For Quick Alerts
  ALLOW NOTIFICATIONS  
  For Daily Alerts

  ಸ್ಕೈ ಡೈವಿಂಗ್ ಮಾಡಿದ 'ವಜ್ರಕಾಯ' ನಟಿ ಶುಭ್ರ ಅಯ್ಯಪ್ಪ

  |

  'ನೋ ಪ್ರಾಬ್ಲಂ.. ನಿನ್ನ ಹೈಟು ಸ್ವಲ್ಪ ಜಾಸ್ತಿನೇ ನೋ ಪ್ರಾಬ್ಲಂ..' ಎಂದು ಶಿವರಾಜ್ ಕುಮಾರ್ ಹೇಳಿದ್ದು, ನಟಿ ಶುಭ್ರ ಅಯ್ಯಪ್ಪಗೆ. 'ವಜ್ರಕಾಯ' ಸಿನಿಮಾದ ಮೂಲಕ ಕನ್ನಡ ಚಿತ್ರಭಿಮಾನಿಗಳ ಮುಂದೆ ಬಂದಿದ್ದ ಈ ನಟಿ ಮತ್ತೆ ಬೇರೆ ಸಿನಿಮಾ ಮಾಡಲೇ ಇಲ್ಲ.

  ಮಾಡಲಿಂಗ್, ಕ್ಯಾಲೆಂಡರ್ ಶೂಟ್ ಅಂತ ಬ್ಯುಸಿ ಇರುವ ಶುಭ್ರ ಅಯ್ಯಪ್ಪ ಈಗ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಸ್ಕೈ ಡೈವಿಂಗ್ ಮಾಡಿ ಎಲ್ಲರ ಹೆಬ್ಬೆರಿಸುವಂತೆ ಮಾಡಿದ್ದಾರೆ. ಜೊತೆಗೆ ಆ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

  ಸ್ಕೈ ಡೈವಿಂಗ್ ಒಂದು ಸಾಹಸ. ಅನೇಕರು ಇದನ್ನು ಮಾಡಲು ಇಷ್ಟ ಪಡುತ್ತಾರೆ. ಅದೇ ರೀತಿ ಸ್ಕೈ ಡೈವಿಂಗ್ ಮಾಡಬೇಕು ಎಂದು ಆಸೆ ಇಟ್ಟುಕೊಂಡಿದ್ದ ಶುಭ್ರ ಅದನ್ನು ಮಾಡಿ ಮುಗಿಸಿದ್ದಾರೆ.

  ಈ ಬಗ್ಗೆ ಟ್ವೀಟ್ ಮಾಡಿರುವ ಅವರು ''ಸ್ಕೈ ಡೈವಿಂಗ್ ಮಾಡಿದಾಗ, ನಾನು ಪಕ್ಷಿಯ ರೀತಿ ಆದಂತೆ ಆಯ್ತು. ಈ ನೆನಪು ನನಗೆ ಯಾವಾಗಲೂ ಇರುತ್ತದೆ. ಇದೊಂದು ಅದ್ಭುತ ಅನುಭವ'' ಎಂದು ಸ್ಕೈ ಡೈವಿಂಗ್ ಅನುಭವವನ್ನು ಹಂಚಿಕೊಂಡಿದ್ದಾರೆ.

  ಅಂದಹಾಗೆ, ಶುಭ್ರ ಅಯ್ಯಪ್ಪ 'ಕೊಡಗು' ಮೂಲದವರಾಗಿದ್ದಾರೆ. ಸಿನಿಮಾಗಳ ದೂರ ಇರುವ ಅವರು ಈ ವರ್ಷದ ಕಿಂಗ್ಫಿಶರ್ ಕ್ಯಾಲೆಂಡರ್ ನಲ್ಲಿ ಕಾಣಿಸಿಕೊಂಡಿದ್ದರು.

  ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ

  English summary
  Kannada actress, Vajrakaya fame Shubra Aiyappa has done skydiving.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X