For Quick Alerts
  ALLOW NOTIFICATIONS  
  For Daily Alerts

  ಹೊಸ ಪ್ರಯತ್ನ: ದೇಶದ ಮೊದಲ 'ಸೂಪರ್ ವುಮನ್' ಆಗಲಿದ್ದಾರೆ ಅದಿತಿ ಪ್ರಭುದೇವ್

  |

  ಭಾರತದಲ್ಲಿ ಸೂಪರ್ ಮ್ಯಾನ್ ಸಿನಿಮಾಗಳು ಅತಿ ವಿರಳ, ಪ್ರಾದೇಶಿಕ ಭಾಷಾ ಸಿನಿಮಾಗಳಲ್ಲಿಯಂತೂ ಸೂಪರ್ ಹೀರೋ ಕತೆಗಳು ಬೆರಳಿಕೆಯಷ್ಟೂ ಇಲ್ಲವೇನೋ.

  ಹೃತಿಕ್ ರೋಷನ್ ನಿರ್ವಹಿಸುವ 'ಕ್ರಿಶ್' ದಶಕದ ಹಿಂದಿನ ಧಾರಾವಾಹಿ ಶಕ್ತಿಮಾನ್ ಇಬ್ಬರೇ ಭಾರತದ ಖ್ಯಾತ ಸೂಪರ್ ಹೀರೋಗಳು. ಅತಿಮಾನುಷ ಹೀರೋಗಳೇ ಇಷ್ಟು ಕಡಿಮೆ ಇರುವಾಗ ಸೂಪರ್ ವುಮನ್‌ಗಳನ್ನಂತೂ ಕೇಳುವಂತೆಯೇ ಇಲ್ಲ.

  ವಿಭಿನ್ನ ಪಾತ್ರದ ಮೂಲಕ ತೆಲುಗು ಕಿರುತೆರೆಗೆ ಕಾಲಿಟ್ಟ 'ಗಟ್ಟಿಮೇಳ' ಖ್ಯಾತಿಯ ನಟಿ ಅಶ್ವಿನಿ

  ನಾಗಿಣಿಯನ್ನು 'ಮಹಿಳಾ ಸೂಪರ್ ಹೀರೋ' ಎಂದು ಪರಿಗಣಿಸಬಹುದು ಎಂದಾದರೆ ಭಾರತೀಯ ಸಿನಿಮಾದಲ್ಲಿ ಸಾಕಷ್ಟು ಸೂಪರ್ ವುಮನ್ ಪಾತ್ರಗಳಿವೆ ಎನ್ನಬಹುದು ಆದರೆ ಹಾಗೆ ಪರಿಗಣಿಸುವಂತಿಲ್ಲ. ಆದರೆ ಇದಕ್ಕೆಲ್ಲಾ ಹೊರತಾಗಿ ನಟಿ ಅದಿತಿ ಪ್ರಭುದೇವ್ ಭಾರತದ ಮೊದಲ ಮಹಿಳಾ ಸೂಪರ್ ಹೀರೋ ಆಗಲು ಹೊರಟಿದ್ದಾರೆ.

  ಸೂಪರ್ ವುಮನ್ ಆಗಲಿದ್ದಾರೆ ಅದಿತಿ

  ಸೂಪರ್ ವುಮನ್ ಆಗಲಿದ್ದಾರೆ ಅದಿತಿ

  ಹೌದು, ಕನ್ನಡದ ನಟಿ ಅದಿತಿ ಪ್ರಭುದೇವ್ ಅವರ ಮುಂದಿನ ಸಿನಿಮಾದಲ್ಲಿ ಮಹಿಳಾ ಸೂಪರ್ ಹೀರೋ ಪಾತ್ರದಲ್ಲಿ ಅದಿತಿ ಮಿಂಚಲಿದ್ದಾರೆ. ಆ ಕುರಿತ ಚುಟುಕು ಮಾಹಿತಿಯನ್ನು ಅದಿತಿ ತಮ್ಮ ಇನ್‌ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ.

  ಕೊನೆಗೂ 'ಮದಗಜ' ಚಿತ್ರಕ್ಕೆ ವಿಲನ್ ಆದ್ರು ಸೌತ್ ಸ್ಟಾರ್ ನಟ

  ವಿಭಿನ್ನವಾದ ಪ್ರಯತ್ನ ಮಾಡುತ್ತಿದ್ದೇವೆ ಎಂದ ಅದಿತಿ

  ವಿಭಿನ್ನವಾದ ಪ್ರಯತ್ನ ಮಾಡುತ್ತಿದ್ದೇವೆ ಎಂದ ಅದಿತಿ

  'ನನ್ನ ಮುಂದಿನ ಚಿತ್ರ ಭಾರತದ ಮೊದಲ ಫೀಮೇಲ್ ಸೂಪರ್ ಹೀರೋ ಆಗಿದ್ದು ಅಕ್ಟೋಬರ್ 24ಕ್ಕೆ ಫಸ್ಟ್ ಲುಕ್ ಹಾಗೂ ಉಳಿದ ಮಾಹಿತಿಯನ್ನು ಬಿಡುಗಡೆ ಮಾಡಲಿದ್ದೇವೆ . ಹೊಸ ರೀತಿಯ, ವಿಭಿನ್ನ ಪ್ರಯತ್ನ ನಮ್ಮೀ ಸಿನಿಮಾ. ನಿಮ್ಮೆಲ್ಲರ ಪ್ರೀತಿ ಸಹಕಾರ ಎಂದಿನಂತೆ ಇಡೀ ತಂಡದ ಮೇಲಿರಲಿ' ಎಂದು ಬರೆದುಕೊಂಡಿದ್ದಾರೆ ಅದಿತಿ.

  ಹೆಚ್ಚಿನ ಮಾಹಿತಿ ಅಕ್ಟೋಬರ್ 24 ಕ್ಕೆ

  ಹೆಚ್ಚಿನ ಮಾಹಿತಿ ಅಕ್ಟೋಬರ್ 24 ಕ್ಕೆ

  ನಿರ್ದೇಶನ ಹಾಗೂ ಸಂಕಲನ ಜವಾಬ್ದಾರಿಯನ್ನು ಮನೋಜ್.ಪಿ.ನಡುಲಮನೆ, ವಿಜೇತ್ ಚಂದ್ರ, ಡಿಕೆಎಸ್ ಹೊತ್ತುಕೊಂಡಿದ್ದಾರೆ. ಸಿನಿಮಾ ಕುರಿತು ಹೆಚ್ಚಿನ ಮಾಹಿತಿ ಹಾಗೂ ಫಸ್ಟ್ ಲುಕ್ ಅಕ್ಟೋಬರ್ 24 ರಂದು ಬಿಡುಗಡೆ ಆಗಲಿದೆಯಂತೆ.

  ಅತ್ತಿಗೆಯನ್ನು ಧ್ರುವ ಎಷ್ಟು ಪ್ರೀತಿಸುತ್ತಾರೆ ಅನ್ನೋದಕ್ಕೆ ಇದೇ ಸಾಕ್ಷಿ | Filmibeat Kannada
  ಹಲವು ಸಿನಿಮಾಗಳಲ್ಲಿ ತೊಡಗಿಕೊಂಡಿರುವ ಅದಿತಿ

  ಹಲವು ಸಿನಿಮಾಗಳಲ್ಲಿ ತೊಡಗಿಕೊಂಡಿರುವ ಅದಿತಿ

  ಅದಿತಿ ಪ್ರಭುದೇವ್ ಅವರ ತೋತಾಪುರಿ, ದಿಲ್‌ಮಾರ್, ಒಂಬತ್ತನೇ ದಿಕ್ಕು, ಚಾಂಪಿಯನ್, ಓಲ್ಡ್ ಮಾಂಕ್, ಗಜಾನನ ಆಂಡ್ ಗ್ಯಾಂಗ್ ಸಿನಿಮಾಗಳು ಬಿಡುಗಡೆ ಆಗಬೇಕಿವೆ. ಇವುಗಳಲ್ಲಿ ಕೆಲವು ಇನ್ನೂ ಚಿತ್ರೀಕರಣದ ಹಂತದಲ್ಲಿವೆ.

  English summary
  Actress Aditi Prabhudev to play India's first Woman super hero in her next Kannada movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X