»   » ಮನೆಕೆಲಸದಾಕೆ ಮೇಲೆ ನಟಿ ಶ್ರುತಿ ಕ್ರಿಮಿನಲ್ ಕೇಸ್?

ಮನೆಕೆಲಸದಾಕೆ ಮೇಲೆ ನಟಿ ಶ್ರುತಿ ಕ್ರಿಮಿನಲ್ ಕೇಸ್?

Posted By:
Subscribe to Filmibeat Kannada

ತನ್ನ ಮನೆಕೆಲಸದಾಕೆ ಶೋಭಾ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ನಟಿ ಶ್ರುತಿ ಮುಂದಾಗಿದ್ದಾರೆ. ಈ ಹಿಂದೆ ಶೋಭಾ ಅವರು ನಟಿ ಶ್ರುತಿ ವಿರುದ್ಧ ಕಿರುಕುಳ ಆರೋಪ ಮಾಡಿದ್ದರು. ಈ ಸಂಬಂಧ ಶ್ರುತಿ ಅವರು ಶೋಭಾ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಗೂ ಕ್ರಿಮಿನಲ್ ಕೇಸ್ ದಾಖಲಿಸಲು ಹೊರಟಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡುತ್ತಿದ್ದ ಶ್ರುತಿ ಅವರು, ಬುಧವಾರ (ಆ.13) ಶೋಭಾ ವಿರುದ್ಧ ಮೊಕದ್ದಮೆ ದಾಖಲಿಸುವುದಾಗಿ ಹೇಳಿದರು. ಶ್ರುತಿ ಅವರಿಂದ ವಿಚ್ಛೇದನ ಪಡೆದಿರುವ ಚಂದ್ರಚೂಡ್ ಜೊತೆ ಶೋಭಾ ಅವರು ನಿರಂತರ ಸಂಪರ್ಕದಲ್ಲಿದ್ದಾರೆ ಎಂಬುದು ಪೊಲೀಸ್ ತನಿಖೆಯಿಂದ ಗೊತ್ತಾಗಿದೆ ಎಂದು ಶ್ರುತಿ ವಿವರ ನೀಡಿದ್ದಾರೆ. [ಬೈದಿದ್ದೀನಿ, ಕೆಲಸದಿಂದ ತೆಗೆದಿದ್ದೇನೆ, ಹೊಡೆದಿಲ್ಲ: ಶ್ರುತಿ]

Actress Shruti to file defamation case against maidservant

ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಅವರು ತನ್ನ ಮನೆಕೆಲಸದಾಕೆ ಶೋಭಾ ವಿರುದ್ಧ ಮೊಕದ್ದಮೆ ದಾಖಲಿಸಲು ನಿರ್ಧರಿಸಿದ್ದಾರೆ. ಶೋಭಾ ಅವರು ನನ್ನ ವಿರುದ್ಧ ಸುಳ್ಳು ಆರೋಪ ಮಾಡಿದ್ದರು. ನಂಬಿಕೆ ದ್ರೋಹ ಎಸಗಿರುವ ಅವರಿಂದ ನನ್ನ ಮರ್ಯಾದೆಗೆ ಧಕ್ಕೆಯಾಗಿದೆ.

ನನ್ನ ವಿರುದ್ಧ ಸುಳ್ಳು ಆರೋಪ ಮಾಡಿರುವ ಬಗ್ಗೆ ದಾಖಲೆಗಳಿವೆ ಎಂದಿರುವ ಶ್ರುತಿ ಅವರು, ಶೋಭಾ ಅವರು ಪೊಲೀಸರ ಮುಂದೆ ಸತ್ಯ ಒಪ್ಪಿಕೊಂಡಿದ್ದಾರೆ ಎಂದು ಶ್ರುತಿ ಹೇಳಿದ್ದಾರೆ. ಇದೀಗ ಶ್ರುತಿ ಮತ್ತು ಅವರ ಮನೆಕೆಲಸದಾಕೆಯ ನಡುವಿನ ಗುದ್ದಾಟ ಹೊಸ ತಿರುವು ಪಡೆದುಕೊಂಡಿದೆ.

ಆಕೆಯ ಮೇಲೆ ನಾನು ಖಂಡಿತ ಹಲ್ಲೆ ಮಾಡಿಲ್ಲ. ಆಕೆ ನನಗೆ ನಂಬಿಕೆ ದ್ರೋಹ ಮಾಡಿದ್ದು ನಿಜ. ಆಕೆ ಆ ರೀತಿ ಮಾಡಿದ್ದಾರೆ ಎಂದು ಗೊತ್ತಾದ ಕೂಡಲೆ ಮನೆಗೆ ಕರೆಸಿಕೊಂಡು ಬೈದು, ಕೆಲಸದಿಂದ ತೆಗೆದದ್ದೂ ನಿಜ. ಕೆಲಸದಿಂದ ತೆಗೆದಿದ್ದೀನಿ, ಬೈದಿದ್ದೀನಿ. ಆಕೆ ನನಗೆ ಮಾಡಿದ ದ್ರೋಹಕ್ಕೆ ಬೇರೆಯವರಾಗಿದ್ದರೆ ಏನು ಮಾಡುತ್ತಿದ್ದರೋ ಏನೋ ಎಂದು ಶ್ರುತಿ ಆರೋಪ ಕೇಳಿಬಂದಾಗ ಕೂಡಲೆ ಹೇಳಿದ್ದ ಮಾತಿಗಳಿವು. (ಏಜೆನ್ಸೀಸ್)

English summary
Kannada actress Shruti stated that she is considering filing a defamation case against maidservant Shobha on 12nd Wednesday. Earlier maidservant had alleged that Shruti had assaulted and threatened her.
Please Wait while comments are loading...