For Quick Alerts
  ALLOW NOTIFICATIONS  
  For Daily Alerts

  ಲಕ್ಕಿ ಸ್ಟಾರ್ ರಮ್ಯಾ ಕೊನೆಯ ಸಿನಿಮಾ ಆರ್ಯನ್?

  By ಜೀವನರಸಿಕ
  |

  ಈ ರೀತಿಯ ಪ್ರಶ್ನೆ ಸ್ಯಾಂಡಲ್ ವುಡ್ ನಲ್ಲಿ ಗಿರಕಿ ಹೊಡೀತಿದೆ. ಇದಕ್ಕೆ ಕಾರಣವೂ ಇಲ್ಲದೇ ಇಲ್ಲ. ಲಕ್ಕಿ ಸ್ಟಾರ್ ರಮ್ಯಾ ಇತ್ತೀಚೆಗೆ ತಾನೆ ಶ್ರೀನಗರ ಕಿಟ್ಟಿ ಜೊತೆ 'ಎಂದೆಂದಿಗೂ ಅನ್ನೋ' ಸಿನಿಮಾಗೆ ನಟಿಸ್ತಾರೆ ಅನ್ನೋ ಸುದ್ದಿ ಕೂಡ ಸುಳ್ಳಾಗಿದೆ.

  ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಅಭಿಮಾನಿಗಳಿಗೆ ನಿರಾಶೆಯಾಗ್ತಿದೆ. ರಮ್ಯಾ ರಾಜಕೀಯದಲ್ಲಿ ಬಿಸಿಯಾಗ್ತಿರೋದ್ರಿಂದ ಬರ್ತಿರೋ ಸಿನಿಮಾ ಆಫರ್ ಗಳಿಗೆ ನೋ ಅಂದಿದ್ದಾರೆ. ಸದ್ಯ ತಾನು ಒಪ್ಪಿಕೊಂಡಿರೋ 'ನೀರ್ ದೋಸೆ', 'ಆರ್ಯನ್', 'ದಿಲ್ ಕಾ ರಾಜ' ಸಿನಿಮಾಗಳನ್ನ ಬಿಟ್ಟು ಬೇರೆ ಯಾವುದನ್ನೂ ಒಪ್ಪಿಕೊಳ್ಳದಿರಲು ನಿರ್ಧರಿಸಿದ್ದಾರಂತೆ.

  ಈ ಹಿಂದೆ ಇಮ್ರಾನ್ ಸರ್ದಾರಿಯ ನಿರ್ದೇಶನದಲ್ಲಿ ಶ್ರೀನಗರ ಕಿಟ್ಟಿ ಜೋಡಿಯಾಗಿ ರಮ್ಯಾ ಮತ್ತೊಂದು ಚಿತ್ರಕ್ಕೆ ಸಹಿ ಮಾಡಿದ್ದರು. ಈಗ ನಿರ್ಮಾಪಕ ಎಸ್ ವಿ ಬಾಬುಗೆ ಅಡ್ವಾನ್ಸ್ ಹಣ ವಾಪಸ್ಸು ಮಾಡಿರೋ ಸುದ್ದಿ ಬಂದಿದೆ.

  ಆದ್ರೆ ಸಂಜು ವೆಡ್ಸ್ ಗೀತಾ ಆದ್ಮೇಲೇ ಕಿಟ್ಟಿ ಮತ್ತು ರಮ್ಯಾ ಜೋಡಿ ಮತ್ತೆ ಒಂದಾಗ್ತಿದೆ ಅಂತ ರಮ್ಯಾ ಅಭಿಮಾನಿಗಳು ಖುಷಿಯಲ್ಲಿದ್ರು. ಈಗ ಲೋಕಸಭಾ ಚುನಾವಣೆ ಹತ್ತಿರ ಬರ್ತಿರೋದ್ರಿಂದ ಹೈಕಮಾಂಡ್ ಮಾತು ಕೇಳಲೇಬೇಕಾಗಿದೆ.

  ಹತ್ತು ವರ್ಷ ಸ್ಯಾಂಡಲ್ ವುಡ್ ನ ಅನಭಿಷಿಕ್ತ ರಾಣಿಯಾಗಿ ಮೆರೆದ ರಮ್ಯಾ ಸಿನಿಮಾ ಜೀವನ ರಾಜಕೀಯದಿಂದ ಅಂತ್ಯವಾಗುತ್ತಾ ಅನ್ನೋ ಅನುಮಾನ ಬೇಸರ ಸಿನಿಪ್ರೇಮಿಗಳನ್ನ ಕಾಡತೊಡಗಿದೆ. ಇನ್ನು ರಮ್ಯಾ ಮದುವೆ ಯಾವಾಗ ಎಂಬ ಪ್ರಶ್ನೆಯೂ ಅಭಿಮಾನಿಗಳನ್ನು ಕಾಡುತ್ತಿದೆ.

  English summary
  There is a lot of speculation about Sandalwood queen Ramya has decided to bid goodbye to films after the elections. Now it is said that the actress last Kannada film should be 'Aaryan'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X