾದ ತಿಳಿಸಿದ ರಂಭಾ

  ಪ್ರಾರ್ಥಿಸಿದವರಿಗೆ ಧನ್ಯವಾದ ತಿಳಿಸಿದ ರಂಭಾ

  ಹೀಗೆ ತಾನು ಮತ್ತು ತನ್ನ ಮಕ್ಕಳು ಆದಷ್ಟು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸಿದ ಹಲವಾರು ನೆಟ್ಟಿಗರಿಗೆ ನಟಿ ರಂಭಾ ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಲೈವ್ ಬರುವ ಮೂಲಕ ಧನ್ಯವಾದ ಅರ್ಪಿಸಿದ್ದಾರೆ. 'ನಿಮ್ಮೆಲ್ಲರ ಪ್ರಾರ್ಥನೆ ಹಾಗೂ ಹಾರೈಕೆಯಿಂದ ಈಗ ನಾನು ಮತ್ತು ನನ್ನ ಮಕ್ಕಳು ಅಪಾಯದಿಂದ ಪಾರಾಗಿ, ಚೇತರಿಸಿಕೊಂಡು ಮನೆ ಸೇರಿದ್ದೇವೆ. ಅದರಲ್ಲಿಯೂ ಹೆಚ್ಚಾಗಿ ಗಾಯಗೊಂಡಿದ್ದ ನನ್ನ ಕಿರಿಯ ಪುತ್ರಿ ಈಗ ಚೇತರಿಸಿಕೊಂಡಿದ್ದಾಳೆ. ನಮ್ಮ ಒಳಿತಿಗಾಗಿ ಪ್ರಾರ್ಥಿಸಿದ ಎಲ್ಲರಿಗೂ ಸಹ ತುಂಬು ಹೃದಯದ ಧನ್ಯವಾದಗಳು' ಎಂದು ನಟಿ ರಂಭಾ ತಿಳಿಸಿದರು.

   ಎಲ್ಲಾ ಭಾಷೆಗಳಲ್ಲಿಯೂ ಮಾತನಾಡಿ ಧನ್ಯವಾದ ತಿಳಿಸಿದ ರಂಭಾ

  ಎಲ್ಲಾ ಭಾಷೆಗಳಲ್ಲಿಯೂ ಮಾತನಾಡಿ ಧನ್ಯವಾದ ತಿಳಿಸಿದ ರಂಭಾ

  ಇನ್ನು ನಟಿ ರಂಭಾ ತೆಲುಗು, ಕನ್ನಡ, ತಮಿಳು, ಮಲಯಾಳಂ, ಹಿಂದಿ, ಭೋಜ್ ಪುರಿ ಹಾಗೂ ಬಂಗಾಳಿ ಭಾಷೆಯ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇನ್ ಸ್ಟಾಗ್ರಾಂ ಲೈವ್ ವೇಳೆ ಈ ಎಲ್ಲಾ ಭಾಷೆಗಳಲ್ಲಿಯೂ ಸಹ ಮಾತನಾಡಿದ ರಂಭಾ ತನ್ನ ಅಭಿಮಾನಿಗಳಿಗೆ ವಿಶೇಷ ಧನ್ಯವಾದ ತಿಳಿಸಿದರು.

  English summary
  Actress Rambha Car Accident Update: She thanked her fans as they prayed for her. Take a look
  Wednesday, November 2, 2022, 9:17
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X