»   » ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಗೆ ಪಿತೃ ವಿಯೋಗ

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಗೆ ಪಿತೃ ವಿಯೋಗ

Written By:
Subscribe to Filmibeat Kannada

ಖ್ಯಾತ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ತಂದೆ ಸುರೇಂದ್ರ ಎಸ್.ಶೆಟ್ಟಿ (75) ಮಂಗಳವಾರ (ಅ 11) ಮುಂಬೈನ ಧೀರೂಭಾಯಿ ಕೋಕಿಲಾ ಬೆನ್ ಅಂಬಾನಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನ ಹೊಂದಿದರು.

ಮೃತರು ದಕ್ಷಿಣ ಕನ್ನಡದ ಮಂಗಳೂರಿನ ಕೌಡೂರುನವರಾಗಿದ್ದು, ಪತ್ನಿ ಸುನಂದಾ ಶೆಟ್ಟಿ, ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ, ಶಮಿತಾ ಶೆಟ್ಟಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Actress Shilpa Shetty's father Surendra Shetty breathes his last

ನಗರದ ಅಂಧೇರಿ ಪಶ್ಚಿಮದ ವರ್ಸೋವಾದ ಸ್ವನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಮೃತರ ಅಂತ್ಯಕ್ರಿಯೆ ಬುಧವಾರ ( ಅ 12) ಬೆಳಿಗ್ಗೆ 9.30 ಗಂಟೆಗೆ ವಿಲೇಪಾರ್ಲೆ ಪಶ್ಚಿಮದಲ್ಲಿ ನೇರವೇರಲಿದೆ.

ಮೂಲತಃ ಉದ್ಯಮಿಯಾಗಿದ್ದ ಸುರೇಂದ್ರ ಶೆಟ್ಟಿ, ದಿ ಡಿಸೈರ್ ಎನ್ನುವ ಇಂಡೋ - ಚೈನೀಸ್ ನಾಟಕವನ್ನೂ ನಿರ್ಮಿಸಿದ್ದರು, ಆದರೆ ಕಾರಣಾಂತರದಿಂದ ಅದು ಬಿಡುಗಡೆಯಾಗಿರಲಿಲ್ಲ.

ಕಳೆದ ವರ್ಷ ಮಗಳು ಶಮಿತಾ ಶೆಟ್ಟಿ ಭಾಗವಹಿಸಿದ್ದ 'ಝಲಕ್ ರಿಲೋಡೆಡ್' ರಿಯಾಲಿಟಿ ಶೋ ಸೆಟ್ಟಿಗೆ ಪತ್ನಿ ಸುನಂದಾ ಜೊತೆ ಸುರೇಂದ್ರ ಶೆಟ್ಟಿ ಆಗಮಿಸಿದ್ದರು. (ಚಿತ್ರ: IANS)

English summary
Shilpa Shetty's father Surendra breathed his last on Tuesday (Oct 11) morning at Kokilaben Dhirubhai Ambani Hospital, Mumbai following a cardiac arrest.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada