»   » ನೆರೆಹೊರೆ ಕಿರಿಕಿರಿಗೆ ಬೇಸತ್ತು ಅಮೆರಿಕಾಗೆ ರಂಜಿತಾ

ನೆರೆಹೊರೆ ಕಿರಿಕಿರಿಗೆ ಬೇಸತ್ತು ಅಮೆರಿಕಾಗೆ ರಂಜಿತಾ

Posted By:
Subscribe to Filmibeat Kannada
ತಾರೆ ರಂಜಿತಾ ಯಾರು ಏನು ಎತ್ತ ಎಂಬುದು ನಮ್ಮ ಓದುಗರಿಗೆ ಚೆನ್ನಾಗಿ ಗೊತ್ತೇ ಇದೆ. ಈ ಬಗ್ಗೆ ಮತ್ತೊಮ್ಮೆ ವಿವರವಾಗಿ ಹೇಳುವ ಅಗತ್ಯವಿಲ್ಲ ಎಂದು ಭಾವಿಸುತ್ತೇವೆ. ಈಗ ಈಕೆ ಒಂದು ವಿಚಿತ್ರ ಸಮಸ್ಯೆಯಲ್ಲಿ ತಗಲಾಕಿಕೊಂಡಿದ್ದಾರೆ.

ಚೆನ್ನೈನ ಕಲಾವಿದರ ಸಂಘದ ಎದುರುಗಡೆಯೇ ರಂಜಿತಾ ಮನೆ ಇದೆ. ಈಕೆಯ ಮನೆ ಇರುವುದು ಬಹುಮಹಡಿ ಕಟ್ಟಡದಲ್ಲಿ. ಅಲ್ಲಿ ತರಹೇವಾರಿ ಜನ ಇದ್ದಾರೆ. ಸ್ವಾಮೀಜಿಯೊಬ್ಬರ ಜೊತೆಗಿನ ರಾಸಲೀಲೆಯ ವಿಡಿಯೋ ಬಿಡುಗಡೆಯಾದ ಬಳಿಕ ಈಗಿರುವ ಬಿಲ್ಡಿಂಗ್ ನಲ್ಲಿ ರಂಜಿತಾಗೆ ಭಾರಿ ಕಿರಿಕಿರಿ ಎದುರಾಗಿದೆಯಂತೆ.

ಈ ಬಹುಮಹಡಿ ಕಟ್ಟಡಕ್ಕೆ ಆಗಾಗ ಪೊಲೀಸರು, ಮಾಧ್ಯಮದವರು ಭೇಟಿ ನೀಡುತ್ತಿರುತ್ತಾರೆ. ಈ ಬಗ್ಗೆ ಅಲ್ಲಿರುವ ಜನ ಏನೇನೋ ಗುಸಗುಸ ಪಿಸಪಿಸ ಎಂದು ಮಾತನಾಡಿಕೊಳ್ಳುತ್ತಿರುತ್ತಾರಂತೆ. ಇದೆಲ್ಲಾ ನೋಡಿ ರಂಜಿತಾಗೆ ತೀವ್ರ ಇರುಸುಮುರುಸಾಗಿದೆಯಂತೆ.

ಜನರ ಚುಚ್ಚುಮಾತುಗಳನ್ನು ತಡೆಯಲಾಗದೆ ರಂಜಿತಾ ಹೆಚ್ಚಾಗಿ ಈ ಮನೆಗೆ ಬರುವುದನ್ನೇ ಬಿಟ್ಟಿದ್ದರಂತೆ. ಸ್ವಂತ ಮನೆ ಎಂಬ ಕಾರಣಕ್ಕೆ ಆಗಾಗ ಬಂದು ಹೋಗುತ್ತಿದ್ದರಂತೆ. ಈಗ ಇನ್ನೂ ಒಂದು ಹೆಜ್ಜೆ ಮುಂದಿಟ್ಟು ಮನೆಯನ್ನೇ ಖಾಲಿ ಮಾಡಲು ಮುಂದಾಗಿದ್ದಾರೆ.

ಚೆನ್ನೈನ ಯಾವುದೇ ಪ್ರದೇಶಕ್ಕೆ ಹೋದರು ಜನ ತಮ್ಮನ್ನು ಗುರುತುಹಿಡಿಯುತ್ತಾರೆ, ಮತ್ತದೇ ಚುಚ್ಚುಮಾತುಗಳು ಈಟಿಯಂತೆ ಚುಚ್ಚುತ್ತವೆ. ತಮಿಳುನಾಡಿನಲ್ಲಿ ಎಲ್ಲಿಗೆ ಹೋದರೂ ಈ ಸಮಸ್ಯೆ ಪರಿಹಾರ ಸಿಗುವುದು ಕಷ್ಟ. ಹೋಗಲಿ ಪಕ್ಕದ ರಾಜ್ಯಗಳಿಗೆ ಹೋಗೋಣ ಎಂದರೆ ಅಲ್ಲೂ ಇದೇ ರೀತಿ ಗುಸಗುಸ ಪಿಸಪಿಸ ತಪ್ಪಿದ್ದಲ್ಲ.

ರಾಸಲೀಲೆ ವಿಡಿಯೋ ಹಾಗೂ ಚಿತ್ರಗಳು ಆಗಾಗ ಸ್ವಾಮಿಗಳ ಆಶ್ರಮಕ್ಕೆ ಹೋಗಿಬರುವುದು ಆದ ಮೇಲೆ ರಸ್ತೆಯಲ್ಲಿ ಹೋಗುವವರೆಲ್ಲಾ ಈ ಕಟ್ಟಡದ ಕಡೆಗೆ ನೋಡಿಕೊಂಡು ಏನೇನೋ ಬಾಯಿಗೆ ಬಂದಂತೆ ಮಾತನಾಡಿಕೊಂಡು ಹೋಗುತ್ತಾರಂತೆ. ಆ ಕಟ್ಟಡದಲ್ಲಿರುವ ಉಳಿದವರಿಗೂ ಇದರಿಂದ ಭಾರಿ ಕಿರಿಕಿರಿಯಾಗುತ್ತಿದೆಯಂತೆ.

ಈ ಸಂಬಂಧ ಅಕ್ಕಪಕ್ಕದ ಮನೆಯವರು ಆಗಾಗ ರಂಜಿತಾ ಕುಟುಂಬಿಕರೊಂದಿಗೆ ಕಾಲುಕೆರೆದು ಜಗಳಕ್ಕೂ ಬರುತ್ತಿದ್ದಾರಂತೆ. ಇದರ ಜೊತೆಗೆ ಗುಸಗುಸ ಪಿಸಪಿಸ ಮಾತುಗಳು ಬೇರೆ. ಮನೆಗೆ ಬೀಗ ಜಡಿಯಬಹುದೇನೋ ಆದರೆ ಜನರ ಬಾಯಿಗೆ ಬೀಗಜಡಿಯಲು ಸಾಧ್ಯವೆ? ಜನರ ಚುಚ್ಚುಮಾತಿಗೆ ರೋಸಿಹೋಗಿರುವ ರಂಜಿತಾ ಕಡೆಗೆ ಮನೆ ಖಾಲಿ ಮಾಡಿ ದೂರದ ಅಮೆರಿಕಾಗೆ ಹಾರಲು ಸಿದ್ಧವಾಗಿದ್ದಾರಂತೆ.

ಕೆಲಸವಿಲ್ಲದ ಜನ ತಮ್ಮ ಬಗ್ಗೆ ಏನೇನೋ ಮಾತನಾಡುತ್ತಾರೆ. ಬೇರೆಯವರ ಖಾಸಗಿ ವಿಚಾರಗಳನ್ನು ಮಾತನಾಡುತ್ತಾ ಕಾಲಹರಣ ಮಾಡುವುದೇ ಇವರ ಕೆಲಸ. ಇಂತಹವರಿಂದ ದೂರ ಸರಿಯುವುದೇ ಲೇಸು ಎಂದು ತೀರ್ಮಾನಿಸಿ ಮನೆ ಅಷ್ಟೇ ಅಲ್ಲ ದೇಶವನ್ನೇ ಬಿಟ್ಟು ಹೋಗಲು ನಿರ್ಧರಿಸಿದ್ದಾರೆ. (ಏಜೆನ್ಸೀಸ್)

English summary
Actress Ranjitha decided relocate to America. There is flutter among people in the multi-storey. It is being said that some people pick up quarrels frequently with Ranjitha family. Following this, Ranjitha has decided to vacate the house.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada