»   » ಹೊಸ ಬೆಳಕು 'ಸರಿತಾ'ಗೆ ತಮಿಳಿನಲ್ಲಿ ಹೊಸ ಇನಾಮ್

ಹೊಸ ಬೆಳಕು 'ಸರಿತಾ'ಗೆ ತಮಿಳಿನಲ್ಲಿ ಹೊಸ ಇನಾಮ್

By: ಶಂಕರ್, ಚೆನ್ನೈ
Subscribe to Filmibeat Kannada

ಚಲಿಸುವ ಮೋಡಗಳು, ಹೊಸ ಬೆಳಕು, ಮೌನಗೀತೆ, ಕಾಮನಬಿಲ್ಲು, ಮುಗಿಲ ಮಲ್ಲಿಗೆ, ಭಕ್ತ ಪ್ರಹ್ಲಾದ, ಎರಡು ರೇಖೆಗಳು ಸೇರಿದಂತೆ ಮುಂತಾದ ಚಿತ್ರಗಳ ಮೂಲಕ ಜನಮನ ಸೂರೆಗೊಂಡ ತಾರೆ ಸರಿತಾ ಇದೀಗ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದಾರೆ.

ತನ್ನ ಪತಿ ಮುಕೇಶ್ ಎರಡನೇ ಮದುವೆಯಾಗಿದ್ದು, ನೃತ್ಯಪಟು ಮಿಥಿಲ್ ದೇವಿಕಾ ಅವರ ಕೈಹಿಡಿದದ್ದು ಸರಿತಾ ಸಾಂಸಾರಿಕ ಜೀವನ ತಾಳತಪ್ಪಿತ್ತು. ಈಗವರು ಸ್ವಲ್ಪ ರಿಲ್ಯಾಕ್ಸ್ ಆದಂತೆ ಕಾಣುತ್ತಿದ್ದಾರೆ. ತಮಿಳಿನ 'ಇನಾಂ' ಚಿತ್ರಕ್ಕೆ ಸಹಿಹಾಕಿದ್ದು ಶೀಘ್ರದಲ್ಲೇ ಚಿತ್ರ ಸೆಟ್ಟೇರಲಿದೆ. ['ಕಾಮನಬಿಲ್ಲು' ಸರಿತಾ ಸಂಸಾರದಲ್ಲಿ 'ತಪ್ಪಿದ ತಾಳ']

Actress Saritha

ಸಂತೋಷ್ ಶಿವನ್ ಆಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರದ ಶ್ರೀಲಂಕಾದಲ್ಲಿ ತಮಿಳರ ಮೇಲೆ ಆಗುತ್ತಿರುವ ದಬ್ಬಾಳಿಕೆ ದೌರ್ಜನ್ಯದ ವಿರುದ್ಧ ಬೆಳಕು ಚೆಲ್ಲಲಿದೆ. ಇತ್ತೀಚೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಇದನ್ನು ಸ್ವತಃ ಸಂತೋಷ್ ಶಿವನ್ ಅವರು ಹೇಳಿದರು.

ಚಿತ್ರದಲ್ಲಿ ಸರಿತಾ ಅವರು ಸುನಾಮಿಕಾ ಪಾತ್ರ ಪೋಷಿಸಲಿದ್ದಾರೆ. ಸುನಾಮಿಯ ಕಾರಣ ತನ್ನೆಲ್ಲಾ ಬಂಧು ಬಳಗ ಕಳೆದುಕೊಂಡು ಅನಾಥೆಯಾಗಿ ಅವರು ಕಾಣಿಸಿಕೊಳ್ಳಲಿದ್ದಾರೆ. ಅದೇ ರೀತಿ ಶ್ರೀಲಂಕಾ ಯುದ್ಧದಲ್ಲಿ ತಂದೆತಾಯಿಯನ್ನು ಕಳೆದುಕೊಂಡ ಅನಾಥರಾದ ಮಕ್ಕಳಿಗೆ ತಾಯಿಯಾಗಿ ಅವರ ಪಾತ್ರ ಇರುತ್ತದೆ.

ಅನಾಥ ಮಕ್ಕಳನ್ನು ತಾನು ಹೆತ್ತ ಮಕ್ಕಳಂತೆ ನೋಡಿಕೊಳ್ಳುವ ಸುನಾಮಿಕಾ ಮತ್ತೆ ಶ್ರೀಲಂಕಾ ಅಂತರ್ಯುದ್ಧದಲ್ಲಿ ಏನಾಗುತ್ತದೆ ಎಂಬುದೇ ಚಿತ್ರದ ಕಥಾವಸ್ತು. 204ರಲ್ಲಿ ತೆಲುಗಿನ ಅರ್ಜುನ್ ಚಿತ್ರದಲ್ಲಿ ಸರಿತಾ ಅಭಿನಯಿಸಿದ್ದರು. ಅದಾದ ಬಳಿಕ ಅವರು ಬಣ್ಣಹಚ್ಚಲಿಲ್ಲ. ಇದೀಗ ಹದಿನಾಲ್ಕು ವರ್ಷಗಳ ಬಳಿಕ ಮತ್ತೆ ಬೆಳ್ಳಿತೆರೆಗೆ ಬರುತ್ತಿದ್ದಾರೆ.

English summary
Actress Saritha, who was in news recently after her husband and actor Mukesh married dancer Methil Devika, is all set to make a comeback into the industry. According to sources, she will be making her re-entry with a Santhosh Sivan movie. 
Please Wait while comments are loading...