»   » ಸುಹಾಸಿನಿ ಉತ್ತಮ ನಟಿಯಲ್ಲವೇ? ಅವರ ಪತಿಗೆ ಅನುಮಾನವಂತೆ

ಸುಹಾಸಿನಿ ಉತ್ತಮ ನಟಿಯಲ್ಲವೇ? ಅವರ ಪತಿಗೆ ಅನುಮಾನವಂತೆ

Posted By:
Subscribe to Filmibeat Kannada

ಡಾ. ವಿಷ್ಣು ಅವರ ಜೊತೆ 'ಬಂಧನ', 'ಮುತ್ತಿನ ಹಾರ' ರಮೇಶ್ ಅರವಿಂದ್ ಅವರ ಜೊತೆ 'ಅಮೃತ ವರ್ಷಿಣಿ' ಮುಂತಾದ ಚಿತ್ರಗಳಲ್ಲಿ ಅದ್ಭುತ ನಟನೆ ಮಾಡಿ ಸಿನಿರಸಿಕರ ಮನಗೆದ್ದ ಖ್ಯಾತ ನಟಿ ಸುಹಾಸಿನಿ ಮಣಿರತ್ನಂ ಅವರು ಕನ್ನಡದವರೇನೋ ಅನ್ನೋವಷ್ಟರ ಮಟ್ಟಿಗೆ ನಮ್ಮಲ್ಲಿ ಬೆರೆತು ಹೋಗಿದ್ದಾರೆ.

ಇಷ್ಟೆಲ್ಲಾ ಅಭಿಮಾನಿಗಳನ್ನು ಹೊಂದಿರುವ ಬಹುಭಾಷಾ ನಟಿ ಸುಹಾಸಿನಿ ಅವರನ್ನು ಉತ್ತಮ ನಟಿ ಎಂದು ಸುಹಾಸಿನಿ ಅವರ ಪತಿ ನಿರ್ದೇಶಕ ಮಣಿರತ್ನಂ ಅವರೇ ಇಲ್ಲಿಯವರೆಗೆ ಒಪ್ಪಿಕೊಂಡಿಲ್ಲ ಎಂದು ಸ್ವತಃ ಸುಹಾಸಿನಿ ಅವರೇ ತಿಳಿಸಿದ್ದಾರೆ.[ಮತ್ತೆ ಕನ್ನಡ ಚಿತ್ರನಿರ್ದೇಶನದತ್ತ ಒಲವು ತೋರಿಸಿದ ಮಣಿರತ್ನಂ]

Actress Suhasini Says my hubby does not consider me as good Actress

ಹೌದು 8ನೇ ಬೆಂಗಳೂರಿನ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಟಿ ಸುಹಾಸಿನಿ ಅವರು ಸಂವಾದದ ಸಂದರ್ಭದಲ್ಲಿ ತಮ್ಮ ಪತಿ ನಿರ್ದೇಶಕ ಮಣಿರತ್ನಂ ಅವರು ತಮ್ಮನ್ನು ಒಬ್ಬ ಉತ್ತಮ ನಟಿ ಎಂಬುದನ್ನು ಒಪ್ಪಿಕೊಂಡಿಲ್ಲ ಎಂದು ಹೇಳಿದ್ದಾರೆ.

ಸಿನಿಮೋತ್ಸವದ ಸಂವಾದ ಕಾರ್ಯಕ್ರಮದಲ್ಲಿ ಕನ್ನಡದ ಹಿರಿಯ ನಟಿ ಜಯಮಾಲಾ ಅವರು 'ನೀವು ನಿಮ್ಮ ಪತಿಯ ಸಿನಿಮಾದಲ್ಲಿ ಯಾಕೆ ನಟಿಸಲಿಲ್ಲ? ಎಂದು ಸುಹಾಸಿನಿ ಅವರಿಗೆ ಕೇಳಿದ ಪ್ರಶ್ನೆಗೆ, ಅವರು 'ನಿಮ್ಮ ಚಿತ್ರದಲ್ಲಿ ನಿಮ್ಮ ಪತ್ನಿ ಸುಹಾಸಿನಿ ಅವರು ಯಾಕೆ ನಟಿಸಿಲ್ಲ ಎಂದು ಅನೇಕರು ಮಣಿರತ್ನಂ ಅವರನ್ನು ಪ್ರಶ್ನೆ ಮಾಡಿದ್ದಾರೆ.[ಜಯಾ ಬಚ್ಚನ್ 'ಬೆಂಗಳೂರು ಆಗಲ್ಲ' ಅಂದಿದ್ದಕ್ಕೆ ರೆಬೆಲ್ ಸ್ಟಾರ್ ಏನಂದ್ರು]

Actress Suhasini Says my hubby does not consider me as good Actress

'ಆದರೆ ಅದಕ್ಕೆ ಅವರು ಉತ್ತರ ನೀಡಿಲ್ಲ. ಪ್ರತೀ ಸಾರಿ ನಯವಾಗಿ ಮರೆಸುತ್ತಾ ಬಂದಿದ್ದಾರೆ. ಅಂದರೆ ಅದರರ್ಥ ಅವರ ದೃಷ್ಟಿಯಲ್ಲಿ ನಾನು ಉತ್ತಮ ನಟಿಯಾಗಿಲ್ಲದಿರಬಹುದು. ಆದರೆ ನಾವಿಬ್ಬರೂ ಉತ್ತಮ ದಂಪತಿಗಳು. ನಮ್ಮ ಮಧ್ಯೆ ಹೊಂದಾಣಿಕೆ ಇದೆ. ಅವರ ಚಿತ್ರಗಳಿಗೆ ನಾನು ಸಂಭಾಷಣೆ ಬರೆಯುತ್ತೇನೆ. ಒಟ್ಟಿಗೆ ಸಿನಿಮಾದಲ್ಲಿ ಕೆಲಸ ಮಾಡುತ್ತೇವೆ ಎಂದು ನುಡಿದಿದ್ದಾರೆ.[ಚಿತ್ರಗಳು: ಅದ್ಧೂರಿಯಾಗಿ ಉದ್ಘಾಟನೆಗೊಂಡ ಸಿನಿಮೋತ್ಸವ]

Actress Suhasini Says my hubby does not consider me as good Actress

ಸುಮಾರು ಎರಡೂವರೆ ಘಂಟೆಗಳ ಕಾಲ ನಡೆದ ಸಂವಾದ ಕಾರ್ಯಕ್ರಮದಲ್ಲಿ ಸುಹಾಸಿನಿ ಅವರು 'ಮಹಿಳಾ ನಿರ್ದೇಶಕರ ಅವಶ್ಯಕತೆ, ನಟ-ನಟಿಯಾಗುವವರಿಗೆ ಇರಬೇಕಾದ ಬದ್ಧತೆ, ನಿಷ್ಠೆ, ಸಿನಿಮಾ ಕ್ಷೇತ್ರಕ್ಕೆ ಬರಲು ಬಯಸುವವರು ಏನು ಮಾಡಬೇಕು?, ಅಭಿನಯ ಎಂದರೆ ಏನು?, ಸಂಭಾಷಣೆಗೆ ಇರುವ ಮಹತ್ವ ಏನು? ಎಂಬುದರ ಬಗ್ಗೆ ವಿವರಣೆ ನೀಡಿದರು.

English summary
Kannada Actress Suhasini Says 'my hubby does not consider me as a good Actress'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada