»   » ಡಬ್ಬಿಂಗ್ ಬಂದ್ರೆ ಏನಾಗ್ಬಹುದು? ಸಣ್ಣ ಲೆಕ್ಕಾಚಾರ..

ಡಬ್ಬಿಂಗ್ ಬಂದ್ರೆ ಏನಾಗ್ಬಹುದು? ಸಣ್ಣ ಲೆಕ್ಕಾಚಾರ..

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ಅಂಗಳದಲ್ಲಿ 'ಡಬ್ಬಿಂಗ್' ವಿವಾದ ಕಾವೇರಿದೆ. ''ಡಬ್ಬಿಂಗ್ ಬೇಕೇ ಬೇಕು'' ಅಂತ ಕೆಲವರು ಪಟ್ಟು ಹಿಡಿದು ಕೂತಿದ್ದರೆ, ಇನ್ನು ಕೆಲವರು ''ಅದ್ಹೇಗ್ ಡಬ್ಬಿಂಗ್ ಬರುತ್ತೋ ನಾವೂ ನೋಡ್ತೀವಿ'' ಅಂತ ತೊಡೆ ತಟ್ಟಿ ನಿಂತಿದ್ದಾರೆ.

ಡಬ್ಬಿಂಗ್ ವಿರುದ್ಧ ಸಮರ ಸಾರಿರುವವರ ಗುಂಪಲ್ಲಿ ಯೋಗರಾಜ್ ಭಟ್ರ ಶಿಷ್ಯ 'ಪ್ರೀತಿ ಗೀತಿ ಇತ್ಯಾದಿ' ಚಿತ್ರದ ನಿರ್ದೇಶಕ ವೀರೇಂದ್ರ ಕೂಡ ಒಬ್ಬರು. ಕನ್ನಡ ಚಿತ್ರರಂಗದಲ್ಲಿ ಡಬ್ಬಿಂಗ್ ನುಸುಳಿದರೆ ಏನಾಗಬಹುದು ಅನ್ನುವುದರ ಕುರಿತು ನಿರ್ದೇಶಕ ವೀರೇಂದ್ರ ಸಣ್ಣ ಲೆಕ್ಕಾಚಾರ ಹಾಕಿದ್ದಾರೆ. ಅದನ್ನ ಅವರ ಸಾಲುಗಳಲ್ಲೇ ಓದಿ......

Adverse Effects of Dubbing in Kannada Film Industry According to Director Veerendra

''ಡಬ್ಬಿಂಗ್ ಬಂದ್ರೆ ಅದು ಎಷ್ಟು ಉದ್ದಾರ ಆಗತ್ತೆ-ಆಗಲ್ಲ ಅನ್ನೋದು ಗೊತ್ತಿಲ್ಲ. ಒಂದು ಸಣ್ಣ ಲೆಕ್ಕಾಚಾರ ಹಾಕಿದ್ರೆ, ಡಬ್ಬಿಂಗ್ ಸಿನಿಮಾಗಳು ಥಿಯೇಟರ್ ಗಳಲ್ಲಿ ವರ್ಕೌಟ್ ಆಗೋದು ಕಮ್ಮೀನೆ...!'' [ಡಬ್ಬಿಂಗ್, ಕನ್ನಡಕ್ಕೆ ಪೂರಕವೇ ಮಾರಕವೇ ಜನರೇ ನಿರ್ಧರಿಸಲಿ]

''ಉದಾಹರಣೆಗೆ 'ಬಾಹುಬಲಿ' ತೆಲುಗು ಸಿನಿಮಾದ ಕರ್ನಾಟಕದ ವಿತರಣೆ ಹಕ್ಕನ್ನು ಆ ಚಿತ್ರದ ನಿರ್ಮಾಪಕರು ಕರ್ನಾಟಕದ ವಿತರಕರಿಗೆ ಮಾರಾಟ ಮಾಡಿದ ಮೊತ್ತ ಸುಮಾರು 18 ಕೋಟಿ ರೂಪಾಯಿಗಳು! 'ಬಾಹುಬಲಿ' ಚಿತ್ರ ಥಿಯೇಟರ್ ಗಳಲ್ಲಿ ಗಳಿಸಿದ ಮೊತ್ತ (ಮಾಧ್ಯಮಗಳ ವರದಿಯ ಪ್ರಕಾರ) 50 ಕೋಟಿ ರೂಪಾಯಿಗಳು!''

''ಅದೇ 'ಬಾಹುಬಲಿ'ಯನ್ನ ಕನ್ನಡ ಡಬ್ಬಿಂಗ್ ಅವತರಣಿಕೆಯನ್ನ ಮಾರಾಟ ಮಾಡಿದ್ರೆ ಎಷ್ಟಕ್ಕೆ ಮಾರಾಟ ಮಾಡಬಹುದು ಅಥವ ತೆಗೆದುಕೊಳ್ಳುವ ವಿತರಕ ಎಷ್ಟಕ್ಕೆ ತೆಗೆದುಕೊಳ್ಳಬಹುದು? ಹದಿನೆಂಟು ಕೋಟಿಗಂತು ಕೊಂಡುಕೊಳ್ಳುವುದಿಲ್ಲ, ಬೆಲೆ ಕಡಿಮೆಯಾಗ್ತದೆ!'' [ಡಬ್ಬಿಂಗ್ ಬೇಕೋ ಬೇಡವೋ : ಚರ್ಚೆ ಮುಂದುವರಿಯಲಿ]

Adverse Effects of Dubbing in Kannada Film Industry According to Director Veerendra

''ಯಾಕಂದ್ರೆ ಕನ್ನಡ ಅವತರಣಿಕೆಯನ್ನ ಇಲ್ಲಿರೋ ತೆಲುಗರು ನೋಡುವುದಿಲ್ಲ ಮತ್ತು Lip Sync ಇಲ್ಲದ ಸಿನಿಮಾ ನೋಡಲು ಇಷ್ಟಪಡದವರು ಅಥವ ಡಬ್ಬಿಂಗ್ ಸಿನಿಮಾ ನೋಡಲು ಇಷ್ಟಪಡದ ಕನ್ನಡಿಗರೂ, ಒಟ್ಟು ಸುಮಾರು 50-60% ಪ್ರೇಕ್ಷಕರು ಮೂಲ ಚಿತ್ರವನ್ನೇ ನೋಡಲು ಬಯಸುತ್ತಾರೆ..! ನಾನೂ ಸಹ ಮೂಲ ಚಿತ್ರವನ್ನೇ ನೋಡಲು ಬಯಸುತ್ತೇನೆ.''

''ನನಗೆ ತಿಳಿದಂತೆ 'ಡಬ್ಬಿಂಗ್ ರೈಟ್ಸ್ ತೆಗೆದುಕೊಳ್ಳುವವರಿಗೆ ಮೂಲ ಚಿತ್ರವನ್ನು ತಡೆಯುವ ಹಕ್ಕಿರುವುದಿಲ್ಲ', ಹಾಗಾಗಿ ಕನ್ನಡ ಅವತರಣಿಕೆಗೆ ಪ್ರೇಕ್ಷಕರ ಸಂಖ್ಯೆ ಕಡಿಮೆಯಂತೂ ಆಗತ್ತೆ ಮತ್ತು ಅದರ ಹಕ್ಕು ಮಾರಾಟದ ಬೆಲೆಯೂ.!'' [ಡಬ್ಬಿಂಗ್ ವಿರೋಧಿಗಳಿಗೆ ಸಾಮಾನ್ಯ ಪ್ರೇಕ್ಷಕನ ಪ್ರಶ್ನೆ]

''ಯಾವುದೇ ಭಾಷೆಯ ಮೂಲ ಚಿತ್ರ ಅಷ್ಟು ದೊಡ್ಡ ಬ್ಯುಸಿನೆಸ್ ಮಾಡುವಾಗ ಅದಕ್ಕಿಂತ ಕಡಿಮೆ ಬೆಲೆಗೆ ಡಬ್ಬಿಂಗ್ ರೈಟ್ಸ್ ಮಾರಾಟ ಮಾಡಲು ಆ ನಿರ್ಮಾಪಕರು ಮನಸ್ಸು ಮಾಡ್ತಾರಾ??''

Adverse Effects of Dubbing in Kannada Film Industry According to Director Veerendra

''ಡಬ್ಬಿಂಗ್ ಸಿನಿಮಾಗಳಿಗೂ ಇತರೆ ಭಾಷೆಯ ಸಿನಿಮಾಗಳಿಗಿರುವಂತೆ 100% tax free ಅನ್ವಯವಾಗುವುದಿಲ್ಲವಾದ್ದರಿಂದ ಮೂಲ ಚಿತ್ರಕ್ಕೂ, ಕನ್ನಡ ಅವತರಣಿಕೆಗೂ ಟಿಕೆಟ್ ಬೆಲೆ ಒಂದೇ ಇರುವ ಸಾಧ್ಯತೆ ಇರುವುದರಿಂದ ಪ್ರೇಕ್ಷಕ ಯಾವುದನ್ನು ಆಯ್ದುಕೊಳ್ಳಬಹುದು?''

''ಆ ಭಾಷಿಕರಂತೂ ಮೂಲ ಚಿತ್ರವನ್ನೇ ಆರಿಸಿಕೊಳ್ತಾರೆ. ಕನ್ನಡಿಗರಲ್ಲಿ ಒಂದು ಗಣನೀಯ ಭಾಗದಷ್ಟು ಪ್ರೇಕ್ಷಕರೂ ಸಹ ಮೂಲ ಚಿತ್ರವನ್ನೇ ಆಯ್ದುಕೊಳ್ಳುವ ಸಾಧ್ಯತೆ ಇರುತ್ತದೆ.'' [ಡಬ್ಬಿಂಗ್ ವಿರುದ್ಧ ಕಪ್ಪು ಬಟ್ಟೆ ಧರಿಸಿ ಮೌನ ಪ್ರತಿಭಟನೆ]

''ಬರುವ ಎಲ್ಲಾ ಡಬ್ಬಿಂಗ್ ಸಿನಿಮಾಗಳೂ ಉತ್ತಮವಾಗಿರುವುದಿಲ್ಲ. ಎಲ್ಲಾ 'ಬಾಹುಬಲಿ', 'ಭಜರಂಗಿ ಭಾಯಿಜಾನ್', 'ಚಕ್ ದೇ ಇಂಡಿಯಾ', 'ಥ್ರೀ ಈಡಿಯಟ್ಸ್' ಆಗಿರುವುದಿಲ್ಲ. 'ಕೌಸಲ್ಯ ಆಂಟಿ', 'ದೇವ ಕನ್ಯಲು', 'ಮಾಲಿನಿ ಅಂಡ್ ಕಂಪನಿ', 'ರಾತ್ ಕಿ ಬಾತ್', 'ಫ್ರೀ ಎಂಟ್ರಿ' ಥರದ ಸಿನಿಮಾಗಳು ಬರುತ್ತವೆ.''

''ಡಬ್ಬಿಂಗ್ ನಿಂದ ಥಿಯೇಟರ್ ಮಾರುಕಟ್ಟೆ ಮೇಲೆ ಅಂತಹ ದೊಡ್ಡ ಪರಿಣಾಮವಾಗಲಾರದೇನೋ....ಆದ್ರೆ ಟಿ.ವಿ. ಮಾರುಕಟ್ಟೆಯ ಮೇಲೆ ಖಂಡಿತಾ ಪರಿಣಾಮ ಬೀರುತ್ತದೆ..! ಸಿನಿಮಾಗಳ ಟಿ.ವಿ. ರೈಟ್ಸ್ ಮಾರುಕಟ್ಟೆಯ ಮೇಲೂ ಸಹ!! ಪ್ರೈಂ ಟೈಮ್ ಸೀರಿಯಸ್ಸಾಗತ್ತೆ, ಮಿಡ್ ನೈಟ್ ಮಸಾಲ spicy ಆಗತ್ತೆ! Reality ಗೊತ್ತಾಗೋದು ಡಬ್ಬಿಂಗ್ ಬಂದ ಮೇಲಷ್ಟೇ...!'' - ವೀರೇಂದ್ರ

English summary
According to Kannada Director Veerendra of 'Preethi Geethi Ityadhi' fame, ''Dubbing has adverse effects on Kannada Film Industry''. Here is what Director Veerendra shared his opinion with 'Filmibeat Kannada'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada