Just In
Don't Miss!
- Automobiles
ಆಕ್ಸೆಸ್ 125 ಸ್ಕೂಟರ್ ಬೆಲೆಯನ್ನು ಹೆಚ್ಚಿಸಿದ ಸುಜುಕಿ ಮೋಟಾರ್ಸೈಕಲ್
- News
ಕೊಲೆ ಪ್ರಕರಣ: ವಿನಯ್ ಕುಲಕರ್ಣಿ ಜಾಮೀನು ಅರ್ಜಿ ವಜಾಗೊಳಿಸಿದ ಹೈಕೋರ್ಟ್!
- Sports
ಆಸ್ಟ್ರೇಲಿಯಾ ತಂಡದ ಬದ್ಧತೆ ಹಾಗೂ ಪೈನ್ ನಾಯಕತ್ವವನ್ನು ಪ್ರಶ್ನಿಸಿದ ಮಾಜಿ ಆಸಿಸ್ ಕ್ರಿಕೆಟಿಗ
- Lifestyle
ಈ 3 ವಸ್ತುಗಳನ್ನು ಹಾಕಿ ಮಾಡಿದ ಜ್ಯೂಸ್ ಕುಡಿದರೆ ಬೊಜ್ಜು ಕರುಗುತ್ತೆ, ಸೌಂದರ್ಯ ಹೆಚ್ಚುತ್ತೆ
- Finance
1986ರಿಂದ 2021 ಸೆನ್ಸೆಕ್ಸ್ ಪ್ರಮುಖ ಮೈಲುಗಲ್ಲುಗಳು: 50,000 ಪಾಯಿಂಟ್ ದಾಖಲೆ ಹಾದಿ
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ನನ್ನ ಹೆಸರಿಗೆ ಕಳಂಕ ತರಲು ಪಿತೂರಿ: ಶ್ರುತಿ
ಈ ಘಟನೆ ನಡೆದು ಎರಡು ತಿಂಗಳಾದ ಮೇಲೆ ಈಗ ಇವಳು ಪೊಲೀಸ್ ಸ್ಟೇಷನ್ ಗೆ ಹೋಗದೆ ಮೀಡಿಯಾಗೆ ಯಾಕೆ ಬಂದಳು. ಈ ವಿಶುಯಲ್ಸ್ ಮೀಡಿಯಾಗೆ ಹ್ಯಾಗೆ ಸಿಗುತ್ತವೆ? ನಾನು ಹಲ್ಲೆ ಮಾಡಿದ್ದೇ ನಿಜವಾದರೆ ಅವರ ಯಜಮಾನರಿರಲಿಲ್ಲವೇ, ಅವರ ಅಪ್ಪ ಇರಲಿಲ್ಲವಾ? ಅವರನ್ನೆಲ್ಲಾ ಕರೆದುಕೊಂಡು ಹೋಗಿ ಪೊಲೀಸ್ ಠಾಣೆಯಲ್ಲಿ ದೂರು ಕೊಡಬಹುದಿತ್ತಲ್ಲವೇ?
ಈಗ ಇರುವ ಧೈರ್ಯ ಆಗಲು ಇತ್ತಲ್ಲವೇ? ಒಂದೂವರೆ ತಿಂಗಳು ಸುಮ್ಮನೆ ಇರುವಂತಹದ್ದು ಏನಾಗಿತ್ತು ಇವರಿಗೆ. ನಾನು ಹಲ್ಲೆ ಮಾಡಿದ್ದು ನಿಜವಾಗಿದ್ದರೆ ಇವರು ಖಂಡಿತ ಆಗಲೇ ದೂರು ಕೊಡುತ್ತಿದ್ದರು. ಹಲ್ಲೆ ಮಾಡಿದ ಮೇಲೆ ಯಾರು ತಾನೆ ಸುಮ್ಮನೆ ಕೂತಿರಲು ಸಾಧ್ಯ. [ಇದು ಕೇವಲ ಅಲ್ಪವಿರಾಮ ಅಷ್ಟೇ, ಫುಲ್ ಸ್ಟಾಪ್ ಅಲ್ಲ]
ನಾನು ಅವಳನ್ನು ಎಷ್ಟು ಪ್ರೀತಿಯಿಂದ ಸಾಕಿದ್ದೀನಿ ಎಂದರೆ ನೀವು ಅವಳನ್ನೇ ಕೇಳಿನೋಡಿ. ಅವರ ಯಜಮಾನರು, ತಾಯಿಗಿಂತಲೂ ಹೆಚ್ಚು ಪ್ರೀತಿಯಿಂದ ಸಾಕಿದ್ದೀನಿ. ಈಗ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ. ಇದರ ಹಿಂದೆ ಯಾರಿದ್ದಾರೆ ಎಂಬುದೂ ನನಗೆ ಗೊತ್ತು. ಆಕೆ ಕೇಸ್ ಕೊಡ್ತಾರಾ, ನಾನೇನು ಮಾಡಬೇಕು ಎಂಬುದನ್ನು ನನ್ನ ಲಾಯರ್ ಗಳನ್ನು ಸಂಪರ್ಕಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ.
ನನ್ನ ಹೆಸರನ್ನು ಹಾಳು ಮಾಡಬೇಕು ಎಂದು ಇಷ್ಟೆಲ್ಲಾ ಪಿತೂರಿ ಮಾಡುತ್ತಿದ್ದಾರಲ್ಲಾ ಅವರ ಮೇಲೆ ಕ್ರಮ ಕೈಗೊಳ್ಳುತ್ತೇನೆ. ಈ ವಿಚಾರದಲ್ಲಿ ನಾನಂತೂ ಸುಮ್ಮನೆ ಕೂರಲ್ಲ. ಆಕೆ ನನ್ನ ಮೇಲೆ ಮಾಡುತ್ತಿರುವ ಆರೋಪಗಳಿಗೆ ಆಕೆಯ ಬಳಿ ಸಾಕ್ಷಾಧಾರಗಳಿರಬೇಕಲ್ಲಾ. ಮೇಲೆ ಭಗವಂತ ಇದ್ದಾನೆ. ನಾನು ಅವರ ತಾಯಿಗಿಂತಲೂ ಹೆಚ್ಚಾಗಿ ಅವರನ್ನು ನೋಡಿಕೊಂಡಿದ್ದೀನಿ.
ನನಗೆ ದ್ರೋಹ ಮಾಡಿದ ಕಾರಣ ಆಕೆಯನ್ನು ಕೆಲಸದಿಂದ ತೆಗೆದಿದ್ದೇನೆಯೇ ಹೊರತು. ಒಂದು ವೇಳೆ ನಾನು ಹಲ್ಲೆ ಮಾಡಿದ್ದರೆ ದೇವರು ನೋಡಿಕೊಳ್ತಾನೆ ಎಂದು ನಾನು ಮಾತ್ರ ಈ ವಿಚಾರದಲ್ಲಿ ಸುಮ್ಮನೆ ಕೂರುವುದಿಲ್ಲ. ನನಗೆ ನ್ಯಾಯ ಸಿಗಬೇಕು. ಐದು ವರ್ಷದಿಂದ ಸಾಕಿ. ಅವರ ಮಗಳನ್ನು ನಾನೇ ಸ್ಕೂಲಿಗೆ ಓದಿಸಿಕೊಂಡು, ಪ್ರತಿವರ್ಷ ಅವಳ ಮಗಳ ಬರ್ತ್ ಡೇಯನ್ನು ನಾನು ಮಾಡಿ.
ಇವರ ಮನೆಗೆ ಮೂವತ್ತು ನಲವತ್ತು ಜನ ಬರ್ತಾರೆ ಎಂದರೆ ಅದಕ್ಕಾಗುವ ಖರ್ಚು ವೆಚ್ಚವನ್ನೆಲ್ಲಾ ನಾನು ಭರಿಸಿದ್ದೀನಿ. ನನ್ನ ಮಗಳು ಬೇರೆ ಅಲ್ಲಾ ಅವಳ ಮಗಳು ಬೇರೆ ಅಲ್ಲಾ ಹಂಗೆ ನೋಡಿಕೊಂಡಿದ್ದೇನೆ. ಈ ಹೊತ್ತು ನನ್ನ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾಳೆ. ಇದೆಲ್ಲಾ ರಾಜಕೀಯ ಪಿತೂರಿ. ಇದಿಷ್ಟನ್ನು ನಾನು ಮಾತ್ರ ಹೇಳುತ್ತೇನೆ. ಉಳಿದಿದ್ದೆಲ್ಲವೂ ನನ್ನ ವೈಯಕ್ತಿಕ ವಿಚಾರಗಳು" ಎಂದು ಶ್ರುತಿ ತಮ್ಮ ಸುದೀರ್ಘ ಮಾತುಗಳಿಗೆ ಫುಲ್ ಸ್ಟಾಪ್ ಇಟ್ಟರು.