»   » ಬಂಗಾರದ ಗೊಂಬೆಯಾಗಿ Ramp Walk ಮಾಡಿದ ಶೃತಿ ಹರಿಹರನ್

ಬಂಗಾರದ ಗೊಂಬೆಯಾಗಿ Ramp Walk ಮಾಡಿದ ಶೃತಿ ಹರಿಹರನ್

By ಯಶಸ್ವಿನಿ ಎಂ.ಕೆ
Subscribe to Filmibeat Kannada
For Quick Alerts
ALLOW NOTIFICATIONS
For Daily Alerts
  ಬಳುಕಿ ನಡೆದ ಬಂಗಾರದ ಬೊಂಬೆ ಶೃತಿ ಹರಿಹರನ್...!!

  ಆಭರಣ ಪ್ರಿಯರ ಮನಸೊರೆಗೊಳ್ಳುವ ಬಗೆ ಬಗೆಯ ವಿನ್ಯಾಸವುಳ್ಳ ಚಿನ್ನಾಭರಣ ಪ್ರದರ್ಶನ ಮತ್ತು ಮಾರಾಟ ಮೇಳ ಕಾರ್ಯಕ್ರಮ ಜೂನ್ 23 ರಂದು ಮೈಸೂರಿನಲ್ಲಿ ನಡೆದಿದೆ. 'ದ ಜ್ಯುವೆಲ್ಲರಿ ಶೋ' ಕಾರ್ಯಕ್ರಮವನ್ನು ಗೋಲ್ಡನ್ ಗ್ರೀಪರ್ ಎಂಟರ್ ಪ್ರೈಸಸ್ ವತಿಯಿಂದ ಆಯೋಜನೆ ಮಾಡಲಾಗಿದ್ದು, ಇದಕ್ಕೆ ನಟಿ ಶ್ರುತಿ ಹರಿಹರನ್ ವಿಧ್ಯುಕ್ತವಾಗಿ ಚಾಲನೆ ನೀಡಿದರು.

  ಕೇರಳ, ನಿಜಾಮ, ದಿಲ್ಲಿ ಸುಲ್ತಾನರು, ಮೈಸೂರು ಸೇರಿದಂತೆ ದೇಶದ ವಿವಿದೆಡೆ ಆಳ್ವಿಕೆ ನಡೆಸಿದ ರಾಜಮಹಾರಾಜರುಗಳ ರಾಣಿಯರು ಧರಿಸುತ್ತಿದ್ದ ಅತ್ಯಂತ ಆಕರ್ಷಕ, ಹಳೆಯ ವಿನ್ಯಾಸದ ಆಭರಣಗಳು ಸಾಂಸ್ಕೃತಿಕ ನಗರಿಯ ಹೆಂಗಳೆಯರ ಮನ ಸೆಳೆಯಿತು.

  ಬೆಂಗಳೂರು ಸೇರಿದಂತೆ ದೇಶದ ವಿವಿಧ ರಾಜ್ಯಗಳ ಅಬುಸ್ತಾನ್, ಅಮರಪಲ್ಲಿ, ದವನಮ್, ಎಂಪಿಎಸ್, ನೀಲಕಂಠ, ನಿಖಾರ್, ಪಾಂಚೆಸರಿ ಬದೆರಾ, ಪಿಎಂಜೆ, ಶ್ರೀ ಗಮೇಶ, ಸುದರ್ಷನ ಅಂಡ್ ಸನ್ಸ್, ರಾಜಶ್ರೀ ಕ್ರೀಯೇಷನ್ಸ್, ಔರಾ, ಜಗದಾಂಬ, ಓಪಾಸ ವಿವಂತಾ, ಸುನಿಲ್ ಜ್ಯುವೆಲ್ಸ್, ಸಿಲ್ವರ್ ಎಂಪೋರಿಯಂ, ಓಂಕಾರ್, ಶಿವಾನಿ, ಸಿಲ್ವರ್ ಯಗ್, ಬನೆಥಿ ಎಕ್ಸ್‍ಪರ್ಟ್ಸ್, ಆಭರಣಗಳನ್ನು ತೊಟ್ಟು ನಟಿ ಶ್ರುತಿ ಹರಿಹರನ್ ಇದೇ ವೇಳೆ ಮಿಂಚಿದರು.

  ಹೊಳೆಯುವ ಆಭರಣಗಳನ್ನು ತೊಟ್ಟು ರೂಪದರ್ಶಿಯರು ರಾಂಪ್ ಮಾಡಿದರೆ, ಇತ್ತ ಆಭರಣ ಪ್ರಿಯರು ಚಪ್ಪಾಳೆಯ ಸುರಿಮಳೆಗರೆದರು. ಹೊಳೆವ ಕಂಗಳ ಲಲನೆಯರು ಆಭರಣಗಳ ಜೊತೆ ಮತ್ತಷ್ಟೂ ಕಂಗೊಳಿಸಿ ಹೆಜ್ಜೆಹಾಕಿ ಯುವ ಮನಸ್ಸುಗಳಿಗೆ ಲಗ್ಗೆಯಿಟ್ಟರು. ಅವರು ಧರಿಸಿದ್ದ ಕಪ್ಪು ಬಣ್ಣದ ಉಡುಪುಗಳು ಚಿನ್ನಾಭರಣಗಳಿಗೆ ಇನ್ನಷ್ಟು ಮೆರುಗು ತಂದವು.

  ಮುಂಬೈ ಹಾಗೂ ಚೆನ್ನೈನ ವಿನ್ಯಾಸದ ವಜ್ರದ ಆಭರಣಗಳು, ಜೈಪುರ ಹಾಗೂ ದೆಹಲಿಯ ಕುಂದನ್, ಮೀನಾ, ಥೇವಾ ಮತ್ತು ಹೈದರಬಾದಿನ ನಿಜಾಮರ ವಿನ್ಯಾಸದ ಆಭರಣಗಳು ಆಕರ್ಷಣೀಯವಾಗಿದ್ದವು. ಮೊದಲ ಸುತ್ತಿನಲ್ಲಿ 11 ರೂಪದರ್ಶಿಯರು ವಿವಿಧ ವಿನ್ಯಾಸಗಳ ನೆಕ್ಲೆಸ್, ಬಳೆ, ಓಲೆ, ಮೂಗುತಿ, ಉಂಗುರ, ಡಾಬು ತೊಟ್ಟು ವೇದಿಕೆ ಮೇಲೆ ಹೆಜ್ಜೆ ಹಾಕಿ ನೆರೆದಿದ್ದವರ ಮನಸೂರೆಗೊಂಡರು. 2ನೇ ಸುತ್ತಿನಲ್ಲಿ ವಜ್ರದ 'ವಿ' ವಿನ್ಯಾಸದ ಒಡವೆಗಳು ಹೆಚ್ಚು ಆಕರ್ಷಕವಾಗಿದ್ದವು. ನಟಿ ಶೃತಿ ಹರಿಹರನ್ ಕೂಡ ಅತ್ಯಾಕರ್ಷಕ ಒಡವೆ ತೊಟ್ಟು ಗಮನ ಸೆಳೆದರು.

  English summary
  Kannada Actress sruthi hariharan inaugurates The Jewelry show in Mysuru on last Saturday (June 23rd).

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more