Don't Miss!
- Sports
ಭಾರತ vs ಆಸ್ಟ್ರೇಲಿಯಾ: ಸುಂದರ್ ಸೇರಿ ನಾಲ್ವರು ಸ್ಪಿನ್ನರ್ಗಳು ನೆಟ್ ಬೌಲರ್ಗಳಾಗಿ ತಂಡಕ್ಕೆ ಸೇರ್ಪಡೆ
- News
ಕಾಂಗ್ರೆಸ್ ಸೇರ್ತಾರಾ ಸುದೀಪ್?; ನಟ ಸುದೀಪ್ ಕಾಂಗ್ರೆಸ್ ಗೆ ಬಂದರೆ ಸ್ವಾಗತ: ಸತೀಶ್ ಜಾರಕಿಹೊಳಿ
- Lifestyle
Horoscope Today 4 Feb 2023: ಶನಿವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Technology
ಒಪ್ಪೋ ರೆನೋ 8T 5G ಫಸ್ಟ್ ಲುಕ್: ಪವರ್ಫುಲ್ ಫೀಚರ್ಸ್ ಜೊತೆಗೆ ಹೊಸ ಲುಕ್!
- Automobiles
ಹೊಸ ನವೀಕರಣಗಳೊಂದಿಗೆ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಜನಪ್ರಿಯ ಕಿಯಾ ಸೆಲ್ಟೋಸ್
- Finance
ಅದಾನಿ ಕಳೆದುಕೊಂಡಿದ್ದು ಎಷ್ಟು ಲಕ್ಷ ಕೋಟಿ? ಕುಸಿಯುತ್ತಿವೆ ಷೇರುಗಳು- ಭಾರತದ ಶ್ರೀಮಂತನಿಗೆ ಮಂದೇನು ಕಾದಿದೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮತ್ತೆ ತೆರೆ ಮೇಲೆ ಬರಲಿದ್ದಾರೆ 'ಸಿಂಪಲ್ ಹುಡುಗಿ' ಶ್ವೇತಾ
'ಸಿಂಪಲ್ ಆಗ್ ಒಂದ್ ಲವ್ ಸ್ಟೋರಿ' ಸಿನಿಮಾ ಮೂಲಕ ಖ್ಯಾತಿ ಗಳಿಸಿದ ನಟಿ ಶ್ವೇತಾ ಶ್ರೀವತ್ಸಾವ್ ತಾಯ್ತನಕ್ಕಾಗಿ ಸಿನಿಮಾ ರಂಗದಿಂದ ದೂರ ಉಳಿದಿದ್ದರು.
2016 ರಲ್ಲಿ ಬಿಡುಗಡೆ ಆದ, ಪೂರ್ಣ ಚಂದ್ರ ತೇಜಸ್ವಿ ಅವರ ಕತೆ ಆಧರಿಸಿದ 'ಕಿರಗೂರಿನ ಗಯ್ಯಾಳಿಗಳು' ಸಿನಿಮಾವೇ ಅವರ ಕೊನೆಯ ಸಿನಿಮಾ. ನಾಲ್ಕು ವರ್ಷದ ಬಿಡುವಿನ ನಂತರ ಈಗ ಮತ್ತೆ ಸಿನಿಮಾ ರಂಗಕ್ಕೆ ಮರುಪ್ರವೇಶ ಮಾಡಲು ಸಜ್ಜಾಗಿದ್ದಾರೆ ಶ್ವೇತಾ.
ಶ್ವೇತಾ ಶ್ರೀವತ್ಸ ಅವರು ಮೂರು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಮೂರು ಸಿನಿಮಾಗಳ ಚಿತ್ರೀಕರಣ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಒಂದು ಸಿನಿಮಾದ ಚಿತ್ರೀಕರಣ ಈಗಾಗಲೇ ಪ್ರಾರಂಭವೂ ಆಗಿದೆ.

ಮೂರು ಸಿನಿಮಾಗಳನ್ನು ಒಪ್ಪಿಕೊಂಡಿರುವ ಶ್ವೇತಾ
ಬೆಳ್ಳಿತೆರೆಗೆ ಮರುಪ್ರವೇಶದ ಬಗ್ಗೆ ಮಾತನಾಡಿರುವ ಶ್ವೇತಾ ಶ್ರೀವತ್ಸಾವ್, 'ಸಿನಿಮಾ ಅವಕಾಶಗಳು ಬರುತ್ತಲೇ ಇದ್ದವು ಆದರೆ ಒಪ್ಪಿಕೊಂಡಿರಲಿಲ್ಲ. ಇದೀಗ ಮೂರು ಸಿನಿಮಾಗಳನ್ನು ಒಪ್ಪಿಕೊಂಡಿದ್ದೇನೆ. ಮೂರೂ ಸಿನಿಮಾಗಳಲ್ಲಿ ಭಿನ್ನವಾದ ಪಾತ್ರಗಳಲ್ಲಿ ನಟಿಸಲಿದ್ದೇನೆ' ಎಂದಿದ್ದಾರೆ.

ಮೂರು ಸಿನಿಮಾಗಳಲ್ಲಿ ಮೂರು ಭಿನ್ನ ಪಾತ್ರ
ಒಂದು ಕಮರ್ಶಿಯಲ್ ಸಿನಿಮಾ, ಆ ಸಿನಿಮಾಕ್ಕೆ ಪುರುಷನನ್ನು ನಾಯಕನನ್ನಾಗಿ ಹಾಕಿಕೊಳ್ಳಬಹುದಿತ್ತು ಆದರೆ ಚಿತ್ರತಂಡ ನನ್ನನ್ನು ಆಯ್ಕೆ ಮಾಡಿದೆ. ಇನ್ನೊಂದು ಸಿನಿಮಾದಲ್ಲಿ ಹಳ್ಳಿ ಯುವತಿ, ಮತ್ತೊಂದು ಸಿನಿಮಾದಲ್ಲಿ ಸರ್ಕಾರಿ ಅಧಿಕಾರಿ ಪಾತ್ರದಲ್ಲಿ ನಟಿಸುತ್ತಿದ್ದೇನೆ' ಎಂದಿದ್ದಾರೆ ಶ್ವೇತಾ.

'ಅಳೆದು-ತೂಗಿ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದೇನೆ'
ಕತೆಗಳನ್ನು ನೋಡಿ, ಅಳೆದು-ತೂಗಿ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದೇನೆ. ಈಗ ಒಪ್ಪಿಕೊಂಡಿರುವ ಮೂರು ಸಿನಿಮಾಗಳೂ ಸಹ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ಸಿನಿಮಾಗಳಾಗಿವೆ. ಹಾಗಾಗಿಯೇ ಆ ಸಿನಿಮಾಗಳನ್ನು ಒಪ್ಪಿಕೊಂಡೆ ಎಂದಿದ್ದಾರೆ ಶ್ವೇತಾ.
Recommended Video

2017 ರಲ್ಲಿ ಹೆಣ್ಣು ಮಗು
2005 ರಲ್ಲಿ ಅಮಿತ್ ಶ್ರೀವತ್ಸ ಅವರೊಟ್ಟಿಗೆ ವಿವಾಹವಾಗಿದ್ದ ಶ್ವೇತಾ, 2017 ರಲ್ಲಿ ಈ ದಂಪತಿಗೆ ಹೆಣ್ಣು ಮಗು ಜನಿಸಿದೆ. ತಮ್ಮ ಮಗಳ ಚಿತ್ರಗಳನ್ನು ಆಗಾಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ ಶ್ವೇತಾ ಶ್ರೀವಾತ್ಸವ್