For Quick Alerts
  ALLOW NOTIFICATIONS  
  For Daily Alerts

  Sangeetha Bhatt: ಮೀಟೂ ಪ್ರಕರಣದ ಬಳಿಕ ಮರೆಯಾಗಿದ್ದ ನಟಿ ಸಂಗೀತಾ ಭಟ್ ರೀ-ಎಂಟ್ರಿ!

  |

  ಚಿತ್ರರಂಗದಲ್ಲಿ ಭಾರಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದ ವಿವಾದ ಅಂದರೆ ಅದು ಮೀಟೂ ಪ್ರಕರಣ. ಈ ವಿವಾದ ಯಾವುದೋ ಒಂದು ಸಿನಿಮಾರಂಗಕ್ಕೆ ಸೀಮಿತ ಆಗದೆ, ಬಾಲಿವುಡ್, ಟಾಲಿವುಡ್, ಕಾಲಿವುಡ್ ಹೀಗೆ ಎಲ್ಲಾ ವುಡ್‌ಗಳಲ್ಲೂ ಸಿಕ್ಕಾ ಪಟ್ಟೆ ಸದ್ದು ಮಾಡಿತ್ತು. ದೇಶಾದ್ಯಂತ ಈ ಪ್ರಕರಣ ಸಿಕ್ಕಾಪಟ್ಟೆ ಸುದ್ದಿ ಮಾಡಿತ್ತು.

  ಬಹುತೇಕ ನಟಿಯರು 'ಮೀಟೂ' ಮೂವ್‌ಮೆಂಟ್‌ನಲ್ಲಿ ಭಾಗಿಯಾಗಿ ತಮಗೆ ಆದ ಅನ್ಯಾಯಗಳನ್ನು ಒಂದೊಂದಾಗಿಯೇ ಬಿಚ್ಚಿಡುತ್ತಾ ಬಂದಿದ್ದರು. ಈ 'ಮೀಟೂ' ಪ್ರಕರಣ ಕನ್ನಡದಲ್ಲೂ ಹೆಚ್ಚು ಸದ್ದು ಮಾಡಿತ್ತು. ಸ್ಯಾಂಡಲ್‌ವುಡ್‌ ನಟಿಯರ ಪೈಕಿ, ನಟಿ ಶೃತಿ ಹರಿಹರನ್, ಸಂಗೀತಾ ಭಟ್ ಕೂಡ 'ಮೀಟೂ' ಪ್ರಕರಣದ ಬಗ್ಗೆ ಧ್ವನಿ ಎತ್ತಿದ್ದರು. ತಮಗೆ ಆದ ಶೋಷಣೆ ಬಗ್ಗೆ ಮಾತನಾಡಿದ್ದರು.

  Shruti Hariharan: ಗ್ಲಾಮರಸ್ ಲುಕ್‌ನಲ್ಲಿ ಕಿಕ್ ಕೊಟ್ಟ ಶ್ರುತಿ ಹರಿಹರನ್!Shruti Hariharan: ಗ್ಲಾಮರಸ್ ಲುಕ್‌ನಲ್ಲಿ ಕಿಕ್ ಕೊಟ್ಟ ಶ್ರುತಿ ಹರಿಹರನ್!

  ಆ ಬಳಿಕ ನಟಿ ಶೃತಿ ಮತ್ತು ಸಂಗೀತಾ ಭಟ್ ಇಬ್ಬರೂ ಚಿತ್ರರಂಗದಿಮದ ದೂರ ಉಳಿದರು. ಆದರೆ ಈಗ ಇಬ್ಬರೂ ಚಿತ್ರರಂಗಕ್ಕೆ ಮತ್ತೆ ಕಮ್‌ಬ್ಯಾಕ್‌ ಮಾಡುತ್ತಿದ್ದಾರೆ. ನಟಿ ಸಂಗೀತಾ ಭಟ್ ತಾವು ಮತ್ತೆ ಸಿನಿಮಾದಲ್ಲಿ ಅಭಿನಯಿಸುವ ಬಗ್ಗೆ ಅಧಿಕೃತವಾಗಿ ಹೇಳಿಕೊಂಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿಕೊಂಡಿದ್ದಾರೆ.

  ಸಂಗೀತಾ ಭಟ್ ಕಮ್‌ ಬ್ಯಾಕ್!

  ಸಂಗೀತಾ ಭಟ್ ಕಮ್‌ ಬ್ಯಾಕ್!

  ನಟಿ ಸಂಗೀತಾ ಭಟ್ ಉತ್ತಮ ನಟಿ ಎನ್ನುವುದರಲ್ಲಿ ಅನುಮಾನವಿಲ್ಲ. ಆಕೆ ಸಾಕಷ್ಟು ಸಿನಿಮಾಗಳ ಮೂಲಕ ತಮ್ಮ ಅಭಿನಯದ ಛಾಪು ಮೂಡಿಸಿದ್ದಾರೆ. ಇಷ್ಟು ದಿನ ಬಣ್ಣ ಹಚ್ಚದೆ ದೂರ ಉಳಿದಿದ್ದ ನಟಿ ಸಂಗೀತಾ ಭಟ್ ಈಗ ಮತ್ತೆ ಸಿನಿಮಾಗೆ ಕಮ್‌ ಬ್ಯಾಕ್ ಮಾಡಿದ್ದಾರೆ. ಈ ವಿಚಾರವನ್ನು ನಟಿ ಸಂಗೀತ ಭಟ್ ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದಾರೆ. 'ರೂಪಾಂತರ' ಸಿನಿಮಾದ ಫೋಟೊಗಳನ್ನು ಹಂಚಿಕೊಂಡಿದ್ದಾರೆ.

  ನಟ ಕಿಶೋರ್‌ಗೆ ಜೊತೆಯಾದ ಸಂಗೀತ ಭಟ್!

  ಸಂಗೀತಾ ಭಟ್ ಮುಂದಿನ ಸಿನಿಮಾವನ್ನು ನಟ ಕಿಶೋರ್ ಜೊತೆಗೆ ಮಾಡುತ್ತಿದ್ದಾರೆ. ಈ ವಿಚಾರವನ್ನು ಹಂಚಿಕೊಂಡು "ನಮಸ್ಕಾರ, ಈ ಪೋಸ್ಟ್‌ನೊಂದಿಗೆ, ನನ್ನ ಬಹುನಿರೀಕ್ಷಿತ ಚಲನಚಿತ್ರಗಳಿಗೆ ಪುನರಾಗಮನವನ್ನು ಘೋಷಿಸಲು ನಾನು ತುಂಬ ಸಮಯ ಕಾತರದಿಂದ ಕಾಯುತ್ತಿದ್ದೆ. ನಟನೆ ಯಾವಾಗಲೂ ನನ್ನ ಮೊದಲ ಪ್ರೀತಿ, ಅದರಿಂದ ದೂರ ಉಳಿಯುವುದು ನನ್ನ ಜೀವನದ ಕಠಿಣ ಭಾಗವಾಗಿತ್ತು. ನೀವೆಲ್ಲರೂ ಈ ಹಿಂದೆ ನನ್ನ ಕೆಲಸಕ್ಕೆ ತುಂಬಾ ಮೆಚ್ಚುಗೆ ಹಾಗೂ ಬೆಂಬಲ ನೀಡಿದ್ದೀರಿ. ನಿಮ್ಮ ಪ್ರೀತಿ,ವಿಶ್ವಾಸ ಹಾಗೂ ಬೆಂಬಲ ಸದಾಕಾಲ ಹೀಗೆ ನನ್ನ ಕೆಲಸದ ಮೇಲೆ ಇರುತ್ತದೆ ಎಂದು ನಾನು ಬಲವಾಗಿ ನಂಬುತ್ತೇನೆ. ನಾನು ಭಾಗವಾಗಿರುವ ಪ್ರಸ್ತುತ ಚಲನಚಿತ್ರದ ಕೆಲವು ಚಿತ್ರಪಟಗಳನ್ನೂ ಹಂಚಿಕೊಳ್ಳುತ್ತಿದ್ದೇನೆ. ಚಿತ್ರೀಕರಣದ ಅಂತಿಮ ಹಂತದಲ್ಲಿದ್ದೇವೆ. ನಾನು ಪ್ರಸ್ತುತ ಭಾಗವಾಗಿರುವ ಇತರ ಚಿತ್ರಗಳನ್ನು ಶೀಘ್ರದಲ್ಲೇ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ಇನ್‌ಸ್ಟಾಗ್ರಾಮ್ ನಲ್ಲಿ ನನ್ನೊಂದಿಗೆ ಸಂಪರ್ಕದಲ್ಲಿರಿ. ಸುಂದರ ನೆನಪುಗಳಿಗಾಗಿ 'ರೂಪಾಂತರ' ತಂಡಕ್ಕೆ ಧನ್ಯವಾದಗಳು." ಎಂದು ಸಂಗೀತಾ ಭಟ್ ಬರೆದುಕೊಂಡಿದ್ದಾರೆ.

  'ಎರಡನೇ ಸಲ' ಚಿತ್ರದ ವೇಳೆ ನಟಿಗೆ ಮುಜುಗರ

  'ಎರಡನೇ ಸಲ' ಚಿತ್ರದ ವೇಳೆ ನಟಿಗೆ ಮುಜುಗರ

  ನಟಿ ಸಂಗೀತ ಭಟ್ ಸ್ಯಾಂಡಲ್‌ವುಡ್ 'ಮೀಟೂ' ಪ್ರಕರಣದಲ್ಲಿ ಹೆಚ್ಚಿನ ಸಂಚಲನ ಮೂಡಿಸಿದ್ದರು. ಸಂಗೀತ ಭಟ್ 'ಮೀಟೂ' ಪ್ರಕರಣದಲ್ಲಿ ಧ್ವನಿ ಎತ್ತಲು ಕಾರಣ ಆಗಿದ್ದು, 'ಎರಡನೇ ಸಲ' ಸಿನಿಮಾ. ಈ ಚಿತ್ರದ ಶೂಟಿಂಗ್ ವೇಳೆ ಆಕೆಯ ಅರೆ ಬೆತ್ತಲೆ ದೃಶ್ಯಗಳನ್ನು ಬಲವಂತವಾಗಿ ಶೂಟ್ ಮಾಡಲಾಗಿದೆ ಎಂದು ಆರೋಪ ಮಾಡಿದ್ದರು.

  'ಮೀಟೂ' ಬಳಿಕ ಚಿತ್ರರಂಗಕ್ಕೆ ಟಾಟಾ!

  'ಮೀಟೂ' ಬಳಿಕ ಚಿತ್ರರಂಗಕ್ಕೆ ಟಾಟಾ!

  ಮೀಟೂ ಪ್ರಕರಣದ ಬಳಿಕ ಕೊನೆಯದಾಗಿ ಸಂಗೀತ ಭಟ್ ಕಾಣಿಸಿಕೊಂಡಿದ್ದು ದಯವಿಟ್ಟು ಗಮನಿಸಿ ಚಿತ್ರದಲ್ಲಿ. ಈ ಚಿತ್ರದಲ್ಲಿ ಬಳಿಕ ಸಂಗೀತಾ ಕೆಲವು ಚಿತ್ರಗಳಲ್ಲಿ ಸಣ್ಣ ಪಾತ್ರಗಳಲ್ಲಿ ಕಾಣಿಸಿಕೊಂಡರು. ಆದರೆ ಇದೇ ಮೊದಲ ಬಾರಿಗೆ ನಾಯಕಿಯಾಗಿ ಕಮ್‌ಬ್ಯಾಕ್ ಮಾಡುತ್ತಿದ್ದಾರೆ. ಈ ಬಗ್ಗೆ ಸಂತಸ ಹಂಚಿಕೊಂಡಿದ್ದಾರೆ.

  English summary
  Kannada Actress Sangeetha Bhatt Come Back After Mee Too Movement, She Share Daitail
  Sunday, March 20, 2022, 12:47
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X