For Quick Alerts
  ALLOW NOTIFICATIONS  
  For Daily Alerts

  ನಟಿ ರಂಭಾ ಕಾರು ಅಪಘಾತ; ಚಿತ್ರಗಳು ವೈರಲ್

  |

  ತೊಂಬತ್ತರ ದಶಕದಲ್ಲಿ ದಕ್ಷಿಣ ಭಾರತದ ಸ್ಟಾರ್ ನಟಿಯಾಗಿ ಮಿಂಚಿದ ನಟಿ ರಂಭಾ ಸದ್ಯ ಕೆನಡಾದ ಒಂಟಾರಿಯೊ ಪ್ರಾಂತ್ಯದ ರಾಜಧಾನಿ ಟೊರೊಂಟೊದಲ್ಲಿ ನೆಲೆಸಿದ್ದಾರೆ. 2010ರಲ್ಲಿ ಇಂದ್ರಕುಮಾರ್ ಪದ್ಮನಾಥನ್ ಜತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ ರಂಭಾಗೆ ಇಬ್ಬರು ಪುತ್ರಿಯರು ಹಾಗೂ ಓರ್ವ ಪುತ್ರನಿದ್ದಾನೆ. ಸದ್ಯ ಟೊರೊಂಟೊದಲ್ಲಿರುವ ರಂಭಾ ಹಾಗೂ ಇಂದ್ರಕುಮಾರ್ ಮಕ್ಕಳಿಗೆ ಅಲ್ಲಿಯೇ ಶಿಕ್ಷಣ ಕೊಡಿಸುತ್ತಿದ್ದಾರೆ.

  ಹೀಗೆ ಶಾಲೆ ಮುಗಿಸಿಕೊಂಡು ಮನೆಗೆ ಬರುತ್ತಿದ್ದ ವೇಳೆ ರಂಭಾ ಕಾರು ಅಪಘಾತಕ್ಕೀಡಾಗಿದೆ. ರಂಭಾ ಚಲಾಯಿಸುತ್ತಿದ್ದ ಕಾರಿಗೆ ಬಲ ಬದಿಯಿಂದ ಬಂದ ಕಾರು ಡಿಕ್ಕಿ ಹೊಡೆದಿದೆ. ರಂಭಾ ಜತೆ ಕಾರಿನಲ್ಲಿ ತನ್ನ ಮಕ್ಕಳು ಹಾಗೂ ಮಕ್ಕಳನ್ನು ನೋಡಿಕೊಳ್ಳುವ ಕೆಲಸದಾಕೆ ಇದ್ದರು. ಈ ಪೈಕಿ ಎಲ್ಲರಿಗೂ ಚಿಕ್ಕ ಪುಟ್ಟ ಗಾಯಗಳಾಗಿದ್ದು ಅಪಾಯದಿಂದ ಪಾರಾಗಿದ್ದೇವೆ, ಆದರೆ ಕಿರಿಯ ಪುತ್ರಿ ಸಾಶಾ ಮಾತ್ರ ಇನ್ನೂ ಸಹ ಆಸ್ಪತ್ರೆಯಲ್ಲಿಯೇ ಇದ್ದಾಳೆ ಎಂದು ನಟಿ ರಂಭಾ ಸ್ವತಃ ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

  ಇನ್ನು ರಂಭಾ ಅವರ ಟೆಸ್ಲಾ ಕಾರಿನ ಬಲಭಾಗದ ಮುಂದಿನ ಬಾಗಿಲಿಗೆ ಪೆಟ್ಟಾಗಿದ್ದು, ಕಾರು ಡಿಕ್ಕಿಯಾದ ರಭಸಕ್ಕೆ ಏರ್ ಬ್ಯಾಗ್ ತೆರೆದುಕೊಂಡಿರುವುದನ್ನು ನಟಿ ಹಂಚಿಕೊಂಡಿರುವ ಚಿತ್ರಗಳಲ್ಲಿ ಕಾಣಬಹುದಾಗಿದೆ. ಹೀಗೆ ಅಪಘಾತದ ವಿಷಯವನ್ನು ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ರಂಭಾ ನಿಮ್ಮ ಪ್ರಾರ್ಥನೆ ನಮಗೆ ಅತಿಮುಖ್ಯ ಮಗಳು ಬೇಗನೇ ಗುಣಮುಖಳಾಗಲಿ ಎಂದು ಬೇಡಿಕೊಳ್ಳಿ ಎಂದು ಬರೆದುಕೊಂಡಿದ್ದಾರೆ.

  ರಂಭಾ ಹುಟ್ಟುಹೆಸರು ವಿಜಯಲಕ್ಷ್ಮಿ

  ರಂಭಾ ಹುಟ್ಟುಹೆಸರು ವಿಜಯಲಕ್ಷ್ಮಿ

  ಇನ್ನು ನಟಿ ರಂಭಾ 1976ರ ಜೂನ್ 5ರಂದು ಆಂಧ್ರ ಪ್ರದೇಶದ ವಿಜಯವಾಡದಲ್ಲಿ ಜನಿಸಿದರು. ಚಿತ್ರರಂಗದಲ್ಲಿ ರಂಭಾ ಎಂದೇ ಖ್ಯಾತಿಯನ್ನು ಪಡೆದಿರುವ ನಟಿಯ ಬಾಲ್ಯದ ಹೆಸರು ವಿಜಯಲಕ್ಷ್ಮಿ ಎಂದು. ಹಲವರ ಹಾಗೆ ಈ ನಟಿ ಸಹ ಚಿತ್ರರಂಗಕ್ಕೆ ಬಂದ ನಂತರ ತಮ್ಮ ಹೆಸರನ್ನು ಬದಲಾಯಿಸಿಕೊಂಡರು. ಇನ್ನು ಏಳನೇ ತರಗತಿಯ ಸಮಯದಲ್ಲಿ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅಮ್ಮಾವ್ರು ಪಾತ್ರದಲ್ಲಿ ನಟಿಸಿದ್ದರು. ನಿರ್ದೇಶಕ ಹರಿಹರನ್ ಈ ನಾಟಕವನ್ನು ಮಲಯಾಳಂ ನಿರ್ದೇಶಕ ಹರಿಹರನ್ ವೀಕ್ಷಿಸಲು ಬಂದಿದ್ದರು. ರಂಭಾ ನಟನೆಗೆ ಮನಸೋತ ಹರಿಹರನ್ ಆಕೆಯನ್ನು ಮಲಯಾಳಂನ ಸರ್ಗಮ್ ಚಿತ್ರಕ್ಕೆ ಆಯ್ಕೆ ಮಾಡಿಕೊಂಡಿದ್ದರು.

  ನಾಯಕಿಯಾಗಿ ತೆಲುಗಿನಲ್ಲಿ ಪದಾರ್ಪಣೆ

  ನಾಯಕಿಯಾಗಿ ತೆಲುಗಿನಲ್ಲಿ ಪದಾರ್ಪಣೆ

  ಹೀಗೆ ತನ್ನ ಹದಿನೈದನೇ ವಯಸ್ಸಿನಲ್ಲೇ ಶಾಲಾ ಕಾರ್ಯಕ್ರಮದಲ್ಲಿ ಮಲಯಾಳಂ ನಿರ್ದೇಶಕನ ಮನಗೆದ್ದು ಚಿತ್ರಕ್ಕಾಗಿ ಬಣ್ಣ ಹಚ್ಚಿದ್ದ ನಟಿ ರಂಭಾ 1992ರಲ್ಲಿ ತೆರೆಕಂಡ ಆ ಒಕ್ಕಟಿ ಅಡಕ್ಕು ಚಿತ್ರದಲ್ಲಿ ನಟಿಸಿ ಪೂರ್ಣ ಪ್ರಮಾಣದ ನಾಯಕಿಯಾದರು. ಅಂದಿನಿಂದ ತೆಲುಗು, ಮಲಯಾಳಂ, ಕನ್ನಡ, ತಮಿಳು, ಬೋಜ್‌ಪುರಿ ಹಾಗೂ ಬೆಂಗಾಳಿ ಭಾಷೆಯ ಹಲವು ಚಿತ್ರಗಳಲ್ಲಿ ನಟಿ ರಂಭಾ ನಾಯಕಿಯಾಗಿ ನಟಿಸಿ ಯಶಸ್ವಿಯಾಗಿದ್ದಾರೆ.

  ಶ್ರೀಲಂಕಾ ತಮಿಳಿಗನ ಜತೆ ವಿವಾಹ

  ಶ್ರೀಲಂಕಾ ತಮಿಳಿಗನ ಜತೆ ವಿವಾಹ

  ಇನ್ನು ನಟಿ ರಂಭಾ ನಟಿಯಾಗಿ ಚಿತ್ರರಂಗಗಳಲ್ಲಿ ಒಳ್ಳೆಯ ಹೆಸರನ್ನು ಮಾಡಿದ ಬೆನ್ನಲ್ಲೇ ವೈವಾಹಕ್ಕೆ ಜೀವನಕ್ಕೆ ಕಾಲಿಟ್ಟರು. 2010ರ ಏಪ್ರಿಲ್ 8ರಂದು ತಿರುಪತಿಯ ಕರ್ನಾಟಕ ಕಲ್ಯಾಣ ಮಂಟಂಪಂನಲ್ಲಿ ನಟಿ ರಂಭಾ ಕೆನಡಾದಲ್ಲಿ ನೆಲೆಸಿದ್ದ ಶ್ರೀಲಂಕಾ ತಮಿಳಿಗ ಇಂದ್ರಕುಮಾರ್ ಪದ್ಮನಾಥನ್ ಅವರನ್ನು ವರಿಸಿದರು. ಸದ್ಯ ಈ ದಂಪತಿಗೆ ಓರ್ವ ಪುತ್ರ ಮತ್ತು ಇಬ್ಬರು ಪುತ್ರಿಯರಿದ್ದು ಅನ್ಯೋನ್ಯವಾಗಿ ಜೀವನ ಸಾಗಿಸುತ್ತಿದ್ದಾರೆ. ಇಂದ್ರಕುಮಾರ್ ಪದ್ಮನಾಥನ್ ಕೆನಡಾದಲ್ಲಿ ಬ್ಯುಸಿನೆಸ್‌ಮ್ಯಾನ್ ಆಗಿದ್ದು, ಸಿನಿಮಾ ಮಾತ್ರವಲ್ಲದೇ ನಿಜ ಜೀವನದಲ್ಲಿಯೂ ರಂಭಾ ಯಶಸ್ಸು ಕಂಡಿದ್ದಾರೆ.

  English summary
  Actress Rambha met with car accident and had minor injuries
  Tuesday, November 1, 2022, 8:29
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X