For Quick Alerts
  ALLOW NOTIFICATIONS  
  For Daily Alerts

  ಐಟಂ ಹಾಡಿನಲ್ಲಿ ಯಜ್ಞಾ ಶೆಟ್ಟಿ ಶೃಂಗಾರ ರಸಧಾರೆ

  By Rajendra
  |

  ಕಣ್ಣೀರ ಕೋಡಿ ಹರಿಸುವ ಪಾತ್ರಗಳಲ್ಲಿ ಮಿಂಚಿದ್ದ ಕರಾವಳಿ ಬೆಡಗಿ ಯಜ್ಞಾ ಶೆಟ್ಟಿ ಇದೇ ಮೊದಲ ಬಾರಿಗೆ ಐಟಂ ಹಾಡಿಗೆ ಸೊಂಟ ಕುಣಿಸಿದ್ದಾರೆ. ಈಕೆ ಅಭಿನಯದ 'ಎದ್ದೇಳು ಮಂಜುನಾಥ', 'ಸುಗ್ರೀವ' ಹಾಗೂ 'ಕಳ್ಳ ಮಳ್ಳ ಸುಳ್ಳ' ಚಿತ್ರಗಳ ಬಳಿಕ ಯಜ್ಞಾ ಶೆಟ್ಟಿ ಯಾವುದೇ ಚಿತ್ರಕ್ಕೆ ಸಹಿಹಾಕಿಲ್ಲ.

  ಹೆಚ್ಚಾಗಿ ಯಜ್ಞಾ ಶೆಟ್ಟಿ ಮಿಂಚಿದ್ದು ಭಾವನಾತ್ಮಕ ಪಾತ್ರಗಳ ಮೂಲಕವೇ. ಆದರೆ ಈ ಬಾರಿ ತಮ್ಮ ವರಸೆಯನ್ನು ಬದಲಾಯಿಸಿರುವ ಯಜ್ಞಾ ಶೆಟ್ಟಿ ಐಟಂ ಹಾಡಿನ ಮೂಲಕ ಪಡ್ಡೆಗಳಿಗೆ ಪಂಚಾಮೃತ ಬಡಿಸಲಿದ್ದಾರೆ. ದೇವು ಎಂಬುವವರು ನಿರ್ದೇಶಿಸುತ್ತಿರುವ 'ಪಂದ್ಯ' ಚಿತ್ರದಲ್ಲಿ ಮಸ್ತ್ ಐಟಂ ಡಾನ್ಸ್ ಮಾಡಿದ್ದಾರೆ ಯಜ್ಞಾ.

  ಅತ್ತ ಐಟಂ ಸಾಂಗ್ ಮಾಡುತ್ತಾ ಇತ್ತ ಸಡಗರ ಎಂಬ ಚಿತ್ರದಲ್ಲಿ ಪೂರ್ಣ ಪ್ರಮಾಣದ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಈ ಪ್ರೀತಿ ಒಂಥರಾ ಚಿತ್ರದ ಮೂಲಕ ಬೆಳ್ಳಿತೆರೆಗೆ ಅಡಿಯಿಟ್ಟ ಈ ಮಂಗಳೂರು ಮೊಲ್ಲೆಗೆ ಯಾಕೋ ಏನೋ ನಿರೀಕ್ಷಿಸಿದ ಮಟ್ಟದಲ್ಲಿ ಅವಕಾಶಗಳು ಬರಲಿಲ್ಲ.

  ಜಗ್ಗೇಶ್ ಅವರಂತಹ ನಟನೊಂದಿಗೆ ಸರಿಸಾಟಿಯಾಗಿ ಎದ್ದೇಳು ಮಂಜುನಾಥ ಚಿತ್ರದಲ್ಲಿ ಅಭಿನಯಿಸಿ ತಮ್ಮ ಅಭಿನಯ ಸಾಮರ್ಥ್ಯವನ್ನು ತೋರಿದ್ದರು. ಬಳಿಕ ಬಂದಂತಹ 'ಲವ್ ಗುರು' ಚಿತ್ರದಲ್ಲಿ ತೀರಾ ಭಿನ್ನ ಪಾತ್ರವನ್ನು ಪೋಷಿಸಿದ್ದರು. ಎಲ್ಲರ ಮೆಚ್ಚುಗೆಗೂ ಪಾತ್ರರಾಗಿದ್ದರು.

  ಎಂಬಿಎ ಪದವೀಧರೆಯಾದ ಯಜ್ಞಾ ಶೆಟ್ಟಿ ಓದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಕುಡ್ಲಾದಲ್ಲಿ. ಏತನ್ಮಧ್ಯೆ ಸೆಟ್ಟೇರಿದ 'ಕ್ವಾಟ್ಲೆ, ಪಕ್ಕಾ 420 ನನ್ಮಗ' ಎಂಬ ಚಿತ್ರದ ಕತೆ ಏನಾಯ್ತು ಎಂಬುದರ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ. 'ಲವ್ ಜಂಕ್ಷನ್' ಎಂಬ ಮತ್ತೊಂದು ಚಿತ್ರದಲ್ಲೂ ಯಜ್ಞಾ ಶೆಟ್ಟಿ ಅಭಿನಯಿಸುತ್ತಿದ್ದಾರೆ.

  ಪಂದ್ಯ ಚಿತ್ರದ ಐಟಂ ಹಾಡನ್ನು ಗವಿಪುರಂನ ಶ್ರೀ ಗವಿಗಂಧಾರೇಶ್ವರ ಆಲಯದಲ್ಲಿ ಚಿತ್ರೀಕರಿಸಿಕೊಳ್ಳಲಾಗಿದೆ. ಇನ್ನು ಪಂದ್ಯದ ವಿಚಾರಕ್ಕೆ ಬರುವುದಾದರೆ ಚಂದ್ರು, ಮಾನಸಿ, ಸ್ಪೂರ್ತಿ ಚಿತ್ರದ ನಾಯಕಿಯರು.

  ಕೆ. ಮಂಜುನಾಥ್ ಅವರು ಅದ್ಧೂರಿಯಾಗಿ ನಿರ್ಮಿಸುತ್ತಿರುವ ಈ ಚಿತ್ರ ಸಕಲೇಶಪುರ, ಚಿಕ್ಕಮಗಳೂರು, ಗೋವಾ ಸೇರಿದಂತೆ ಕರ್ನಾಟಕದ ರಮ್ಯ ಮನೋಹರ ಸ್ಥಳಗಳಲ್ಲಿ ಚಿತ್ರೀಕರಣಗೊಂಡಿದೆ. ಈ ಚಿತ್ರದಲ್ಲಿ ಶರತ್ ಲೋಹಿತಾಶ್ವ, ಚಿತ್ರಾ ಶೆಣೈ, ಎಂ.ಎನ್. ಲಕ್ಷ್ಮಿದೇವಿ, ಸಂಕೇತ್ ಕಾಶಿ, ಸಂಗೀತ, ಮುನಿ, ಮಾಲತಿ ಸರದೇಶಪಾಂಡೆ, ಶೈಲಜಾ ಜೋಷಿ, ಸಪ್ನ, ಸುಚಿತ್ರ, ರವಿ ಮಡಿಕೆಹಳ್ಳಿ, ಸುಕುಮಾರ್ ಮುಂತಾದವರ ತಾರಾಗಣ ಹಾಗೂ ಹಂಸಗೋಪಿ ಸಂಗೀತ ನಿರ್ದೇಶನ ನೀಡಿದ್ದಾರೆ. (ಒನ್ ಇಂಡಿಯಾ ಕನ್ನಡ)

  English summary
  Kannada actress Yagna Shetty is doing item song for Kannada movie Pandya. Recently the song has shot in and around Sri Gavi Gangadhareshwara temple in Gavipuram, Bangalore.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X