»   » ಬಣ್ಣ ಹಚ್ಚಿದ 'ಮನ ಮೆಚ್ಚಿದ ಹುಡುಗಿ' ಸುಧಾರಾಣಿ ಪುತ್ರಿ ನಿಧಿ

ಬಣ್ಣ ಹಚ್ಚಿದ 'ಮನ ಮೆಚ್ಚಿದ ಹುಡುಗಿ' ಸುಧಾರಾಣಿ ಪುತ್ರಿ ನಿಧಿ

Posted By:
Subscribe to Filmibeat Kannada

ನಟ-ನಟಿಯರ ಮಕ್ಕಳು ಬಣ್ಣ ಹಚ್ಚುವುದರಲ್ಲಿ ಹೊಸ ವಿಷಯ ಏನಿಲ್ಲ. ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ರಕ್ಷಿತಾ, ದರ್ಶನ್, ವಿನಯ್ ರಾಜ್ ಕುಮಾರ್ ಹಾಗೂ ಲೇಟೆಸ್ಟ್ ಆಗಿ ಜೈಜಗದೀಶ್ ಮೂವರು ಪುತ್ರಿಯರು...ಹೀಗೆ ಅಪ್ಪ-ಅಮ್ಮ ನಡೆದು ಬಂದ ಹಾದಿಯಲ್ಲೇ ಮಕ್ಕಳು ಸಾಗಿದಂತೆ ನಟಿ ಸುಧಾರಾಣಿ ಪುತ್ರಿ ನಿಧಿ ಕೂಡ ಬಣ್ಣದ ಪ್ರಪಂಚಕ್ಕೆ ಅಡಿಯಿಟ್ಟಿದ್ದಾರೆ.

ಹಾಗಂತ ನಿಧಿ ಸಿನಿಮಾದಲ್ಲಿ ಅಭಿನಯಿಸುತ್ತಿಲ್ಲ. ಬದಲಾಗಿ, ಮೈಸೂರು ಟಾರ್ಪಲಿನ್ಸ್ ಜಾಹೀರಾತಿನಲ್ಲಿ ರೂಪದರ್ಶಿಯಾಗಿ ಮಿಂಚಿದ್ದಾರೆ. [ಕನ್ನಡ ನಟಿ ಸುಧಾರಾಣಿ ಪತಿ ಬೇರಾರೂ ಅಲ್ಲ, 'ಇವರೇ'.!]

actress-sudharani-daughter-nidhi-makes-modelling-debut

ಹಾಗ್ನೋಡಿದ್ರೆ, ನಿಧಿ ಮೊಟ್ಟ ಮೊದಲ ಬಾರಿಗೆ ಬಣ್ಣ ಹಚ್ಚಿದ್ದು ಏಳನೇ ವಯಸ್ಸಿನಲ್ಲಿ. ಆಗಲೇ, ಅಮ್ಮ ಸುಧಾರಾಣಿ ಜೊತೆ ಚಿತ್ರವೊಂದರಲ್ಲಿ ನಿಧಿ ಆಕ್ಟ್ ಮಾಡಿದ್ದರು. ಆದರೆ ಕಾರಣಾಂತರಗಳಿಂದ ಆ ಸಿನಿಮಾ ಅರ್ಧಕ್ಕೆ ನಿಂತುಹೋಯ್ತು. [ಸುಧಾರಾಣಿ ವೈಯುಕ್ತಿಕ ಜೀವನದ ಬಗ್ಗೆ ಯಾರಿಗೂ ಗೊತ್ತಿಲ್ಲದ ಕಠೋರ ಸತ್ಯ!]

ಅದಾದ ಬಳಿಕ, ಓದಿನಲ್ಲೇ ಆಸಕ್ತಿ ತೋರಿದ್ದ ನಿಧಿ ಈಗ ಜಾಹಿರಾತಿನಲ್ಲಿ ಮಿನುಗಿದ್ದಾರೆ. ಸದ್ಯಕ್ಕಿನ್ನೂ ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ನಿಧಿಗೆ ವಿದ್ಯಾಭ್ಯಾಸದ ಬಗ್ಗೆ ಹೆಚ್ಚು ಗಮನ. ಓದು ಮುಗಿದ ಬಳಿಕ ನಟನೆ ಬಗ್ಗೆ ಮಾತು ಎನ್ನುತ್ತಾರೆ.

English summary
Kannada Actress Sudharani daughter Nidhi has made her modelling Debut with an Advertisement.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada