Don't Miss!
- Automobiles
ಕಡಿಮೆ ಬೆಲೆಯ ಟಾಟಾ ಎಲೆಕ್ಟ್ರಿಕ್ ಕಾರಿನ ವಿತರಣೆ ಪ್ರಾರಂಭ: 2,000 ಕಾರುಗಳ ಹಸ್ತಾಂತರ
- Sports
Border-Gavaskar Trophy: ಭಾರತ ವಿರುದ್ಧ ಮೊದಲ ಪಂದ್ಯದಲ್ಲಿ ಈ ವೇಗಿ ಬೌಲಿಂಗ್ ಮಾಡಲ್ಲ; ಪ್ಯಾಟ್ ಕಮ್ಮಿನ್ಸ್
- News
Namma Metro: ನೆಲಮಂಗಲದ BIEC ವರೆಗೂ ಗ್ರೀನ್ ಲೈನ್ ವಿಸ್ತರಣೆ- ಆಸ್ತಿ ಖರೀದಿದಾರರಿಗೆ ಸ್ಪರ್ಗ ಸೃಷ್ಟಿ, ಯಾರ್ಯಾರಿಗೆ ಲಾಭ?
- Finance
ಅದಾನಿ ಗ್ರೂಪ್ ಬಿಕ್ಕಟ್ಟಿನ ಮಧ್ಯೆ ಭರವಸೆ ನೀಡಿದ ವಿತ್ತ ಸಚಿವೆ, ಹೇಳಿದ್ದೇನು?
- Lifestyle
ಗಂಡ-ಹೆಂಡತಿ ಜಗಳವಾಡಿದರೆ ಈ ಪ್ರಯೋಜನಗಳೂ ಇವೆ!
- Technology
ಕ್ಯಾನನ್ ಕಂಪೆನಿಯಿಂದ ಹೊಸ ಪ್ರಿಂಟರ್ ಬಿಡುಗಡೆ! ಏನೆಲ್ಲಾ ಸೌಲಭ್ಯವಿದೆ ಗೊತ್ತಾ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
"ನಮ್ಮ ಗಂಗಮ್ಮ ಕಾಣೆಯಾಗಿದ್ದಾಳೆ.. ದಯವಿಟ್ಟು ಹುಡುಕಿಕೊಡಿ" – ನಟಿ ಸುಧಾರಾಣಿ ಮನವಿ!
ಕನ್ನಡ ಚಿತ್ರರಂಗದ ಹಿರಿಯ ನಟಿ ಸುಧಾರಾಣಿಗೆ ನಾಯಿಗಳಂದರೆ ಬಲು ಪ್ರೀತಿ. ಮನೆಯಲ್ಲಿ ಎರಡು ಸಾಕು ನಾಯಿಗಳಿದ್ದರೂ, ಬೀದಿ ನಾಯಿ ಮೇಲೂ ಪ್ರೀತಿ ತೋರಿಸದ್ದರು. ಕೆಲವುಗಳ ದಿನ ಹಿಂದೆ ಅವರ ಮನೆಯ ಬೀದಿಯ ನಾಯಿ ಗಂಗಮ್ಮ ಮರಿ ಹಾಕಿದ್ದನ್ನು ಕಂಡು ಸಂಭ್ರಮಿಸಿದ್ದರು.
ಕೆಲವು ದಿನಗಳಿಂದಷ್ಟೇ ನಟಿ ಸುಧಾರಾಣಿ ಸೋಶಿಯಲ್ ಮೀಡಿಯಾದಲ್ಲಿ ಗಂಗಮ್ಮ ಕಾಣಿಸುತ್ತಿಲ್ಲ ಎಂದು ಪೋಸ್ಟ್ ಮಾಡಿದ್ದರು. ಈಗ ಮತ್ತೊಂದು ವಿಡಿಯೋವನ್ನು ಪೋಸ್ಟ್ ಮಾಡಿದ್ದು, ಮತ್ತೆ ಗಂಗಮ್ಮ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
Shrirasthu
Shubhamasthu:
ತಾತನ
ಮೇಲೆ
ಕೂಗಾಡಿದ
ಸಮರ್ಥ್:
ಮಾಧವನ
ಮೇಲೆ
ಅವಿ
ಪರಾಕ್ರಮ
ನಟಿ ಸುಧಾರಾಣಿ ಸಾಕಿದ್ದ ಪ್ರೀತಿಯ ಗಂಗಮ್ಮ ನಾಯಿ ಕಾಣೆಯಾಗಿದ್ದು, ನಿಮ್ಮ ಗಮನಕ್ಕೆ ಬಂದರೆ ತಿಳಿಸಿ ಎಂದು ಬಿಬಿಎಂಪಿ ಹಾಗೂ ಜನರನ್ನು ವಿಡಿಯೋ ಮೂಲಕ ಮನವಿ ಮಾಡಿಕೊಂಡಿದ್ದಾರೆ.

ಗಂಗಮ್ಮ ಕಾಣಿಸುತ್ತಿಲ್ಲ
"ನಿಮಗೆಲ್ಲರಿಗೂ ಗೊತ್ತೇ ಇದೆ. ನಾನು ಹಲವಾರು ಬಾರಿ ಪೋಸ್ಟ್ ಹಾಕಿದ್ದೀನಿ. ಸುಮಾರು 15 ದಿನಗಳಿಂದ ನಮ್ಮ ಗಂಗಮ್ಮ ಕಾಣಿಸುತ್ತಿಲ್ಲ. ಏನಾದ್ರೂ, ಬಿಬಿಎಂಪಿನವರು, ಡಾಗ್ಸ್ ಅನ್ನು ಬೇರೆ ಕಡೆ ಕರೆದುಕೊಂಡು ಹೋದಾಗ, ಅವಳು ಏನಾದರೂ ನಿಮ್ಮ ಏರಿಯಾದಲ್ಲಿ ಕಾಣಿಸಿಕೊಂಡರೆ, ದಯವಿಟ್ಟು ನನ್ನನ್ನು ಟ್ಯಾಗ್ ಮಾಡಿ ಒಂದು ಪೋಸ್ಟ್ ಹಾಕಿ." ಎಂದು ಸುಧಾರಾಣಿ ಬೇಸರದಲ್ಲೇ ವಿಡಿಯೋ ಮಾಡಿದ್ದಾರೆ.

'ಗಂಗಮ್ಮ ವಾಪಾಸ್ ಬರಬೇಕು'
"ನಾವೆಲ್ಲರೂ ಅವಳನ್ನು ತುಂಬಾನೇ ಮಿಸ್ ಮಾಡಿಕೊಂಡಿದ್ದೇವೆ. ಅವಳು ಮನೆ ವಾಪಾಸ್ ಬರಬೇಕು ಅನ್ನೋದು ನಮ್ಮ ಆಸೆ. ದಯವಿಟ್ಟು ನೀವು ಯಾರಾದರೂ ಗಂಗಮ್ಮನನ್ನು ನೋಡಿದರೆ, ನನಗೆ ತಿಳಿಸಿ. ನಾವು ಹುಡುಕುವುದಕ್ಕೆ ತುಂಬಾನೇ ಪ್ರಯತ್ನ ಪಡುತ್ತಿದ್ದೇವೆ. ಬಿಬಿಎಂಪಿಯಿಂದ ಹಿಡಿದು ಪ್ರತಿಯೊಂದರಲ್ಲೂ ಹುಡುಕಿದ್ದೇವೆ. ಒಂದೇ ಒಂದು ಲೀಡ್ ಸಿಕ್ಕಿಲ್ಲ." ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಗಂಗಮ್ಮ ಮರಿ ಹಾಕಿದ್ದಾಗ ಸಂಭ್ರಮ
ನಟಿ ಸುಧಾರಾಣಿ ಮನೆಯ ಬೀದಿಯಲ್ಲಿ ಗಂಗಮ್ಮ ಅನ್ನೋ ಬೀದಿ ನಾಯಿ ಇತ್ತು. ಅದನ್ನೂ ತಮ್ಮ ಮನೆಯಲ್ಲಿರುವ ನಾಯಿಯಂತೆಯೇ ಸಾಕಿದ್ದರು. ಗಂಗಮ್ಮ ಮರಿ ಹಾಕಿದಾಗ, ಮರಿ ಜೊತೆಗೆ ಗಂಗಮ್ಮಳನ್ನು ಮನೆಗೆ ಕರೆತಂದು ಸ್ವತ: ಸುಧಾರಾಣಿಯವೇ ಮನೆಯಲ್ಲಿ ಪೂಜೆ ಮಾಡಿದ್ದರು. ಇದೇ ನಾಯಿ ಈಗ ಕಳೆದ 15 ದಿನಗಳಿಂದ ಕಾಣಿಯಾಗಿದೆ. ಎಲ್ಲಿಗೆ ಹೋಗಿದೆ ಅನ್ನೋದು ಗೊತ್ತಿಲ್ಲ. ಹೀಗಾಗಿ ಮಿಸ್ ಆಗಿ ಬಿಬಿಎಂಪಿಯವರು ನಾಯಿಯನ್ನು ಕರೆದುಕೊಂಡು ಹೋಗಿದ್ದರೆ, ತಿಳಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.

'ಮನೆಯೊಳಗೆ ಮಿನಿ ಮತ್ತು ಮಿಕ್ಕಿ'
ಸುಧಾರಾಣಿ ಹಾಗೂ ಅವರ ಮಗಳಿಗೆ ನಾಯಿಗಳಂದರೆ, ಬಲುಪ್ರೀತಿ. ಹೀಗಾಗಿ ಮನೆಯಲ್ಲಿ ಮಿನಿ ಮತ್ತು ಮಿಕ್ಕಿ ಎಂಬ ಎರಡು ನಾಯಿಯನ್ನು ಮುದ್ದಾಗಿ ಸಾಕಿದ್ದಾರೆ. ಗಂಗಮ್ಮ ಕೂಡ ಇವರ ಮನೆಯ ಒಂದು ಭಾಗವಾಗಿತ್ತು. ಇತ್ತೀಚೆಗೆ ಗಂಗಮ್ಮ ಬರ್ತ್‌ಡೇಯನ್ನೂ ಆಚರಿಸಲಾಗಿತ್ತು. ಸದ್ಯ ಸುಧಾರಾಣಿ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ 'ಶ್ರೀರಸ್ತು ಶುಭಮಸ್ತು' ಧಾರಾವಾಹಿಯಲ್ಲಿ ಸುಧಾರಾಣಿ ನಟಿಸುತ್ತಿದ್ದಾರೆ.