»   » ರಾಘವೇಂದ್ರ ರಾಜ್ ಕುಮಾರ್ ಸಿನಿಮಾದಲ್ಲಿ ಸರಿತಾ ನಟನೆ

ರಾಘವೇಂದ್ರ ರಾಜ್ ಕುಮಾರ್ ಸಿನಿಮಾದಲ್ಲಿ ಸರಿತಾ ನಟನೆ

Posted By:
Subscribe to Filmibeat Kannada
ರಾಘವೇಂದ್ರ ರಾಜ್ ಕುಮಾರ್ ಸಿನಿಮಾದಲ್ಲಿ ಸರಿತಾ ನಟನೆ | Filmibeat Kannada

ನಟಿ ಸರಿತಾ ಈಗ ಮತ್ತೊಂದು ಕನ್ನಡ ಸಿನಿಮಾ ಮಾಡುತ್ತಿದ್ದಾರೆ. ಇತ್ತೀಚಿಗಷ್ಟೆ ರವಿಚಂದ್ರನ್ ಪುತ್ರ ಮನೋರಂಜನ್ ನಟನೆಯ 'ಬೃಹಸ್ಪತಿ' ಸಿನಿಮಾದಲ್ಲಿ ಸರಿತಾ ಕಾಣಿಸಿಕೊಂಡಿದ್ದರು. ಅದರ ಬಳಿಕ ರಚಿತಾ ರಾಮ್ ನಟನೆಯ 'ಅಯೋಗ್ಯ' ಸಿನಿಮಾದಲ್ಲಿಯೂ ಅವರು ನಟಿಸುತ್ತಿದ್ದಾರೆ. ಇವುಗಳ ನಂತರ ಮತ್ತೆ ಹೊಸದೊಂದು ಸಿನಿಮಾ ಮಾಡಲು ಸರಿತಾ ಒಪ್ಪಿದ್ದಾರೆ.

ವಿಶೇಷ ಅಂದರೆ ಸರಿತಾ ಸದ್ಯ ನಟಿಸುತ್ತಿರುವುದು 'ಚಿಲ್ಲಂ' ಸಿನಿಮಾದಲ್ಲಿ. ಈ ಸಿನಿಮಾ ಇತ್ತೀಚಿಗಷ್ಟೆ ದೊಡ್ಡ ಸುದ್ದಿ ಮಾಡಿತ್ತು. ಕಾರಣ ಈ ಸಿನಿಮಾ ಮೂಲಕ ಅನೇಕ ವರ್ಷಗಳ ನಂತರ ನಟ ರಾಘವೇಂದ್ರ ರಾಜ್ ಕುಮಾರ್ ನಟಿಸುತ್ತಿದ್ದಾರೆ. ವಿಲನ್ ಆಗಿ ರಾಘವೇಂದ್ರ ರಾಜ್ ಕುಮಾರ್ ಈ ಚಿತ್ರ ಮಾಡುತ್ತಿದ್ದು, ಈ ಸಿನಿಮಾಗೆ ಈಗ ಸರಿತಾ ಎಂಟ್ರಿ ಕೊಟ್ಟಿದ್ದಾರೆ.

Actress Saritha will do a role in Chilam kannada movie

ನಿರ್ದೇಶಕಿ ಚಂದ್ರಕಲಾ ಈ ಚಿತ್ರದ ಸಾರಥ್ಯ ವಹಿಸಿಕೊಂಡಿದ್ದಾರೆ. ಸಿನಿಮಾದ ಕಥೆ ಕೇಳಿ ನಟಿ ಸರಿತಾ ಸಂತೋಷದಿಂದ ಚಿತ್ರದಲ್ಲಿ ನಟಿಸಲು ಸಮ್ಮತಿ ಸೂಚಿಸಿದ್ದಾರಂತೆ. ಇದುವರೆಗೆ ಸರಿತಾ ಕನ್ನಡದಲ್ಲಿ 20ಕ್ಕೂ ಹೆಚ್ಚು ಸಿನಿಮಾ ಮಾಡಿದ್ದಾರೆ. ರಾಜ್ ಕುಮಾರ್ ಅವರ 'ಭಕ್ತ ಪ್ರಹ್ಲಾದ', 'ಕಾಮನಬಿಲ್ಲು', 'ಚಲಿಸುವ ಮೋಡಗಳು' ಸಿನಿಮಾಗಳಲ್ಲಿ ಸಿರಿತಾ ಅಭಿನಯಿಸಿದ್ದರು. ರಾಜ್ ಕುಮಾರ್ ಜೋಡಿಯಾಗಿದ್ದ ಸರಿತಾ ಈಗ ರಾಘವೇಂದ್ರ ರಾಜ್ ಕುಮಾರ್ ಸಿನಿಮಾದಲ್ಲಿ ನಟಿಸುತ್ತಿರುವುದು ವಿಶೇಷ.

ಇನ್ನು ಕನ್ನಡ ಹೊರತು ಪಡಿಸಿ ಸರಿತಾ ಸದ್ಯ ತಮಿಳಿನಲ್ಲಿ ಒಂದು ಸಿನಿಮಾ ಹಾಗೂ ತೆಲುಗಿನಲ್ಲಿ ಒಂದು ಸಿನಿಮಾ ಮಾಡುತ್ತಿದ್ದಾರೆ.

English summary
Actress Saritha will do a role in Ragavendra Rajkumar's Chilam kannada movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X