For Quick Alerts
  ALLOW NOTIFICATIONS  
  For Daily Alerts

  'ರಾಕಿ ಭಾಯ್' ಕಂಡು ಹೆಮ್ಮೆ ಪಟ್ಟ ಸುಮಲತಾ ಅಂಬರೀಶ್

  |

  'ಕೆಜಿಎಫ್ ಚಿತ್ರ ಕೇವಲ ಕನ್ನಡ ಸಿನಿಮಾ ಮಾತ್ರವಲ್ಲ, ಇಡೀ ವಿಶ್ವವೇ ಈ ಚಿತ್ರದ ಕಡೆ ನೋಡುತ್ತೆ, ನೋಡುವಂತೆ ಆಗಬೇಕು' ಎಂದು ರೆಬೆಲ್ ಸ್ಟಾರ್ ಅಂಬರೀಶ್, ಕೆಜಿಎಫ್ ಟ್ರೈಲರ್ ನೋಡಿ ಹೇಳಿದ್ದರು. ಈಗ ಸಿನಿಮಾ ರಿಲೀಸ್ ಆಗಿದೆ, ಚಿತ್ರವನ್ನ ಎಲ್ಲ ಭಾಷಿಗರು ಇಷ್ಟಪಟ್ಟಿದ್ದಾರೆ.

  ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಂ ಪ್ರೇಕ್ಷಕರಂತೂ ರಾಕಿ ಭಾಯ್ ಗೆ ಫಿದಾ ಆಗಿದ್ದಾರೆ. ಬಹುಶಃ ಇದನ್ನೆಲ್ಲಾ ನೋಡ್ತಿದ್ರೆ, ಅಂಬರೀಶ್ ಅವರು ಅಂದು ಹೇಳಿದ್ದ ಮಾತು ನಿಜವಾಗುತ್ತಿದೆ ಅನಿಸುತ್ತಿದೆ.

  ಕಲೆಕ್ಷನ್ ನಲ್ಲಿ 'ಕೆಜಿಎಫ್' ಎದುರು ಮಂಡಿಯೂರಿದ 'ಜೀರೋ'.!

  ಇದೀಗ, ಸುಮಲತಾ ಅಂಬರೀಶ್ ಅವರು ಕೆಜಿಎಫ್ ಸಿನಿಮಾ ನೋಡಿದ್ದಾರೆ. ಕೆಜಿಎಫ್ ಚಿತ್ರವನ್ನ ಕಣ್ತುಂಬಿಕೊಂಡ ಸುಮಲತಾ, ರಾಕಿಂಗ್ ಸ್ಟಾರ್ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಈ ಚಿತ್ರ ಕನ್ನಡ ಚಿತ್ರರಂಗದ ಹಿರಿಮೆ ಎಂದು ಹೇಳಿದ್ದಾರೆ. ಹಾಗಿದ್ರೆ, ಸುಮಲತಾ ಕಂಡಂತೆ ಕೆಜಿಎಫ್ ಹೇಗಿತ್ತು? ಮುಂದೆ ಓದಿ.....

  'ಕೆಜಿಎಫ್' ಅಪ್ಪಟ ಚಿನ್ನ

  'ಕೆಜಿಎಫ್' ಅಪ್ಪಟ ಚಿನ್ನ

  ''ಕನ್ನಡದಲ್ಲಿ ಇಂತಹ ಸಿನಿಮಾವನ್ನ ಈ ಹಿಂದೆ ನಾನು ನೋಡಿಲ್ಲ. ನಿಜಕ್ಕೂ ಅದ್ಭುತವಾದ ಚಿತ್ರ. 'ಕೆಜಿಎಫ್' ಇದು ಅಪ್ಪಟ ಚಿನ್ನ. ಯಶ್ ಆ ಗಟ್ಸ್ ಬಗ್ಗೆ ಶಬ್ಬಾಶ್ ಹೇಳಲೇಬೇಕು. ಇಂತಹ ಚಿತ್ರಗಳು ಕೇವಲ ಅವಕಾಶ ಸಿಕ್ತು ಎಂದು ಆಕಸ್ಮಿಕವಾಗಿ ಆಗುವುದಿಲ್ಲ. ಯಶ್ ಅವರ ಎರಡು ವರ್ಷದ ಹಾರ್ಡ್ ವರ್ಕ್, ಆ ಫ್ಯಾಷನ್ ಅನ್ನ ನಾನು ಪ್ರಶಂಸಿಸುತ್ತೇನೆ'' ಎಂದು ಸುಮಲತಾ ಮೆಚ್ಚಿಕೊಂಡಿದ್ದಾರೆ.

  'ಕೆಜಿಎಫ್' ಪೂರ್ಣ ವಿಮರ್ಶೆ : ಪ್ರಪಂಚ ಗೆಲ್ಲಲು ಹೊರಟ 'ಕೆಜಿಎಫ್' ಕಂದನ ಕಥನ

  ಕನ್ನಡ ಚಿತ್ರರಂಗದ ಹೆಮ್ಮೆ

  ಕನ್ನಡ ಚಿತ್ರರಂಗದ ಹೆಮ್ಮೆ

  ''ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ಛಾಯಾಗ್ರಾಹಕ ಭುವನ್ ಗೌಡ ಅವರ ಪರಿಶ್ರಮದಿಂದ ಕನ್ನಡ ಚಿತ್ರರಂಗ ಇನ್ನೊಂದು ಹಂತಕೆ ಹೋಗಿದೆ. ನಾವೆಲ್ಲರೂ ಹೆಮ್ಮೆ ಪಡುವಂತೆ ಮಾಡಿದ್ದೀರಾ. ನಿರ್ಮಾಪಕ ವಿಜಯ್ ಕಿರಗಂದೂರ್ ಅವರ ಧೈರ್ಯದಿಂದಲೇ ಇದು ಸಾಧ್ಯವಾಗಿದೆ. ಅವರ ಪ್ರಮಾಣಿಕತೆಗೆ ಸಿಕ್ಕ ಪ್ರತಿಫಲ ಇದು''

  ಕಲೆಕ್ಷನ್ ನಲ್ಲಿ ಇತಿಹಾಸ ನಿರ್ಮಿಸಿದ ಕೆಜಿಎಫ್: ಮೊದಲ ದಿನ 24 ಕೋಟಿ.!

  'ನೀನಂತೂ ಕೊಂದುಬಿಟ್ಟಿದಿಯಾ'

  'ನೀನಂತೂ ಕೊಂದುಬಿಟ್ಟಿದಿಯಾ'

  ''ಕೆಜಿಎಫ್ ಚಿತ್ರ ಹಾಗೂ ಯಶ್ ಅವರನ್ನ ಇಡೀ ಭಾರತದ ಕೊಂಡಾಡುತ್ತಿರುವುದನ್ನ ನೋಡುತ್ತಿದ್ದರೇ ನಿಜಕ್ಕೂ ಖುಷಿ ಆಗ್ತಿದೆ. ಪ್ರತಿಯೊಂದು ಅಂಶವೂ ಇದಕ್ಕೆ ಕಾರಣವಾಗಿದೆ. ರಾಕಿ ಭಾಯ್ ನೀನಂತೂ 'ಕೊಂದುಬಿಟ್ಟಿದ್ದಿಯಾ'. ಈಗ ಹಿಂದೆ ಕೂತು ನೀನು ಪಟ್ಟ ಶ್ರಮದ ಪ್ರತಿಫಲವನ್ನ ನೋಡಿ ಖುಷಿ ಪಡು'' ಎಂದು ಸುಮಲತಾ ಹಾರೈಸಿದ್ದಾರೆ.

  'ಕೆಜಿಎಫ್' ಎರಡನೇ ದಿನದ ಕಲೆಕ್ಷನ್ ಎಷ್ಟು? ಎಷ್ಟು ಕೋಟಿ ಬಂತು?

  ಥ್ಯಾಂಕ್ಸ್ ಅಕ್ಕ ಎಂದ ಯಶ್

  ಥ್ಯಾಂಕ್ಸ್ ಅಕ್ಕ ಎಂದ ಯಶ್

  ಸುಮಲತಾ ಅವರು ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಕ್ಕೆ ನಟ ಯಶ್, ಧನ್ಯವಾದ ತಿಳಿಸಿದ್ದಾರೆ. ''ಸಿನಿಮಾ ನೋಡಿದಕ್ಕೆ ಥ್ಯಾಂಕ್ಸ್, ಅಣ್ಣ ನಮ್ಮೊಂದಿಗೆ ಇದ್ದಾರೆ. ಅವರು ಎಲ್ಲೇ ಇದ್ದರೂ ನಮ್ಮ ಸಂತೋಷದಲ್ಲಿ ಭಾಗಿಯಾಗಿರ್ತಾರೆ. ನನಗೆ ನಂಬಿಕೆ ಇದೆ, ಅವರು ನಮ್ಮನ್ನ ಆಶೀರ್ವಾದ ಮಾಡ್ತಾರೆ'' ಎಂದು ಯಶ್ ಟ್ವೀಟ್ ಮಾಡಿದ್ದಾರೆ.

  ಕೆಜಿಎಫ್ ನೋಡಿ 'ರಾಕಿ ಭಾಯ್'ಗೆ ಫಿದಾ ಆದ ಬಾಲಿವುಡ್ ನಟಿ.!

  50 ಕೋಟಿ ಬಾಚಿದ ಕೆಜಿಎಫ್

  50 ಕೋಟಿ ಬಾಚಿದ ಕೆಜಿಎಫ್

  ಕೆಜಿಎಫ್ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಬಿಸಿನೆಸ್ ಮಾಡ್ತಿದ್ದು, ಮೊದಲ ವಾರದಲ್ಲೇ 50 ಕೋಟಿ ಗಳಿಸಿದೆ. ಈ ಮಾಹಿತಿಯನ್ನ ಸ್ವತಃ ನಿರ್ಮಾಪಕ ವಿಜಯ್ ಕಿರಗಂದೂರ್ ಅವರೇ ಬಹಿರಂಗಪಡಿಸಿದ್ದಾರೆ. ಮೊದಲ ಮೂರು ದಿನದಲ್ಲೇ ದಾಖಲೆ ನಿರ್ಮಿಸಿರುವ ಕೆಜಿಎಫ್ ನೂರು ಕೋಟಿ ಕ್ಲಬ್ ಸೇರೋದು ಪಕ್ಕಾ.

  English summary
  Kannada Actress sumalatha ambareesh praised rocking star yash starrer kgf movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X