»   » ತ್ರಿಷಾ ಕೃಷ್ಣನ್ ನಿಶ್ಚಿತಾರ್ಥ...! ಗಾಸಿಪ್ ಅಲ್ಲ, 100% ಸತ್ಯ..!

ತ್ರಿಷಾ ಕೃಷ್ಣನ್ ನಿಶ್ಚಿತಾರ್ಥ...! ಗಾಸಿಪ್ ಅಲ್ಲ, 100% ಸತ್ಯ..!

Posted By:
Subscribe to Filmibeat Kannada

ಕಾಲಿವುಡ್ ನ ಮೋಸ್ಟ್ ವಾಂಟೆಡ್ ನಟಿ, ಸ್ಯಾಂಡಲ್ ವುಡ್ ನಲ್ಲಿ 'ಪವರ್ ***' ಚಿತ್ರದ ಮೂಲಕ ಸಂಚಲನ ಉಂಟುಮಾಡಿದ್ದ ಚೆಲುವೆ ತ್ರಿಷಾ ಕೃಷ್ಣನ್ ಮತ್ತು ಉದ್ಯಮಿ ವರುಣ್ ನಿಶ್ಚಿತಾರ್ಥ ಇದೇ ತಿಂಗಳ 23 ರಂದು ನಡೆಯಲಿದೆ. ಇದು ಗಾಸಿಪ್ ಸುದ್ದಿ ಅಲ್ಲವೇ ಅಲ್ಲ. ಖಂಡಿತವಾಗಿಯೂ ಇದು ಹಂಡ್ರೆಡ್ ಪರ್ಸೆಂಟ್ ಸತ್ಯ ಸಂಗತಿ.

ತ್ರಿಷಾ ಕೃಷ್ಣನ್ ಗೆ ಲವ್ ಫೀವರ್ ಬಂದುಬಿಟ್ಟಿದೆ! ತ್ರಿಷಾ ಸದ್ಯದಲ್ಲೇ ಮದುವೆಯಾಗಲಿದ್ದಾರೆ. ತ್ರಿಷಾರನ್ನ ವರಿಸಲಿರುವ ಗಂಡು ಯಾರು..? ಈ ಎಲ್ಲಾ ಊಹಾಪೋಹಗಳು ಇಲ್ಲಿವರೆಗೂ ಕಾಲಿವುಡ್ ನಿಂದ ಬಾಲಿವುಡ್ ವರೆಗೂ ದಿನಕ್ಕೊಂದರಂತೆ ರೆಕ್ಕೆ-ಪುಕ್ಕ ಕಟ್ಟಿಕೊಂಡು ಹರಿದಾಡಿತ್ತು.

Actress Trisha Krishnan1

ಇದನ್ನೆಲ್ಲಾ ನೋಡಿದ ಮೇಲೆ, ''ಮದುವೆಯಾಗುತ್ತಿರುವ ಬಗ್ಗೆ ನಾನೇ ನಿಮಗೆಲ್ಲಾ ತಿಳಿಸುತ್ತೇನೆ'' ಅಂತ ಹಿಂದೊಮ್ಮೆ ಟ್ವೀಟ್ ಮಾಡಿದ್ದ ತ್ರಿಷಾ, ತಮ್ಮ ಅಭಿಮಾನಿಗಳಿಗೆ ಕೊಟ್ಟ ಮಾತನ್ನ ಉಳಿಸಿಕೊಂಡಿದ್ದಾರೆ. ಅಂದು ತ್ರಿಷಾ ಹೇಳಿದಂತೆ, ತಮ್ಮ ನಿಶ್ಚಿತಾರ್ಥದ ದಿನಾಂಕವನ್ನ ತಮ್ಮ ಟ್ವಿಟ್ಟರ್ ನಲ್ಲಿ ಬಹಿರಂಗಗೊಳಿಸಿದ್ದಾರೆ.


''ಜನವರಿ 23 ರಂದು ನನ್ನ ಮತ್ತು ವರುಣ್ ನಿಶ್ಚಿತಾರ್ಥ ಸರಳವಾಗಿ ಎರಡು ಕುಟುಂಬಗಳ ಮಟ್ಟಿಗಷ್ಟೇ ನೆರವೇರಲಿದೆ'' ಅಂತ ಮಾಧ್ಯಮಗಳಿಗೆ, ಸ್ನೇಹಿತರಿಗೆ ಮತ್ತು ತಮ್ಮ ಅಭಿಮಾನಿಗಳಿಗೆ ತ್ರಿಷಾ ಟ್ವೀಟ್ ಮಾಡಿದ್ದಾರೆ. [ತಾರೆ ತ್ರಿಷಾ ಕೃಷ್ಣನ್ ವರಿಸಲಿರುವ ಹುಡುಗ ಇವರೇನಾ?]

ನಿಶ್ಚಿತಾರ್ಥವೇನೋ ಈ ತಿಂಗಳು ನೆರವೇರಲಿದೆ. ಹಾಗಾದ್ರೆ, ಮದುವೆ ಯಾವಾಗ..? ಈ ಪ್ರಶ್ನೆಗೂ ತ್ರಿಷಾ ಟ್ವೀಟ್ ಮೂಲಕವೇ ಉತ್ತರ ನೀಡಿದ್ದಾರೆ ನೋಡಿ.

''ನನ್ನ ಮದುವೆ ದಿನಾಂಕದ ಬಗ್ಗೆ ಊಹಾಪೋಹಗಳು ಬೇಡ. ನಾವಿನ್ನೂ ಅದನ್ನ ಫಿಕ್ಸ್ ಮಾಡಿಲ್ಲ. ದಿನಾಂಕ ನಿಗಧಿಯಾದಾಗ ನಾನೇ ಖುದ್ದಾಗಿ ತಿಳಿಸುತ್ತೇನೆ'' ಅಂತ ಗಾಸಿಪ್ ಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸಿ ತ್ರಿಷಾ ಕೃಷ್ಣನ್ ಟ್ವೀಟ್ ಮಾಡಿದ್ದಾರೆ.

ಕನ್ನಡದ 'ಪವರ್ ***' ಸಿನಿಮಾವೊಂದನ್ನ ಬಿಟ್ರೆ ಮತ್ತೆ ತೆರೆಮೇಲೆ ಕಾಣಿಸಿಕೊಳ್ಳದ ತ್ರಿಷಾಗೆ, ಮದುವೆ ಬಳಿಕ ಚಿತ್ರರಂಗಕ್ಕೆ ಟಾಟಾ ಹೇಳುವ ಪ್ಲಾನ್ ನಂತೂ ಖಂಡಿತ ಇಲ್ಲ..

Actress Trisha Krishnan2

ಸದ್ಯಕ್ಕೆ ಅಜಿತ್ ಜೊತೆ 'ಎನ್ನೈ ಅರಿಂದಾಲ್' ಚಿತ್ರದಲ್ಲಿ ಅಭಿನಯಿಸಿರುವ ತ್ರಿಷಾ ಕೈಯಲ್ಲಿ 'ಲಯನ್' ಸೇರಿದಂತೆ ಒಟ್ಟು ಮೂರು ಚಿತ್ರಗಳಿವೆ. ''ಇದರ ಹೊರತಾಗಿ ಇನ್ನೂ ಎರಡು ಚಿತ್ರಗಳಿಗೆ ಸದ್ಯದಲ್ಲೇ ಸೈನ್ ಮಾಡಲಿದ್ದೇನೆ'' ಅಂತ ತಮ್ಮ ವೃತ್ತಿ ಬದುಕಿನ ಬಗ್ಗೆಯೂ ತ್ರಿಷಾ ಟ್ವೀಟ್ ಮಾಡಿದ್ದಾರೆ. [ತಾಜ್ ಮಹಲ್ ಬಳಿ ಪ್ರಿಯಕರನೊಂದಿಗೆ ತ್ರಿಷಾ ಕೃಷ್ಣನ್]

ಅಲ್ಲಿಗೆ, ತ್ರಿಷಾ ಹಸೆಮಣೆ ಏರಿದ್ರೂ, ಅವರ ಅಭಿಮಾನಿಗಳ ಕಣ್ಣಿಗೆ ಮಾತ್ರ ತಣ್ಣೀರೆರಚಲ್ಲ ಅನ್ನುವುದು ಪಕ್ಕಾ ಆಯ್ತು. ಸಿಂಗಲ್ ಸ್ಟೇಟಸ್ ನಿಂದ ಸದ್ಯದಲ್ಲೇ ಜಂಟಿಯಾಗುತ್ತಿರುವ ತ್ರಿಷಾಗೆ ನಮ್ಮ ಕಡೆಯಿಂದಲೂ ಹಾರ್ದಿಕ ಶುಭಾಶಯಗಳು.

English summary
Finally, Kollywood Actress Trisha Krishnan confirms her relationship with Varun Manian and Announced her Engagement date. Trisha is getting Engaged on Jan 23rd in a private ceremony.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada