»   » ಬೇಗ ಬನ್ನಿ ರಮ್ಯಾ, ನಿಮಗಾಗಿ ಚಿತ್ರಾನ್ನ ಕಾಯ್ತಾ ಇದೆ!

ಬೇಗ ಬನ್ನಿ ರಮ್ಯಾ, ನಿಮಗಾಗಿ ಚಿತ್ರಾನ್ನ ಕಾಯ್ತಾ ಇದೆ!

Posted By:
Subscribe to Filmibeat Kannada

ಗೋಲ್ಡನ್ ಬ್ಯೂಟಿ ರಮ್ಯಾ ಇಲ್ಲದ ಸ್ಯಾಂಡಲ್ ವುಡ್ ಚಿತ್ರರಂಗ ಒಂಥರಾ ಗರಬಡಿದಂತಾಗಿದೆ. ರಮ್ಯಾ ಅವರು ವಿದೇಶಕ್ಕೆ ಹಾರಿದ ಮೇಲೆ ಗಾಂಧಿನಗರವೂ ಒಂದು ವಿವಾದವಿಲ್ಲದೆ, ಕಿರಿಕ್ ಇಲ್ಲದೆ, ಚರ್ಚೆಯಿಲ್ಲದೆ ತಣ್ಣಗೆ ಮಲಗಿದೆ.

ರಮ್ಯಾ ಇಲ್ಲಿದ್ದಿದ್ದರೆ ಸ್ಯಾಂಡಲ್ ವುಡ್ ನಲ್ಲಿ ಏನೋ ಒಂದು ಸಂಚಲನ ಇದ್ದೇ ಇರುತ್ತಿತ್ತು. ಈಗ ಅವೆಲ್ಲವೂ ಬಂದ್ ಆಗಿವೆ. ಅವರ ಅಭಿನಯದ 'ಆರ್ಯನ್' ಚಿತ್ರವೇ ಕೊನೆಯ ಚಿತ್ರ. ಅದಾದ ಬಳಿಕ ರಮ್ಯಾ ಸದ್ದಿಲ್ಲದಂತೆ ಲಂಡನ್ ಗೆ ಹಾರಿದರು. [ಎಕ್ಸ್ ಕ್ಯೂಸ್ ಮೀ ಇದು ರಮ್ಯಾ ಅಭಿಮಾನಿಗಳಿಗೆ ಮಾತ್ರ]

Actress Ramya

ಒಂದೇ ಒಂದು ಟ್ವೀಟ್ ಇಲ್ಲದೆ, ಫೇಸ್ ಬುಕ್ ಸಮಾಚಾರ ಇಲ್ಲದೆ ಅಭಿಮಾನಿಗಳು ರಮ್ಯಾ ನಿರೀಕ್ಷೆಯಲ್ಲೇ ಕಳೆಯುವಂತಾಯಿತು. ಇದೀಗ ಅವರು ಲಂಡನ್ ನಲ್ಲಿ ಉನ್ನತ ವ್ಯಾಸಂತ ಪಡೆಯುತ್ತಿದ್ದು ಆದಷ್ಟು ತವರು ಮನೆಗೆ ಬರಬೇಕೆಂಬ ಹಂಬಲ ಅವರಿಗಿದೆ ಎನ್ನುತ್ತವೆ ಮೂಲಗಳು.

ಎಲ್ಲಕ್ಕಿಂತ ಮುಖ್ಯವಾಗಿ ಲಂಡನ್ ನಲ್ಲಿ ಚಿತ್ರಾನ್ನ ಸಿಗುತ್ತೋ ಇಲ್ಲವೋ ಗೊತ್ತಿಲ್ಲ. ಬೆಂಗಳೂರಿನ ಚಿತ್ರಾನ್ನವನ್ನು ನೆನೆಸಿಕೊಂಡು ಅವರು ಯಾವಾಗ ಬೇಕಾದರೂ ಫ್ಲೈಟ್ ಹತ್ತಬಹುದು. ಚಿತ್ರಾನ್ನದ ಜೊತೆಗೆ ಕುರುಕುರು ಎಂದು ಮೆಲ್ಲಲು ಚಿಪ್ಸ್ ಸಹ ಅವರಿಗಾಗಿ ಕಾಯುತ್ತಿವೆ.

ಬಹುಶಃ ಅವರು ಇನ್ನೊಂದು ತಿಂಗಳಲ್ಲಿ ಸ್ವದೇಶಕ್ಕೆ ಆಗಮಿಸುವ ಸಾಧ್ಯತೆಗಳಿವೆ. ಅದಕ್ಕೂ ಮುನ್ನ ಅವರ ಹುಟ್ಟುಹಬ್ಬದ ದಿನವೇ (ನ.29) ಅಭಿಮಾನಿಗಳ ಮುಂದೆ ಪ್ರತ್ಯಕ್ಷವಾದರೂ ಅಚ್ಚರಿಯಿಲ್ಲ. ಒಟ್ಟಾರೆ ಅವರ ಅಭಿಮಾನಿಗಳು ರಮ್ಯಾ ನಿರೀಕ್ಷೆಯಲ್ಲಿದ್ದಾರೆ. (ಏಜೆನ್ಸೀಸ್)

English summary
Sandalwood queen Ramya to come back to homeland soon. The actress, who is currently pursuing higher education abroad. The actress, who loves Karnataka food, specially her favorite dish Chitraanna.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada