»   » ತ್ರಿಷಾ ನಿಶ್ಚಿತಾರ್ಥ ಉಡುಗೊರೆ ಬೆಲೆ ರು.7 ಕೋಟಿ

ತ್ರಿಷಾ ನಿಶ್ಚಿತಾರ್ಥ ಉಡುಗೊರೆ ಬೆಲೆ ರು.7 ಕೋಟಿ

Posted By:
Subscribe to Filmibeat Kannada

ನಟಿ ತ್ರಿಷಾ ಕೃಷ್ಣ ಅವರ ಮದುವೆ ನಿಶ್ಚಿತಾರ್ಥ ಇದೇ ಜನವರಿ 23ರಂದು ನಡೆಯುತ್ತಿದೆ. ಚಲನಚಿತ್ರ ನಿರ್ಮಾಪಕ ಹಾಗೂ ಉದ್ಯಮಿ ವರುಣ್ ಮಣಿಯನ್ ಅವರನ್ನು ಮದುವೆಯಾಗುತ್ತಿದ್ದಾರೆ ತ್ರಿಷಾ. ಇದನ್ನು ಸ್ವತಃ ತ್ರಿಷಾ ಅವರೇ ಘಂಟಾಘೋಷ ಪ್ರಕಟಿಸಿದ್ದಾರೆ.

"ನನ್ನ ಗೆಳೆಯರು, ಅಭಿಮಾನಿಗಳಿಗೆ ಒಂದು ವಿಷಯನ್ನು ಹೇಳಬೇಕೆಂದಿದ್ದೇನೆ. ಜನವರಿ 23ಕ್ಕೆ ವರುಣ್ ಅವರೊಂದಿಗೆ ನನ್ನ ನಿಶ್ಚಿತಾರ್ಥ ನೆರವೇರಲಿದೆ. ಈ ಕಾರ್ಯಕ್ರಮ ಬಹಳ ಖಾಸಗಿಯಾಗಿ, ನನ್ನ ಕುಟುಂಬ ಸದಸ್ಯರ ಸಮ್ಮುಖದಲ್ಲಿ ನಡೆಯಲಿದೆ." ಎಂದಿದ್ದಾರೆ. [ತನ್ನ ಭಾವಿ ಪತಿಯೊಂದಿಗೆ ತ್ರಿಷಾ ಕೃಷ್ಣನ್ ಚೊಚ್ಚಲ ಸೆಲ್ಫಿ]

ನನ್ನ ಮದುವೆ ದಿನಾಂಕದ ಬಗ್ಗೆ ಯಾವುದೇ ಸುದ್ದಿಯನ್ನೂ ಬರೆಯಬೇಡಿ. ಏಕೆಂದರೆ ಅದು ಇನ್ನೂ ಫಿಕ್ಸ್ ಆಗಿಲ್ಲ. ಡೇಟ್ ಫಿಕ್ಸ್ ಆದ ಮೇಲೆ ನಾನೇ ತಿಳಿಸುತ್ತೇನೆ ಎಂದು ಟ್ವೀಟಿಸಿ ಕೋಟ್ಯಾಂತರ ಅಭಿಮಾನಿಗಳ ಆಸೆಗೆ ದೋಸೆ ಹುಯ್ದಿದ್ದಾರೆ.

Actress Trisha Krishnan to get Rs 7 cr engagement gift

ನಿಶ್ಚಿತಾರ್ಥದ ನಿಮಿತ್ತ ತ್ರಿಷಾ ಅವರಿಗೆ ದುಬಾರಿ ಉಡುಗೊರೆಯೇ ಸಿಗುತ್ತಿದೆ. ತನ್ನ ಭಾವಿ ಪತಿ ವರುಣ್ ರು.7 ಕೋಟಿ ಬೆಲೆಬಾಳುವ ಜೆಟ್ ಬ್ಲ್ಯಾಕ್ ಕಲರ್ ರೋಲ್ಸ್ ರಾಯ್ ಫ್ಯಾಂತಮ್ ಕಾರನ್ನು ಉಡುಗೊರೆಯಾಗಿ ನೀಡುತ್ತಿದ್ದಾರೆ.

ಅಯ್ಯೋ ನನಗೂ ಈ ರೀತಿ ಹುಡುಗ ಸಿಗಬಾರದಾ ಎಂದು ಹುಡುಗಿಯರು ಒಳಗೊಳಗೆ ಮಂಡಕ್ಕಿ ತಿನ್ನುವಂತಾಗಿದೆ. ಆದರೆ ತ್ರಿಷಾ ಮೇಲೆ ಕೋಟ್ಯಾಂತರ ರುಪಾಯಿ ಬಂಡವಾಳ ಹೂಡಿರುವ ನಿರ್ಮಾಪಕರು ಮಾತ್ರ ತಮ್ಮ ಜೀವನ್ನು ಕೈಯಲ್ಲಿ ಹಿಡಿದುಕೊಂಡು ಓಡಾಡುವಂತಾಗಿದೆ.

ಸಮಾಧಾನದ ಸಂಗತಿ ಎಂದರೆ, ತ್ರಿಷಾ ಅವರ ಒಂದು ಟ್ವೀಟ್ ನಿರ್ಮಾಪಕರ ಪಾಲಿಗೆ ಕೊಂಚ ನಿರಾಳ ತಂದಿದೆ. ಅದೇನೆಂದರೆ, "ಜನವರಿ 23ಕ್ಕೆ ನನ್ನ ನಿಶ್ಚಿತಾರ್ಥ. ಆದರೆ ಮದುವೆ ದಿನಾಂಕ ಮಾತ್ರ ಇನ್ನೂ ನಿಗದಿಯಾಗಿಲ್ಲ. ಸಿನಿಮಾಗಳಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಶೀಘ್ರದಲ್ಲೇ ಎರಡು ಹೊಸ ಚಿತ್ರಗಳಿಗೆ ಅಂಕಿತ ಹಾಕುತ್ತಿದ್ದೇನೆ. ನನ್ನ ಅಭಿನಯ ನಾಲ್ಕು ಚಿತ್ರಗಳು ಇದೇ ವರ್ಷ ತೆರೆಕಾಣಲಿವೆ. ಅದಕ್ಕಾಗಿ ಕುತೂಹಲದಿಂದ ಎದುರು ನೋಡುತ್ತಿದ್ದೇನೆ" ಎಂದಿದ್ದಾರೆ. (ಏಜೆನ್ಸೀಸ್)

English summary
As per reports Trisha Krishnan is going to get lavish swanky vehicle from her would-be husband. Varun Manian is likely to gift Trisha a beautiful, wonderful jet black color Rollas Royce Phantom car which is worth of Rs 7 Crores.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada