For Quick Alerts
  ALLOW NOTIFICATIONS  
  For Daily Alerts

  ತಂಗಿ ಕುರಿತು ಭಾವುಕ ಸಾಲುಗಳನ್ನು ಬರೆದ ನಟಿ ಸಾಯಿ ಪಲ್ಲವಿ

  |

  ನಟಿ ಸಾಯಿ ಪಲ್ಲವಿ, ಸಾಮಾಜಿಕ ಜಾಲತಾಣದಲ್ಲಿ ಇದ್ದಾರಾದರೂ ಅಷ್ಟೇನು ಸಕ್ರಿಯವಲ್ಲ. ಆಗಾಗ್ಗೆ ಅಷ್ಟೆ ಪೋಸ್ಟ್‌ಗಳನ್ನು ಮಾಡುತ್ತಿರುತ್ತಾರೆ. ತಮ್ಮ ಸಿನಿಮಾ ಬಗ್ಗೆಯೂ ಪೋಸ್ಟ್ ಮಾಡುವುದು ಕಡಿಮೆಯೇ.

  ನಾನು ಸ್ಲಮ್ ಅಲ್ಲ!! | Duniya Rashmi | Jaggi Jaganath | Om Sai Prakash | Filmibeat Kannada

  ಆದರೆ ನಿನ್ನೆ ಸಾಯಿ ಪಲ್ಲವಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಾಕಿದ್ದು, ತಮ್ಮ ಹಾಗೂ ತಮ್ಮ ತಂಗಿಯ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

  ತಂಗಿಯ ಬಗ್ಗೆ ಭಾವುಕವಾಗಿ ಬರೆದಿರುವ ಸಾಯಿ ಪಲ್ಲವಿ, ತಂಗಿಯ ತ್ಯಾಗ, ಪ್ರೀತಿ, ತಾಳ್ಮೆ, ಜಾಣ್ಮೆ, ಮಾತು ಎಲ್ಲವನ್ನೂ ಹೊಗಳಿದ್ದು, ತಂಗಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.

  ಪೂಜಾ ಕನ್ನನ್ ಹುಟ್ಟುಹಬ್ಬ ಇಂದು

  ಪೂಜಾ ಕನ್ನನ್ ಹುಟ್ಟುಹಬ್ಬ ಇಂದು

  ಸಾಯಿ ಪಲ್ಲವಿ ತಂಗಿ ಪೂಜಾ ಕನ್ನನ್ ಹುಟ್ಟುಹಬ್ಬ ಇಂದು. ಸಾಯಿ ಪಲ್ಲವಿ ಮತ್ತು ಪೂಜಾ ಕನ್ನನ್ ಬಹಳ ಆತ್ಮೀಯರಾಗಿದ್ದು, ಆಗಾಗ್ಗೆ ಸಾಯಿ ಪಲ್ಲವಿ ತಂಗಿಯ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ.

  ನನ್ನ ತಂಗಿ ತ್ಯಾಗಮಯಿ: ಸಾಯಿ ಪಲ್ಲವಿ

  ನನ್ನ ತಂಗಿ ತ್ಯಾಗಮಯಿ: ಸಾಯಿ ಪಲ್ಲವಿ

  'ನೀನು ಮಾಡಿದ ತ್ಯಾಗ, ನೀನು ಮರೆಮಾಚಿದ ಸಹಾಯಗಳು, ನನ್ನ ಜೀವನಕ್ಕೆ ನೀನು ತುಂಬಿದ ಅರ್ಥ, ನೀನು ತುಂಬಿದ ನಗು, ನನ್ನ ಜೀವನದಲ್ಲಿ ನೀನು ಇರುವುದೇ ನಾನು ಮಾಡಿದ ಪುಣ್ಯ ಎಂದು ತಂಗಿಯನ್ನು ಹೊಗಳಿ ಅಟ್ಟಕ್ಕೆ ಏರಿಸಿದ್ದಾರೆ ಸಾಯಿ ಪಲ್ಲವಿ.

  ನೂರು ವರ್ಷವಾದರೂ ನನಗೆ ಮಗುವೆ: ಸಾಯಿ ಪಲ್ಲವಿ

  ನೂರು ವರ್ಷವಾದರೂ ನನಗೆ ಮಗುವೆ: ಸಾಯಿ ಪಲ್ಲವಿ

  ನಿನಗೆ 100 ವರ್ಷವಾಗಿದ್ದರೂ ಸಹ ನೀನು ನನಗೆ ಮಗುವೇ, ನಾನು ನಿನ್ನನ್ನು ಎಷ್ಟು ಪ್ರೀತಿಸುತ್ತೇನೆ ಎಂದು ಅರ್ಥವಾಗಬೇಕೆಂದರೆ ನೀನು ನಾನಾಗಬೇಕು, ನಿನ್ನ ಹುಟ್ಟುಹಬ್ಬವಾದ ಇಂದು, ನಿನ್ನನ್ನು ಪಡೆದ ನಾನು ಎಷ್ಟು ಅದೃಷ್ಟಶಾಲಿ ಎಂದು ಅರ್ಥವಾಗುವ ದಿನ ಎಂದು ಸಾಯಿ ಪಲ್ಲವಿ ತಂಗಿ ಪೂಜಾಗಾಗಿ ಹೇಳಿದ್ದಾರೆ.

  ಸಿನಿಮಾ ಪ್ರವೇಶಿಸಲು ಸಾಯಿ ಪಲ್ಲವಿ ತಂಗಿ ತಯಾರು

  ಸಿನಿಮಾ ಪ್ರವೇಶಿಸಲು ಸಾಯಿ ಪಲ್ಲವಿ ತಂಗಿ ತಯಾರು

  ಸಾಯಿ ಪಲ್ಲವಿ ತಂಗಿಯ ಹೆಸರು ಪೂಜಾ ಕನ್ನನ್, ಆಕೆ ಈಗಾಗಲೇ ಕೆಲವು ಶಾರ್ಟ್ ಸಿನಿಮಾಗಳಲ್ಲಿ ನಟಿಸಿದ್ದು, ಸಿನಿಮಾ ಉದ್ಯಮಕ್ಕೆ ಪ್ರವೇಶಿಸುವ ಹಾದಿಯಲ್ಲಿದ್ದಾರೆ. ಸಿನಿಮಾ ಒಂದರ ಶೂಟಿಂಗ್‌ನಲ್ಲಿ ಅವರು ತೊಡಗಿಸಿಕೊಂಡಿದ್ದಾರೆ.

  English summary
  Actress Sai Pallavi wrote an emotional message for her sister Pooja Kannan's birthday. Pooja Kannan is Sai Pallavi's younger sister.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X