»   » ಮೋಹಕ ತಾರೆ ತ್ರಿಷಾ ಕೃಷ್ಣನ್ ಬೆಂಗಳೂರಿನಲ್ಲಿ ಪ್ರತ್ಯಕ್ಷ

ಮೋಹಕ ತಾರೆ ತ್ರಿಷಾ ಕೃಷ್ಣನ್ ಬೆಂಗಳೂರಿನಲ್ಲಿ ಪ್ರತ್ಯಕ್ಷ

By: ಜೀವನರಸಿಕ
Subscribe to Filmibeat Kannada

ಸಿನಿಪ್ರಿಯರನ್ನ ಕನಸಲ್ಲೂ ಕಾಡೋ ಚೆಲುವೆ ತ್ರಿಷಾ ಕೃಷ್ಣನ್. ಇದೀಗ ಈ ಸ್ವಪ್ನ ಸುಂದರಿ ಬೆಂಗಳೂರಿನಲ್ಲಿ ಪ್ರತ್ಯಕ್ಷವಾಗುವ ಸಮಯ ಬಂದಿದೆ. ಆದರೆ ನೀವು ಸ್ವಲ್ಪ ದಿನಗಳ ಮಟ್ಟಿಗೆ ಕಾಯಬೇಕಷ್ಟೇ. ಆಗಸ್ಟ್ ನಲ್ಲಿ ತ್ರಿಷಾ ಬೆಂಗಳೂರಿಗೆ ಬರ್ತಿದ್ದಾರೆ.

ಪವರ್ ಸ್ಟಾರ್ ಚಿತ್ರತಂಡದ ಜೊತೆ ಚಿತ್ರದ ಪ್ರೊಮೋಷನ್ ನಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ. ಪವರ್ ಸ್ಟಾರ್ ಜೊತೆ ಸ್ವೀಟ್ ಬ್ಯೂಟಿ ತ್ರಿಷಾ ಇದ್ರೆ ಪ್ರೇಕ್ಷಕರು ಖುಷಿ ಡಬಲ್. ತ್ರಿಷಾ ನೋಡೋಕೆ ಥಿಯೇಟರ್ ಗೆ ಬರೋ ಸೌಂದರ್ಯ ರಸಿಕರೂ ಇದ್ದಾರೆ.

Actress Trisha Krishnan to visit Bangalore

ಆಗಸ್ಟ್ 10ರ ನಂತರ ತ್ರಿಷಾ ಗಾರ್ಡನ್ ಸಿಟಿಗೆ ಎಂಟ್ರಿಕೊಡ್ತಾರೆ ಅನ್ನೋ ಸುದ್ದಿ ಬಂದಿದ್ದು ಕನ್ನಡದಲ್ಲೂ ಇರೋ ತ್ರಿಷಾ ಅಭಿಮಾನಿಗಳಂತೂ ಈ ಚೆಲುವೆಯನ್ನ ನೋಡೋಕೆ ಕಾತುರರಾಗಿದ್ದಾರೆ. ಮಾಧ್ಯಮಗಳಲ್ಲಿ ಸಿನಿಮಾದ ಪ್ರೊಮೋಷನ್ ಮಾಡಲಿರೋ ತ್ರಿಷಾ ಓಪನ್ ಸ್ಟೇಜ್ ನಲ್ಲಿ ಸಿಕ್ತಾರಾ ಅನ್ನೋದು ಸದ್ಯಕ್ಕೆ ಸಸ್ಪೆನ್ಸ್.

ಯಾಕಂದ್ರೆ ಬಳ್ಳಾರಿಯಲ್ಲಿ ನಡೆದ ಅದ್ದೂರಿ 'ಪವರ್ ಸ್ಟಾರ್' ಆಡಿಯೋ ರಿಲೀಸ್ ಗೆ ಸೂಪರ್ ಸ್ಟಾರ್ ಮಹೇಶ್ ಬಾಬು ಹಾಗೂ ಪುನೀತ್ ಜೊತೆ ತ್ರಿಷಾ ಇರ್ತಾರೆ ಅಂತ ನಿರೀಕ್ಷೆ ಮಾಡಲಾಗಿತ್ತು. ಆದ್ರೆ ತ್ರಿಷಾ ಬಂದಿರಲಿಲ್ಲ. ಈ ಬಾರಿಯಾದ್ರೂ ಕ್ಯೂಟ್ ಬ್ಯೂಟಿ ತ್ರಿಷಾ ಗಾರ್ಡನ್ ಸಿಟಿಯಲ್ಲಿ ಕಾಣಿಸಿಕೊಳ್ತಾರಾ ಅಂತ ಕಾದಿದ್ದಾರೆ ಚಿತ್ರರಸಿಕರು ಮತ್ತು ಸೌಂದರ್ಯ ರಸಿಕರು.

English summary
Actress Trisha Krishnan all set to visit Bangalore. She is coming Bangalore for promoting her upcoming Kannada movie 'Power Star' with Puneeth Rajkumar. After August 10 the actress may visit Bangalore.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada