»   » ಬಾಲಿವುಡ್ ಗೆ ಜಿಗಿದ ಸ್ಯಾಂಡಲ್ ವುಡ್ ಚಿಗರೆ ಶರ್ಮಿಳಾ

ಬಾಲಿವುಡ್ ಗೆ ಜಿಗಿದ ಸ್ಯಾಂಡಲ್ ವುಡ್ ಚಿಗರೆ ಶರ್ಮಿಳಾ

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ಚಿತ್ರರಂಗದ ಚಿಗರೆ ಶರ್ಮಿಳಾ ಮಾಂಡ್ರೆ ಅವರು ತೆಲುಗು, ತಮಿಳು ಚಿತ್ರರಂಗದಲ್ಲಿ ಒಂದು ಸುತ್ತು ಹಾಕಿದ ಬಳಿಕ ಇದೀಗ ಬಾಲಿವುಡ್ ಗೆ ಜಿಗಿದಿದ್ದಾರೆ. ಖಲೀದ್ ಮೊಹಮ್ಮದ್ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ ಇದಾಗಿದ್ದು, ಚಿತ್ರಕ್ಕೆ 'ಕಥಾ' ಎಂದು ಹೆಸರಿಡಲಾಗಿದೆ.

ಈ ಹಿಂದೆ ಬಿಡುಗಡೆಯಾಗಿದ್ದ ಹಿಂದಿಯ 'ಕಥಾ' (1983) ಚಿತ್ರವನ್ನೇ ರೀಮೇಕ್ ಮಾಡಲಾಗುತ್ತಿದೆ. ಸರಿಸುಮಾರು 100ಕ್ಕೂ ಹೆಚ್ಚು ನಟಿಯರನ್ನು ಆಡಿಷನ್ ಮಾಡಲಾಗಿದ್ದು ಕಡೆಗೆ ಶರ್ಮಿಳಾ ಅವರಿಗೆ ಚಾನ್ಸ್ ಸಿಕ್ಕಿದೆಯಂತೆ. [ಕನ್ನಡದ 'ಮುಮ್ತಾಜ್' ಆದ ಶರ್ಮಿಳಾ ಮಾಂಡ್ರೆ]

Actress Sharmila Mandre

ಮೂಲ ಚಿತ್ರದಲ್ಲಿ ದೀಪ್ತಿ ನಾವಲ್ ಅವರು ಪೋಷಿಸಿದ್ದ ಪಾತ್ರವನ್ನು ಶರ್ಮಿಳಾ ಪೋಷಿಸುತ್ತಿದ್ದಾರೆ. ನಾಸಿರುದ್ದೀನ್ ಶಾ, ಫರೂಕ್ ಶೇಕ್ ಮುಖ್ಯಭೂಮಿಕೆಯಲ್ಲಿದ್ದ ಆ ಚಿತ್ರಕ್ಕೆ ಸಾಯ್ ಪರಂಜಪೈ ಅವರು ಆಕ್ಷನ್ ಕಟ್ ಹೇಳಿದ್ದರು. ಮುಂಬೈನ ವಠಾರ ಒಂದರಲ್ಲಿ ನಡೆಯುವ ಕಥೆಯೇ 'ಕಥಾ' ಚಿತ್ರದ ಕಥಾವಸ್ತು.

ಶರ್ಮಿಳಾ ಕನ್ನಡದಲ್ಲಿ ಅಭಿನಯಿಸಿದ ಸಿನಿಮಾಗಳಲ್ಲೇ ಮಿಂಚಿದ ಚೆಲುವೆ. ನವಗ್ರಹ, ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ಕೃಷ್ಣ, ಧ್ಯಾನ್ ಜೊತೆ ಸಜನಿ ಸಿನಿಮಾದಲ್ಲಿ ಅಭಿನಯಿಸಿದ್ದ ಶರ್ಮಿಳಾ ಮಾಂಡ್ರೆ ಈಗ ಐದು ವರ್ಷಗಳ ನಂತರ ಧರ್ಮಕೀರ್ತಿರಾಜ್ ಜೊತೆ 'ಮುಮ್ತಾಜ್' ಸಿನಿಮಾದಲ್ಲೂ ಅಭಿನಯಿಸಿದ್ದಾರೆ. ಅವರ ಅಭಿನಯದ 'ಗೋವಾ' ಚಿತ್ರ ಇನ್ನೂ ತೆರೆಕಂಡಿಲ್ಲ. [ಸ್ಯಾಂಡಲ್ ವುಡ್ ಮಹಾಚುನಾವಣೆ 2014 - ಓಟಾಕಿ]

'ನವಗ್ರಹ' ಸಿನಿಮಾದಲ್ಲಿ ಕಣ್ ಕಣ್ಣ ಸಲಿಗೆ ಹಾಡಿನಿಂದ ಪ್ರೇಕ್ಷಕರ ಮನಸೂರೆಗೊಂಡಿದ್ದ ಈ ಯುವ ಜೋಡಿ ಈಗ ಮತ್ತೆ ತೆರೆಮೇಲೆ ಒಂದಾಗ್ತಿರೋದು ಮುಮ್ತಾಜ್ ಸಿನಿಮಾದ ಬಗ್ಗೆ ನಿರೀಕ್ಷೆ ಮೂಡಿಸಿದೆ. ಮುಮ್ತಾಜ್ ಚಿತ್ರಕ್ಕೆ ರಾಘವ ಮುರಳಿ ಆಕ್ಷನ್ ಕಟ್ ಹೇಳುತ್ತಿದ್ದು ನರಸಿಂಹಮೂರ್ತಿ ಕೆ.ಎನ್ ಹಾಗೂ ದಿವ್ಯಾ ನರಸಿಂಹಮೂರ್ತಿ ನಿರ್ಮಾಪಕರು. "ಜನನ ಲವ್ವಲ್ಲಿ ಮರಣ ಫೀಲಲ್ಲಿ, ಇಂತಿ ನಿನ್ನ ಶಾಜಿ" ಎಂಬುದು ಚಿತ್ರದ ಅಡಿಬರಹ. (ಏಜೆನ್ಸೀಸ್)

English summary
Sandalwood beauty Sharmila Mandre to make Bollywood debut in Khalid Mohammed directed Katha. The film is a remake of the 1983 film Katha directed by Sai Paranjpye.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada