For Quick Alerts
  ALLOW NOTIFICATIONS  
  For Daily Alerts

  ಬಾಲ್ಯದ ಫೋಟೋ ಹಂಚಿಕೊಂಡ ನಟಿ ರಮ್ಯಾಕೃಷ್ಣನ್: ಹೇಗಿದ್ದಾಳೆ ನೋಡಿ ಪುಟ್ಟ ರಮ್ಯಾ

  |

  ದಕ್ಷಿಣ ಭಾರತೀಯ ಚಿತ್ರರಂಗದ ಖ್ಯಾತ ನಟಿ ರಮ್ಯಾಕೃಷ್ಣ. ಕನ್ನಡದಲ್ಲಿಯೂ ಜನಪ್ರಿಯತೆ ಗಳಿಸಿರುವ ರಮ್ಯಾ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಖ್ಯಾತ ನಿರ್ದೇಶಕ ರಾಜಮೌಳಿ ಸಾರಥ್ಯದಲ್ಲಿ ಬಂದ ಬಾಹುಬಲಿ ಸಿನಿಮಾದ ಶಿವಗಾಮಿ ಪಾತ್ರ ವಿಶ್ವ ಮಟ್ಟಕ್ಕೆ ಖ್ಯಾತಿ ತಂದುಕೊಟ್ಟಿದೆ.

  RockLine Venkatesh Hospitalized,ಆಸ್ಪತ್ರೆಗೆ ದಾಖಲಾದ ರಾಕ್ ಲೈನ್ ವೆಂಕಟೇಶ್ | Filmibeat Kannada

  49ನೇ ವಯಸ್ಸಿನಲ್ಲಿಯೂ ಅದೆ ಚಾರ್ಮ್ ಕಾಪಾಡಿಕೊಂಡಿರುವ ರಮ್ಯಾ ಈಗಲೂ ಬಹುಬೇಡಿಕೆಯ ನಟಿ. ದಕ್ಷಿಣ ಭಾರತದ ಖ್ಯಾತ ಸಿನಿಮಾಗಳಿಗೆ ಪೋಷಕ ನಟಿ ಅಂತ ಬಂದಾಗ ಮೊದಲು ನೆನಪಾಗುವುದು ರಮ್ಯಾ ಕೃಷ್ಣ. ತೂಕದ ಪಾತ್ರಗಳನ್ನು ನಿಭಾಯಿಸುತ್ತಿರುವ ರಮ್ಯಾ ಕನ್ನಡದಲ್ಲಿ ಶಿವಗಾಮಿ ಎನ್ನುವ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

  ರಮ್ಯಾಕೃಷ್ಣನ್ ಮಾಡಿದ್ದ ಆ ಪಾತ್ರದಂತಿರಬೇಕಂತೆ ಪ್ರಿಯಾಮಣಿ ಕನಸಿನ ಪಾತ್ರ!ರಮ್ಯಾಕೃಷ್ಣನ್ ಮಾಡಿದ್ದ ಆ ಪಾತ್ರದಂತಿರಬೇಕಂತೆ ಪ್ರಿಯಾಮಣಿ ಕನಸಿನ ಪಾತ್ರ!

  ಸಾಮಾಜಿಕ ಜಾಲತಾಣದಲ್ಲಿಯೂ ಸಖತ್ ಆಕ್ವಿಟ್ ಆಗಿರುವ ರಮ್ಯಾ ಇತ್ತೀಚಿಗೆ ಬಾಲ್ಯದ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ರಮ್ಯಾಕೃಷ್ಣ ಶಾಲೆಯಲ್ಲಿರುವ ಫೋಟೋ ಇದಾಗಿದೆ. ಶಾಲಾಯೂನಿಫಾರ್ಮ್ ಹಾಕಿರುವ ರಮ್ಯಾ ಎಲ್ಲಾ ಕ್ಲಾಸ್ ಮೇಟ್ಸ್ ಮತ್ತು ಟೀಚರ್ ಜೊತೆ ಇರುವ ಫೋಟೋ ಇದಾಗಿದೆ.

  ಈ ಫೋಟೋ ಶೇರ್ ಮಾಡಿ ನನ್ನನ್ನು ಗುರುತಿಸಿ ಎಂದು ಹೇಳಿದ್ದಾರೆ. ನಂತರ ಮತ್ತೆ ತಾನು ಯಾರು ಎಂದು ಮಾರ್ಕ್ ಮಾಡಿ ಶೇರ್ ಮಾಡಿದ್ದಾರೆ. ಕ್ಯೂಟ್ ಆಗಿರುವ ಪುಟ್ಟ ರಮ್ಯಾಗೆ ಅಭಿಮಾನಿಗಳ ಮೆಚ್ಚುಗೆ ಹರಿದುಬರುತ್ತಿದೆ.

  Actress Ramya Krishnan Shares Her Childhood Photo

  ರಮ್ಯಾಕೃಷ್ಣ ಸದ್ಯಾ ತಮಿಳುನಾಡಿ ದಿವಂಗತ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಜೀವನ ಆಧರಿಸಿದ ವೆಬ್ ಸರಣಿ ಮೂಲಕ ಸುದ್ದಿಯಾಗಿದ್ದರು. ಇತ್ತೀಚಿಗೆ ಅಂಧಾದುನ್ ತೆಲುಗು ರಿಮೇಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

  English summary
  Actress Ramya Krishnan shares her childhood photo. fans write such a cutiee.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X