For Quick Alerts
  ALLOW NOTIFICATIONS  
  For Daily Alerts

  ನಟಿ ಶೃತಿ ಹರಿಹರನ್ ಖಾತೆ ಹ್ಯಾಕ್: ಈ ಎಡವಟ್ಟು ಮಾಡಬೇಡಿ ಅಂತಿದ್ದಾರೆ!

  |

  ನಟಿ ಶೃತಿ ಹರಿಹರನ್‌ ಕೆಲವು ವರ್ಷಗಳಿಂದ ಸಿನಿಮಾ ಬಿಟ್ಟು ದೂರ ಉಳಿದಿದ್ದರು. ಅಭಿನಯದಿಂದ ತಾತ್ಕಾಲಿಕವಾಗಿ ಬ್ರೇಕ್ ತೆಗೆದುಕೊಂಡಿದ್ದರು. ಜೊತೆಗೆ ಮಿಟೂ ಪ್ರಕರಣದ ಬಳಿಕ ಶೃತಿ ಹರಿಹರ್ ಅವರು ತಮ್ಮ ವೈಯಕ್ತಿಕ ಜೀವನದ ಬಗ್ಗೆ ಹೆಚ್ಚಿನ ಗಮನ ಹರಿಸಿದ್ದರು. ಶೃತಿ ಅವರಿಗೆ ಜಾನಕಿ ಎಂಬ ಮಗಳು ಇದ್ದಾಳೆ.

  ಈಗ ಮಗು ಆದ ಬಳಿಕ ಮತ್ತೆ ಸಿನಿಮಾ ರಂಗದಲ್ಲಿ ಶೃತಿ ಹರಿಹರನ್ ಸಕ್ರಿಯ ಆಗುತ್ತಿದ್ದಾರೆ. ಇತ್ತೀಚೆಗೆ ಅವರು ಮಾಧ್ಯಮಗಳ ಮುಂದೆ ತಾನು ಸಿನಿಮಾ ಮಾಡುವುದಾಗಿಯೂ ಹೇಳಿಕೊಂಡಿದ್ದಾರೆ. ಅದರೆ ಈಗ ಸಿನಿಮಾ ವಿಚಾರಕ್ಕೆ ಶೃತಿ ಹರಿಹರನ್ ಸುದ್ದಿ ಆಗಿಲ್ಲ. ಬದಲಿಗೆ ಅವರು ಸಾಮಾಜಿಕ ಅಕೌಂಟ್ ವಿಚಾರವಾಗಿ ಸುದ್ದಿ ಆಗುತ್ತಿದ್ದಾರೆ.

  ಕೆಲ ದಿನ ತಾಳ್ಮೆ ಇಂದಿರಿ: ಕಮ್‌ ಬ್ಯಾಕ್‌ ಬಗ್ಗೆ ರಮ್ಯಾ ಮಾತುಕೆಲ ದಿನ ತಾಳ್ಮೆ ಇಂದಿರಿ: ಕಮ್‌ ಬ್ಯಾಕ್‌ ಬಗ್ಗೆ ರಮ್ಯಾ ಮಾತು

  ಶೃತಿ ಹರಿಹರನ್‌ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹೊಸದೊಂದು ಪೋಸ್ಟ್ ಹಾಕಿದ್ದಾರೆ. ಈ ಪೊಸ್ಟ್‌ನಲ್ಲಿ ಶೃತಿ ಹರಿಹರನ್ ಅವರು ತಮ್ಮ ಅಕೌಂಟ್ ಹ್ಯಾಕ್ ಆಗಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.

  ನಟಿ ಶೃತಿ ಹರಿಹರನ್ ಇನ್‌ಸ್ಟಾಗ್ರಾಮ್ ಅಕೌಂಟ್ ಹ್ಯಾಕ್!

  ನಟಿ ಶೃತಿ ಹರಿಹರನ್ ಇನ್‌ಸ್ಟಾಗ್ರಾಮ್ ಅಕೌಂಟ್ ಹ್ಯಾಕ್!

  ನಟಿ ಶೃತಿ ಹರಿಹರನ್ ಅವರ ಇನ್‌ಸ್ಟಾಗ್ರಾಮ್ ಖಾತೆ ಹ್ಯಾಕ್ ಆಗಿದೆ. ಈ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ಬಗ್ಗೆ ಸ್ಟೋರಿಗಳನ್ನು ಹಾಕಿಕೊಂಡು ಎಲ್ಲರಿಗೂ ಎಚ್ಚರಿಕೆ ನೀಡಿದ್ದಾರೆ. ಯಾವುದೋ ಅಪರಿಚಿತ ಲಿಂಕ್ ಒತ್ತಿದ ಕಾರಣಕ್ಕೆ ಅವರ ಅಕೌಂಟ್ ಹ್ಯಾಕ್ ಆಗಿದೆಯಂತೆ. ಅದೇ ರೀತಿ ಅವರ ಅಕೌಂಟ್‌ನಿಂದ ಬೇರೆ ಖಾತೆಗಳಿಗೆ ಆ ಲಿಂಕ್ ಮೆಸೇಜ್ ರೂಪದಲ್ಲಿ ಹೋಗಿದೆಯಂತೆ.

  ಶೃತಿ ಮಾತು ನಿಜ ಎಂದ ಮೋಹಕತಾರೆ ರಮ್ಯಾ!

  ಶೃತಿ ಮಾತು ನಿಜ ಎಂದ ಮೋಹಕತಾರೆ ರಮ್ಯಾ!

  ಶೃತಿ ಹರಿಹರನ್ ಈ ರೀತಿ ಸಂದೇಶ ರವಾನೆ ಮಾಡುತ್ತಲೇ, ನಟಿ ರಮ್ಯಾ ಅದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಶೃತಿ ಅವರು ಹೇಳುತ್ತಿರುವುದು ಸತ್ಯ ಎಂದಿದ್ದಾರೆ. "ಬಹುಶಃ ಶೃತಿ ಅವರ ಖಾತೆ ಹ್ಯಾಕ್ ಆಗಿದೆ. ನನ್ನ ಖಾತೆಯನ್ನು ಕೂಡ ಹ್ಯಾಕ್ ಮಾಡಲು ಪ್ರಯತ್ನಿಸಲಾಗಿದೆ. ಅದರೆ ನನ್ನ ಖಾತೆಗೆ ನನಗೆ ಇನ್ನೂ ಕೂಡ ಆ್ಯಕ್ಸಸ್ ಇದೆ. ಎರಡು ಬಾರಿ ವೇರಿಫಿಕೇಷನ್ ಆಗಿದೆ. ಶೃತಿ ಹೇಳುತ್ತಲಿರುವು ಸತ್ಯ, ಇಂಕ್ ಓಪನ್ ಮಾಡಬೇಡಿ." ಎಂದು ರಮ್ಯ ಅವರು ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

  'ಕೆಜಿಎಫ್ 2' ಅಡ್ಡಾಗೆ ಪ್ರವೇಶ ಕೊಟ್ರಾ ಸುಧಾರಾಣಿ ಮತ್ತು ಶ್ರುತಿ? ಆ ಎರಡು ಪಾತ್ರಗಳ ಕಥೆಯೇನು?'ಕೆಜಿಎಫ್ 2' ಅಡ್ಡಾಗೆ ಪ್ರವೇಶ ಕೊಟ್ರಾ ಸುಧಾರಾಣಿ ಮತ್ತು ಶ್ರುತಿ? ಆ ಎರಡು ಪಾತ್ರಗಳ ಕಥೆಯೇನು?

  ಸಂಯುಕ್ತ ಹೊರನಾಡ್‌ಗೂ ಹ್ಯಾಕಿಂಗ್ ಮೆಸೇಜ್!

  ಸಂಯುಕ್ತ ಹೊರನಾಡ್‌ಗೂ ಹ್ಯಾಕಿಂಗ್ ಮೆಸೇಜ್!

  ಶೃತಿ ಹರಿಹರನ್ ಖಾತೆಯಿಂದ ನಟಿ ಸಂಯುಕ್ತ ಹೊರನಾಡ್ ಅವರಿಗೂ ಕೂಡ ಹ್ಯಾಕಿಂಗ್ ಲಿಂಕ್ ಹೋಗಿದೆಯಂತೆ. ಈ ವಿಚಾರವನ್ನು ಸಂಯುಕ್ತ ಹಂಚಿಕೊಂಡಿದ್ದಾರೆ. ನನಗೂ ಈ ಲಿಂಕ್ ಬಂದಿದೆ. ದಯವಿಟ್ಟು ಯಾರು ಈ ಲಿಂಕ್ ಓಪನ್ ಮಾಡಬೇಡಿ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಬೇರೆಯವರಿಗೆ ಎಚ್ಚರಿಕೆ ನೀಡಿದ್ದಾರೆ. ನಟಿ ರಮ್ಯಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಶೃತಿ ಅವರೊಂದಿಗೆ ನಡೆಸಿರುವ ಸಂಭಾಷೆಣೆಯನ್ನು ಕೂಡ ಹಂಚಿಕೊಂಡಿದ್ದಾರೆ.

  ಕನ್ನಡ ಚಿತ್ರಗಳಲ್ಲಿ ಶೃತಿ ಹರಿಹರನ್ ಸಕ್ರಿಯ!

  ಕನ್ನಡ ಚಿತ್ರಗಳಲ್ಲಿ ಶೃತಿ ಹರಿಹರನ್ ಸಕ್ರಿಯ!

  ಬ್ರೇಕ್ ಬಳಿಕ ನಟಿ ಶೃತಿಹಾಸನ್ ಅವರು ಮತ್ತೆ ಚಿತ್ರರಂಗ್ಕಕೆ ವಾಪಸ್ ಆಗಿದ್ದಾರೆ. ಈಗಾಗಲೇ ಅವರು ಅಭಿನಯಿಸಲಿರುವ ಚಿತ್ರ ಒಂದು ಪ್ರಕಟ ಆಗಿದೆ. ಇನ್ನು ಮಾಧ್ಯಮದ ಮುಂದೆ ಮಾತನಾಡಿದ ಶೃತಿ ಅವರು ನಾನು ಎಲ್ಲೂ ಹೋಗಲ್ಲ. ಸಿನಿಮಾಗಳನ್ನು ಮಾಡುತ್ತೇನೆ ಎಂದು ಹೇಳಿಕೊಂಡಿದ್ದಾರೆ. ಈ ಮೂಲಕ ಅವರು ಮತ್ತೆ ಯಾವ ರೀತಿಯ ಪಾತ್ರಗಳನ್ನು ಮಾಡುತ್ತಾರೆ ಎನ್ನುವ ಕುತೂಹಲ, ನಿರೀಕ್ಷೆಗಳನ್ನು ಹುಟ್ಟು ಹಾಕಿದೆ.

  English summary
  Actress Sruthi Hariharan Instagram Account Hack, She Have Sprcial Message,
  Saturday, February 19, 2022, 16:04
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X