For Quick Alerts
  ALLOW NOTIFICATIONS  
  For Daily Alerts

  ದರ್ಶನ್ ವಿವಾದದ ಬೆನ್ನಲ್ಲೆ 'ಅಭಿಮಾನಿಗಳಿಗೆ ಬುದ್ಧಿ ಹೇಳಿ' ಎಂದ ನಟಿ ರಮ್ಯಾ

  By ಫಿಲ್ಮಿಬೀಟ್ ಡೆಸ್ಕ್
  |

  ನಟ ದರ್ಶನ್ ಮೇಲೆ ಹೊಸಪೇಟೆಯಲ್ಲಿ ಚಪ್ಪಲಿ ಎಸೆದ ಘಟನೆ ಕುರಿತಂತೆ ತೀವ್ರ ಖಂಡನೆ ವ್ಯಕ್ತವಾಗುತ್ತಿದೆ. ಎರಡು ದಶಕಗಳ ಕಾಲ ಸಿನಿಮಾಗಳ ಮೂಲಕ ಮನೊರಂಜನೆ ನೀಡಿದ ವ್ಯಕ್ತಿಗೆ ಈ ರೀತಿ ಅಪಮಾನ ಮಾಡಿರುವುದಕ್ಕೆ ತೀವ್ರ ಖಂಡನೆ ವ್ಯಕ್ತವಾಗುತ್ತಿದೆ.

  ಇದರ ಬೆನ್ನಲ್ಲೆ, ಸ್ಟಾರ್ ನಟರ ಅಭಿಮಾನಿಗಳ ಅತಿರೇಕದ ಅಭಿಮಾನ, ಅದರಿಂದ ಉಂಟಾಗುತ್ತಿರುವ ಸಾಮಾಜಿಕ ಅಶಾಂತಿಯ ಕುರಿತಂತೆ ಚರ್ಚೆಯೂ ಮುನ್ನೆಲೆಗೆ ಬಂದಿದೆ.

  ದರ್ಶನ್ vs ಅಪ್ಪು ಹೊಸಪೇಟೆ ಫ್ಯಾನ್‌ವಾರ್‌ಗೆ ಇವೆ ಹಳೆಯ ಸೇಡುಗಳು; ಗಲಾಟೆ ಆಗಿದ್ದೇ ಇವುಗಳಿಂದ! ದರ್ಶನ್ vs ಅಪ್ಪು ಹೊಸಪೇಟೆ ಫ್ಯಾನ್‌ವಾರ್‌ಗೆ ಇವೆ ಹಳೆಯ ಸೇಡುಗಳು; ಗಲಾಟೆ ಆಗಿದ್ದೇ ಇವುಗಳಿಂದ!

  ಚಿತ್ರರಂಗದ ಹಲವು ನಟ-ನಟಿಯರು ದರ್ಶನ್ ಮೇಲೆ ನಡೆದಿರುವ ಈ ದಾಳಿಯನ್ನು ಖಂಡಿಸಿದ್ದಾರೆ. ತಾವು ದರ್ಶನ್ ಪರವಾಗಿ ನಿಂತಿರುವುದಾಗಿ ಹೇಳಿದ್ದಾರೆ. ನಟಿ ರಮ್ಯಾ ಇದೇ ಸಮಯದಲ್ಲಿ ಮಾಡಿರುವ ಟ್ವೀಟ್ ಆಸಕ್ತಿಕರವಾಗಿದೆ ಹಾಗೂ ಅತ್ಯಂತ ಸಕಾಲಿಕವಾಗಿಯೂ ಇದೆ.

  ಅಭಿಮಾನಿ ಸಂಘಗಳು ಸಜ್ಜನಿಕೆಯಿಂದ ವರ್ತಿಸಬೇಕು: ರಮ್ಯಾ

  ಅಭಿಮಾನಿ ಸಂಘಗಳು ಸಜ್ಜನಿಕೆಯಿಂದ ವರ್ತಿಸಬೇಕು: ರಮ್ಯಾ

  ''ನಟರ ಅಭಿಮಾನಿ ಸಂಘಗಳು ಸಜ್ಜನಿಕೆಯಿಂದ ವರ್ತಿಸಬೇಕು, ಎಲ್ಲ ನಟರು ತಮ್ಮ ಅಭಿಮಾನಿ ಸಂಘಗಳಿಗೆ, ಅಭಿಮಾನಿಗಳಿಗೆ ಇತರ ನಟರನ್ನು ಮಾತ್ರವೇ ಅಲ್ಲ ಯಾರನ್ನೂ ಸಹ ಟ್ರೋಲ್ ಮಾಡದಂತೆ ಎಚ್ಚರಿಕೆ ನೀಡಬೇಕು. ಮಹಿಳೆಯರು ಮತ್ತು ಮಕ್ಕಳ ಬಗ್ಗೆ ಅವಹೇಳನಕಾರಿ ಕಾಮೆಂಟ್‌ಗಳನ್ನು ಪೋಸ್ಟ್ ಮಾಡಬೇಡಿ ಎಂದು ಎಚ್ಚರಿಕೆ ನೀಡಬೇಕು'' ಎಂದಿದ್ದಾರೆ. ಈ ಟ್ವೀಟ್‌ನ ಜೊತೆಗೆ ಕೆಲವು ನಟರ ಅಭಿಮಾನಿ ಪೇಜ್‌ಗಳು ಮಾಡಿರುವ ಕಮೆಂಟ್‌ನ ಸ್ಕ್ರೀನ್ ಶಾಟ್‌ಗಳನ್ನು ನಟಿ ಹಂಚಿಕೊಂಡಿದ್ದಾರೆ.

  ಅಭಿಮಾನಿಗಳನ್ನು ಅಂಕೆಯಲ್ಲಿಡಿ

  ಅಭಿಮಾನಿಗಳನ್ನು ಅಂಕೆಯಲ್ಲಿಡಿ

  ಟ್ರೋಲ್‌ಗಳ ವಿರುದ್ಧ ನಟಿ ರಮ್ಯಾ ಮೊದಲಿನಿಂದಲೂ ಮಾತನಾಡುತ್ತಲೇ ಇದ್ದಾರೆ. ಅದರಲ್ಲಿಯೂ ನಟಿಯರ ಮೇಲಾಗುವ ಟ್ರೋಲ್ ದಾಳಿ, ಸಾಮಾಜಿಕ ನಿಂದನೆಗಳನ್ನು ವಿರೋಧಿಸುತ್ತಲೇ ಬಂದಿದ್ದಾರೆ. ಇದೀಗ ದರ್ಶನ್ ವಿವಾದದ ಬೆನ್ನಲ್ಲೆ ಮತ್ತೊಮ್ಮೆ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ಸ್ಟಾರ್ ನಟರು ತಮ್ಮ ಅಭಿಮಾನಿಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು ಎಂಬುದು ಅವಶ್ಯಕವೂ ಆಗಿದೆ. ಇತ್ತೀಚಿನ ಕೆಲ ಘಟನೆಗಳನ್ನು ನೋಡಿದರೆ ಇದರ ಅವಶ್ಯಕತೆ ಹೆಚ್ಚಿಗಿದೆ ಎನಿಸುತ್ತದೆ.

  ರಮ್ಯಾರನ್ನೇ ಟ್ರೋಲ್ ಮಾಡಿದ್ದಾರೆ

  ರಮ್ಯಾರನ್ನೇ ಟ್ರೋಲ್ ಮಾಡಿದ್ದಾರೆ

  ವಿಚಿತ್ರವೆಂದರೆ ರಮ್ಯಾ ಮಾಡಿರುವ ಟ್ವೀಟ್‌ಗೆ ಕಮೆಂಟ್‌ನಲ್ಲೇ ಹಲವರು ರಮ್ಯಾ ಅವರನ್ನು ಕೆಟ್ಟದಾಗಿ ನಿಂದಿಸಿದ್ದಾರೆ. ಅಲ್ಲದೆ, ರಮ್ಯಾ ಹಂಚಿಕೊಂಡಿರುವ ಸ್ಕ್ರೀನ್ ಶಾಟ್‌ಗಳಲ್ಲಿ ಬಹುತೇಕ ದರ್ಶನ್ ಅಭಿಮಾನಿಗಳ ಚಿತ್ರಗಳೇ ಇವೆ, ಅದಕ್ಕೂ ಕೆಲವರು ವಿರೋಧ ವ್ಯಕ್ತಪಡಿಸಿದ್ದು, ಅಪ್ಪು ಅಭಿಮಾನಿಗಳು ಸಹ ಕೆಟ್ಟದಾಗಿ, ಅಸಭ್ಯವಾಗಿ ಟ್ವೀಟ್ ಮಾಡಿದ್ದಾರೆ ನೋಡಿ ಎಂದು ಕೆಲವು ಸ್ಕ್ರೀನ್ ಶಾಟ್‌ಗಳನ್ನು ದರ್ಶನ್ ಅಭಿಮಾನಿಗಳು ಹಂಚಿಕೊಂಡಿದ್ದಾರೆ.

  ನಟಿಯರ ಬಗ್ಗೆ ರಮ್ಯಾ ಟ್ವೀಟ್

  ನಟಿಯರ ಬಗ್ಗೆ ರಮ್ಯಾ ಟ್ವೀಟ್

  ಇನ್ನು ನಟಿ ರಮ್ಯಾ, ಕೆಲವು ದಿನಗಳ ಹಿಂದಷ್ಟೆ ನಟಿಯರ ಮೇಲೆ ಆಗುತ್ತಿರುವ ನಿಂದನೆಯ ಕುರಿತಂತೆ ಟ್ವೀಟ್ ಮಾಡಿದ್ದರು. ''ವಿಚ್ಛೇದನ ಪಡೆದಿದ್ದಾಗಿ ಸಮಂತಾರನ್ನು, ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಕ್ಕಾಗಿ ಸಾಯಿ ಪಲ್ಲವಿಯನ್ನು, ವ್ಯಕ್ತಿಯೊಬ್ಬರಿಂದ ದೂರಾಗಿದ್ದಕ್ಕಾಗಿ ರಶ್ಮಿಕಾರನ್ನು, ತೊಟ್ಟ ಬಟ್ಟೆಗಾಗಿ ದೀಪಿಕಾ ಪಡುಕೋಣೆಯನ್ನು ಟ್ರೋಲ್ ಮಾಡಲಾಗುತ್ತಿದೆ. ಇವರು ಮಾತ್ರವೇ ಅಲ್ಲದೆ ಇತರ ಅನೇಕ ಮಹಿಳೆಯರು ಅವರು ಮಾಡುವ ಹಲವು ವಿಷಯಕ್ಕಾಗಿ ದಿನವೂ ಟೀಕೆಗೆ ಒಳಗಾಗುತ್ತಲೇ ಇದ್ದಾರೆ. ಆಯ್ಕೆಯ ಸ್ವಾತಂತ್ರ್ಯ ಎಂಬುದು ಎಲ್ಲರ ಮೂಲಭೂತ ಹಕ್ಕು. ಮಹಿಳೆಯರು ತಾಯಿ ದುರ್ಗೆಯ ಸ್ವರೂಪ. ಈ ಸ್ತ್ರೀದ್ವೇಷದ ವಿರುದ್ಧ ನಾವು ಹೋರಾಡಲೇ ಬೇಕಿದೆ'' ಎಂದಿದ್ದಾರೆ.

  English summary
  Actress Ramya request star actors to control their fans from trolling others and use abusive language on social media.
  Monday, December 19, 2022, 21:09
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X