For Quick Alerts
  ALLOW NOTIFICATIONS  
  For Daily Alerts

  'ಬಿಗ್ ಬಾಸ್-7' ನಂತರ ಮಾಯವಾಗಿದ್ದ ಕುರಿ ಪ್ರತಾಪ್ ಪ್ರತ್ಯಕ್ಷ

  |

  'ಬಿಗ್ ಬಾಸ್ ಸೀಸನ್-7' ಮುಗಿದು ಈಗಾಗಲೆ ಐದು ದಿನಗಳು ಕಳೆದಿವೆ. ಶೈನ್ ಶೆಟ್ಟಿ ಈ ಬಾರಿಯ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಬಿಗ್ ಬಾಸ್ ನಂತರ ಸ್ಪರ್ಧಿಗಳು ಬಿಗ್ ಮನೆಯ ಅನುಭವವನ್ನು, ಸಂತೋಷವನ್ನು ಎಲ್ಲರೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಬಿಗ್ ಮನೆಯ ಸ್ಪರ್ಧಿಗಳದ್ದೆ ಹವಾ. ಎಲ್ಲಾ ಕಡೆ ಸಂದರ್ಶನದಲ್ಲಿ ಭಾಗಿಯಾಗುತ್ತಿದ್ದಾರೆ.

  ಬಿಗ್ ಬಾಸ್-7ನ ರನ್ನರ್ ಅಪ್ ಕುರಿ ಪ್ರತಾಪ್ ಮಾತ್ರ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಫಿನಾಲೆ ಮುಗಿಯುತ್ತಿದ್ದಂತೆ ಕುರಿ ಪ್ರತಾಪ್ ದಿಢೀರನೆ ಮಾಯವಾಗಿದ್ದಾರೆ. ಬಿಗ್ ಮನೆಯಲ್ಲಿದ್ದು ತನ್ನದೆ ಆದ ರೀತಿಯಲ್ಲಿ ಪ್ರೇಕ್ಷಕರನ್ನು ರಂಜಿಸಿದ್ದ ಕುರಿ ಪ್ರತಾಪ್ ಈ ಬಾರಿಯ ವಿನ್ನರ್ ಆಗುತ್ತಾರೆ ಅಂತ ಅನೇಕರು ಅಂದುಕೊಂಡಿದ್ದರು. ಪ್ರತಾಪ್ ಕೂಡ ನಿರೀಕ್ಷೆಯಲ್ಲಿದ್ದರು.

  ಕುರಿ ಪ್ರತಾಪ್ ಬೆನ್ನಿಗೆ ನಿಂತಿದ್ದಾರೆ ದರ್ಶನ್ ಅಭಿಮಾನಿಗಳು.!ಕುರಿ ಪ್ರತಾಪ್ ಬೆನ್ನಿಗೆ ನಿಂತಿದ್ದಾರೆ ದರ್ಶನ್ ಅಭಿಮಾನಿಗಳು.!

  ಆದರೆ ಕೊನೆಯಲ್ಲಿ ಶೈನ್ ವಿನ್ನರ್ ಆಗಿ ಬಿಗ್ ಬಾಸ್-7 ಟ್ರೂಫಿ ಎತ್ತಿ ಹಿಡಿದಿದ್ದಾರೆ. ಕೊನೆಯವರೆಗು ಬಂದು ಅಂತಿನ ಕ್ಷಣದಲ್ಲಿ ಸೋತ ಕುರಿ ಫಿನಾಲೆ ನಂತರ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಬಿಗ್ ಬಾಸ್ ಗೆಲ್ಲದೆ ಇರಬಹುದು. ಆದರೆ ಕುರಿ ಕೋಟ್ಯಾಂತರ ಜನರ ಮನಗೆದ್ದಿದ್ದಾರೆ. ಹಾಗಾದರೆ ಕುರಿ ಪ್ರತಾಪ್ ಈಗ ಎಲ್ಲಿದ್ದಾರೆ. ದಿಢೀರ್ ಮಾಯವಾಗಿದ್ದೇಕೆ? ಮುಂದೆ ಓದಿ..

  ಬೇಸರದಲ್ಲಿದ್ದಾರಾ ಕುರಿ?

  ಬೇಸರದಲ್ಲಿದ್ದಾರಾ ಕುರಿ?

  ಬಿಗ್ ಬಾಸ್-7 ಫಿನಾಲೆ ಮುಗಿದ ಬಳಿಕ ಕುರಿ ಪ್ರತಾಪ್ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಯಾವುದೆ ಸಾಮಾಜಿಕ ಜಾಲತಾಣದಲ್ಲಿಯೂ ಪ್ರತಿಕ್ರಿಯೆ ನೀಡಿಲ್ಲ. ಸೋತ ಬೇಸರದಲ್ಲಿ ಕುರಿ ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ ಎಂದು ಹೇಳಲಾಗುತ್ತಿದೆ. ಕೊನೆಯ ಕ್ಷಣದವರೆಗೂ ಬಂದು ಸೋಲುವುದು ಯಾರಿಗಾದರು ಬೇಸರವಾಗುವುದು ಸಹಜ. ಕುರಿ ಮನಸ್ಸಿಗೂ ಹಾಗೆ ಆಗಿರಬಹುದು. ಆದರೆ ಅದೆ ಕಾರಣಕ್ಕೆ ಕುರಿ ಎಲ್ಲಿಯೂ ಕಾಣಿಸಿಕೊಳ್ಳ ಎಂದು ಹೇಳಲು ಆಗುವುದಿಲ್ಲ.

  'ಬಿಗ್ ಬಾಸ್' ಗೆದ್ದವರಿಗೆ ಮಾತ್ರ ಅಲ್ಲ, ಸೋತವರಿಗೂ ಸಿಕ್ಕಿದೆ ಲಕ್ಷ ಲಕ್ಷ ಬಹುಮಾನ.!'ಬಿಗ್ ಬಾಸ್' ಗೆದ್ದವರಿಗೆ ಮಾತ್ರ ಅಲ್ಲ, ಸೋತವರಿಗೂ ಸಿಕ್ಕಿದೆ ಲಕ್ಷ ಲಕ್ಷ ಬಹುಮಾನ.!

  ಪ್ರತಾಪ್ ಈಗ ಎಲ್ಲಿದ್ದಾರೆ

  ಪ್ರತಾಪ್ ಈಗ ಎಲ್ಲಿದ್ದಾರೆ

  ಪ್ರತಾಪ್ ಈಗ ಮೈಸೂರಿನಲ್ಲಿ ಇದ್ದಾರೆ ಎಂದು ಹೇಳಲಾಗುತ್ತಿದೆ. ಫಿನಾಲೆ ಮುಗಿಯುತ್ತಿದ್ದಂತೆ ಕುರಿ ಪ್ರತಾಪ ಮೈಸೂರು ಕಡೆ ಪಯಣ ಬೆಳೆಸೆದಿದ್ದಾರೆ. ಅಷ್ಟಕ್ಕು ಕುರಿ ಪ್ರತಾಪ್ ದಿಢೀರ್ ಮಾಯವಾಗಲು ಕಾರಣ ಅವರ ಕೈಯಲ್ಲಿರುವ ಸಿನಿಮಾಗಳು. ಪ್ರತಾಪ್ ಬಳಿ ಸಾಕಷ್ಟು ಸಿನಿಮಾಗಳಿವೆ. ಹಾಗಾಗಿ ಮೊದಲು ಆ ಕೆಲಸವನ್ನು ಅವರು ಮಾಡಿ ಮುಗಿಸ ಬೇಕಿದೆ. ಈಗಾಗಲೆ ಕಮಿಟ್ ಮೆಂಟ್ ಮಾಡಿಕೊಂಡ ಸಿನಿಮಾತಂಡಗಳನ್ನು ಭೇಟಿಯಾಗಿ ಚಿತ್ರೀಕರಣದಲ್ಲಿ ಭಾಗಿಯಾಗುವ ಸಲುವಾಗಿ ಪ್ರತಾಪ್ ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ ಎಂದು ಹೇಳಲಾಗುತ್ತಿದೆ.

  ವಿಡಿಯೋ ಮೂಲಕ ಪ್ರತಾಪ್ ಪ್ರತ್ಯಕ್ಷ

  ವಿಡಿಯೋ ಮೂಲಕ ಪ್ರತಾಪ್ ಪ್ರತ್ಯಕ್ಷ

  ಕುರಿ ಪ್ರತಾಪ್ ಈಗ ಎಲ್ಲಿದ್ದಾರೆ, ಯಾಕೆ ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ ಎಂದು ಚರ್ಚೆಯಾಗುತ್ತಿದ್ದಂತೆ ಕುರಿ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದ್ದಾರೆ. ವಿಡಿಯೋ ಮಾಡಿ ಶೇರ್ ಮಾಡಿರುವ ಕುರಿ ಸಿನಿಮಾ ಒಂದಕ್ಕೆ ವಿಶ್ ಮಾಡಿದ್ದಾರೆ.

  ಕಳೆದೆಲ್ಲ ಸೀಸನ್ ವಿನ್ನರ್ ಗಿಂತ ಹೆಚ್ಚು ಬಹುಮಾನ ಪಡೆದ 'ಬಿಗ್ ಬಾಸ್-7' ವಿನ್ನರ್ ಶೈನ್ ಶೆಟ್ಟಿಕಳೆದೆಲ್ಲ ಸೀಸನ್ ವಿನ್ನರ್ ಗಿಂತ ಹೆಚ್ಚು ಬಹುಮಾನ ಪಡೆದ 'ಬಿಗ್ ಬಾಸ್-7' ವಿನ್ನರ್ ಶೈನ್ ಶೆಟ್ಟಿ

  ಕುರಿ ಪ್ರತಾಪ್ ಅಭಿನಯದ ಸಿನಿಮಾ ರಿಲೀಸ್

  ಕುರಿ ಪ್ರತಾಪ್ ಅಭಿನಯದ ಸಿನಿಮಾ ರಿಲೀಸ್

  ಇಂದು ಚಿಕ್ಕಣ್ಣ ಮತ್ತು ಶಿಶಿರ್ ಅಭಿನಯದ ಕಾಮಿಡಿ ಸಿನಿಮಾ ಬಿಲ್ ಗೇಟ್ಸ್ ರಿಲೀಸ್ ಆಗುತ್ತಿದೆ. ಈ ಸಿನಿಮಾದಲ್ಲಿ ಕುರಿ ಪ್ರತಾಪ್ ಕೂಡ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಸಿನಿಮಾ ನೋಡಿ ಎಂಜಾಯ್ ಮಾಡಿ ಎಂದು ಕುರಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

  ವೋಟ್ ಮಾಡಿದ ಜನತೆಗೆ ಧನ್ಯವಾದ

  ವೋಟ್ ಮಾಡಿದ ಜನತೆಗೆ ಧನ್ಯವಾದ

  ಕುರಿ ಪ್ರತಾಪ್ ಎಲ್ಲಿಯೂ ಕಾಣಿಸಿಕೊಳ್ಳದಿದ್ದರು, ವೋಟ್ ಮಾಡಿ ಕೊನೆಯವರೆಗೂ ಬಿಗ್ ಮನೆಯಲ್ಲಿ ಉಳಿಸಿಕೊಂಡ ಜನರಿಗೆ ಧನ್ಯವಾದ ತಿಳಿಸಿದ್ದಾರೆ. ಈ ಬಗ್ಗೆ ಬರೆದುಕೊಂಡಿರುವ ಪ್ರತಾಪ್ "ನನಗೆ ವೋಟ್ ಮಾಡಿ ಆಶೀರ್ವಾದ ಮಾಡಿದ ನನ್ನ ಪ್ರೀತಿಯ ಕರ್ನಾಟಕದ ಜನತೆಗೆ ನಿಮ್ಮ ಪ್ರೀತಿಯ ಕುರಿ ಪ್ರತಾಪನ ತುಂಬು ಹೃದಯದ ಧನ್ಯವಾದಗಳು" ಎಂದು ಹೇಳಿದ್ದಾರೆ.

  English summary
  After Bigg Boss Kuri Prathap has disappeared. Now he is appear in social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X