For Quick Alerts
  ALLOW NOTIFICATIONS  
  For Daily Alerts

  ಮೂಲ ಹೆಸರು ಬದಲಿಸಿಕೊಂಡ 'ಕಾನ್ಸ್‌ಟೇಬಲ್ ಸರೋಜಾ'

  |

  'ಟಗರು' ಸಿನಿಮಾ ನೋಡಿದವರಿಗೆ ಈ 'ಕಾನ್ಸ್‌ಟೇಬಲ್ ಸರೋಜಾ' ಯಾರು ಎಂದು ಗೊತ್ತಿರುತ್ತದೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಡಾಲಿ ಧನಂಜಯ್ ಕಾಂಬಿನೇಷನ್‌ನಲ್ಲಿ ಮೂಡಿಬಂದಿದ್ದ ಟಗರು ಚಿತ್ರದಲ್ಲಿ ಮಹಿಳಾ ಪೊಲೀಸ್ ಕಾನ್ಸ್ ಟೇಬಲ್ ಪಾತ್ರದಲ್ಲಿ ತ್ರಿವೇಣಿ ರಾವ್ ನಟಿಸಿದ್ದರು. ಸಣ್ಣ ಪಾತ್ರ ಆಗಿದ್ದರೂ ಪ್ರೇಕ್ಷಕರ ಗಮನ ಸೆಳೆದಿದ್ದರು. ಕಾನ್ಸ್ ಟೇಬಲ್ ಸರೋಜಾ ಅಂದ್ರೆ ಡಾಲಿ ಗರ್ಲ್‌ಫ್ರೆಂಡ್ ಎಂದು ಹೇಳುವಷ್ಟು ಜನರು ಈಕೆಯನ್ನು ನೆನಪಿನಲ್ಲಿಟ್ಟುಕೊಂಡರು.

  ಬಹಳಷ್ಟು ಜನರಿಗೆ ಈಕೆಯ ಹೆಸರು ತ್ರಿವೇಣಿ ರಾವ್ ಎಂದು ಗೊತ್ತೇ ಇಲ್ಲ. ಎಲ್ಲೇ ಕಂಡರೂ ಕಾನ್ಸ್ ಟೇಬಲ್ ಸರೋಜಾ ಎಂದೇ ಗುರುತಿಸುತ್ತಾರೆ. ಹೀಗೇ ಒಂದೇ ಒಂದು ಸಣ್ಣ ಪಾತ್ರದ ಮೂಲಕ ಸ್ಯಾಂಡಲ್‌ವುಡ್ ಅಂಗಳದಲ್ಲಿ ಇಷ್ಟು ದೊಡ್ಡ ಹವಾ ಸೃಷ್ಟಿಸಿದ ತ್ರಿವೇಣಿ ರಾವ್ ಈಗ ಟಾಲಿವುಡ್‌ನಲ್ಲಿ ಹೆಚ್ಚು ಬ್ಯುಸಿ ಇದ್ದಾರೆ.

  ಶೂಟಿಂಗ್ ವೇಳೆ ಹಠಾತ್ ಆಗಿ ಕುಸಿದು ಬಿದ್ದ ನಟಿ ಕಾನ್ಸ್ ಟೇಬಲ್ ಸರೋಜಾಶೂಟಿಂಗ್ ವೇಳೆ ಹಠಾತ್ ಆಗಿ ಕುಸಿದು ಬಿದ್ದ ನಟಿ ಕಾನ್ಸ್ ಟೇಬಲ್ ಸರೋಜಾ

  ಈ ನಡುವೆ ತ್ರಿವೇಣಿ ರಾವ್ ತಮ್ಮ ಮೂಲ ಹೆಸರನ್ನು ಬದಲಿಸಿಕೊಂಡಿದ್ದಾರೆ. ತ್ರಿವೇಣಿ ರಾವ್ ಬದುಲು ರುಷಿಕಾ ರಾಜ್ ಎಂದು ಮರುನಾಮಕರಣ ಮಾಡಿಕೊಂಡಿದ್ದಾರೆ. ತಮ್ಮ ಮುಂದಿನ ಸಿನಿಮಾದಿಂದ ತ್ರಿವೇಣಿ ರಾವ್ ರುಷಿಕಾ ರಾಜ್ ಆಗಿ ಕರೆಯಿಸಿಕೊಳ್ಳಲಿದ್ದಾರೆ.

  ಈ ವಿಷಯವನ್ನು ಸ್ವತಃ ರುಷಿಕಾ ರಾಜ್ (ತ್ರಿವೇಣಿ ರಾವ್) ತಮ್ಮ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. ಇನ್ಮುಂದೆ ನನ್ನ ಹೆಸರು ರುಷಿಕಾ ರಾಜ್, ನಿಮ್ಮೆಲ್ಲರ ಬೆಂಬಲ ಹೀಗೆ ಮುಂದುವರಿಯಲಿ ಎಂದು ಮಾಹಿತಿ ನೀಡಿದ್ದಾರೆ.

  ಈ ಕಡೆ ತ್ರಿವೇಣಿ ರಾವ್ ಹೆಸರು ಬದಲಿಸಿಕೊಂಡಿದ್ದರೂ ಸ್ಯಾಂಡಲ್‌ವುಡ್ ಫ್ಯಾನ್ಸ್ ಮಾತ್ರ, ''ನೀವು ಏನಾದರೂ ಹೆಸರು ಬದಲಿಸಿಕೊಳ್ಳಿ, ನಮಗೆ ಮಾತ್ರ ನೀವು ಕಾನ್ಸ್‌ಟೇಬಲ್ ಸರೋಜಾನೇ'' ಎಂದು ಕಾಮೆಂಟ್ ಮಾಡುತ್ತಿದ್ದಾರೆ.

  Actress Trivenee Rao Changed Her Name to Rushika Raj

  'ಟಗರು' ಸಿನಿಮಾ ಬಳಿಕ ಅಜಯ್ ರಾವ್ ನಟನೆಯ 'ತಾಯಿಗೆ ತಕ್ಕ ಮಗ', ಚಿರಂಜೀವಿ ಸರ್ಜಾ ನಟನೆಯ 'ರಾಜಮಾರ್ತಾಂಡ' ಚಿತ್ರದಲ್ಲಿ ರುಷಿಕಾ ರಾಜ್ ಕಾಣಿಸಿಕೊಂಡಿದ್ದರು. 'ಸಲಗ' ಚಿತ್ರದಲ್ಲಿಯೂ ನಟಿಸಿದ್ದಾರೆ ಎಂಬ ಮಾಹಿತಿ ಇದೆ. ಇನ್ನು ತೆಲುಗಿನಲ್ಲಿ ಹೆಚ್ಚು ಬ್ಯುಸಿಯಿರುವ ನಟಿ ಗೋಪಿಚಂದ್-ತಮನ್ನಾ ನಟನೆಯ 'ಸೀಟಿಮಾರ್' ಚಿತ್ರದಲ್ಲಿ ಅಭಿನಯಿಸಿದ್ದಾರೆ. ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ರಿಲೀಸ್ ಆಗುತ್ತಿರುವ 'ಅಶ್ಮಿ' ಚಿತ್ರದಲ್ಲಿಯೂ ರುಷಿಕಾ ರಾಜ್ ಬಣ್ಣ ಹಚ್ಚಿದ್ದಾರೆ. ಅದರ ಜೊತೆಗೆ 'ಜಾತಿಯ ರಹದಾರಿ' ಎಂಬ ಸಿನಿಮಾನೂ ಮಾಡಿದ್ದಾರೆ.

  English summary
  'Constable saroja' fame actress Triveni rao changed her name to Rushika Raj.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X