»   » ಯಶ್ ಹೊಸ ಕಾರನ್ನ ಮೊದಲು ಓಡಿಸೋದು ಇವರೇ

ಯಶ್ ಹೊಸ ಕಾರನ್ನ ಮೊದಲು ಓಡಿಸೋದು ಇವರೇ

Posted By:
Subscribe to Filmibeat Kannada

ರಾಕಿಂಗ್ ಸ್ಟಾರ್ ಯಶ್ ಇತ್ತೀಚಿಗಷ್ಟೇ ಹೊಸ ಕಾರುಗಳನ್ನ ಖರೀದಿ ಮಾಡಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಒಂದು ಕಾರು ತೆಗೆದುಕೊಳ್ಳುವುದು ಮಾಮೂಲಿ. ಆದರೆ ಯಶ್ ಒಟ್ಟಿಗೆ ಮೂರು ಕಾರುಗಳನ್ನ ಖರೀದಿ ಮಾಡಿ ಎಲ್ಲರೂ ಆಶ್ಚರ್ಯ ಪಡುವಂತೆ ಮಾಡಿದ್ದರು. ಯಶ್ ಪ್ರತಿ ಬಾರಿ ಹೊಸ ಕಾರನ್ನ ತೆಗೆದುಕೊಂಡಾಗ ಆ ಕಾರನ್ನ ಮೊದಲು ಸ್ಪೆಷಲ್ ವ್ಯಕ್ತಿ ಡ್ರೈವ್ ಮಾಡುತ್ತಾರೆ. ಈ ಬಗ್ಗೆ ಯಶ್ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಹೌದು ಯಶ್ ಕಾರ್ ತೆಗೆದುಕೊಂಡ ತಕ್ಷಣ ಮೊದಲಿಗೆ ತೋರಿಸೋದು ರೆಬಲ್ ಸ್ಟಾರ್ ಅಂಬರೀಶ್ ಅವರಿಗಂತೆ. ಅವರು ಡ್ರೈವ್ ಮಾಡಿ ಚೆನ್ನಾಗಿ ಅಂತ ಖುಷಿ ಪಟ್ಟ ನಂತರ ರಾಕಿಂಗ್ ಸ್ಟಾರ್ ಆ ಕಾರನ್ನ ಓಡಿಸುವುದಕ್ಕೆ ಪ್ರಾರಂಭ ಮಾಡುತ್ತಾರಂತೆ.

ಯಶ್ ಐದು ವರ್ಷದಿಂದ ಕಾರ್ ಖರೀದಿ ಮಾಡಿರಲಿಲ್ಲವಂತೆ ಇದಕ್ಕೂ ಕಾರಣ ಅಂಬರೀಶ್ ಅವರೇ ಅಂತೆ. ಕಳೆದ ಐದು ವರ್ಷದ ಹಿಂದೆ ಹೊಸ ಕಾರ್ ಕೊಂಡುಕೊಂಡು ಅಂಬರೀಶ್ ಅವರ ಬಳಿ ತೆಗೆದುಕೊಂಡು ಹೋಗಿದ್ದರಂತೆ ಯಶ್. ಆಗ ಅಂಬಿ ಕಾರ್ ಖರೀದಿ ಮಾಡುವುದನ್ನ ನಿಲ್ಲಿಸು. ಮೊದಲು ಸ್ವಂತ ಮನೆ ಮಾಡಿಕೊ ಎಂದು ಬುದ್ದಿ ಹೇಳಿದ್ದಾರೆ.

After I purchase new cars, Ambareesh will take first ride Yash

ಇದೇ ಕಾರಣಕ್ಕೆ ಯಶ್ ಐದು ವರ್ಷದಿಂದ ಕಾರ್ ಖರೀದಿ ಮಾಡಿರಲಿಲ್ಲ. ತಮ್ಮ ತಾಯಿ ಹೊಸ ಕಾರ್ ತೆಗೆದುಕೊಳ್ಳಬೇಕು ಎಂದು ನಿರ್ಧಾರ ಮಾಡಿದಾಗ ಯಶ್ ಒಳ್ಳೆ ಕಾರನ್ನೇ ತೆಗೆದುಕೊಳ್ಳೋಣ ಎಂದು ಮೂರು ಕಾರಗಳನ್ನ ಮನೆಗೆ ತಂದಿದ್ದಾರೆ.

After I purchase new cars, Ambareesh will take first ride Yash

ಯಶ್ ಅಭಿನಯದ ಮೊದಲ ಸಿನಿಮಾದ ಟ್ರೇಲರ್ ಅನ್ನ ಬಿಡುಗಡೆ ಮಾಡಿ ಶುಭಾಷಯ ಕೋರಿದ್ದ ಅಂಬರೀಶ್ ಅವರನ್ನ ಇಂದಿಗೂ ಯಶ್ ಹಿತೈಶಿಯಂತೆ ಸ್ವೀಕರಿಸಿದ್ದಾರೆ. ಆದ್ದರಿಂದ ಯಾವುದೇ ಖುಷಿ ವಿಚಾರವಿದ್ದರೂ ಮೊದಲಿಗೆ ಅವರ ಬಳಿ ಹಂಚಿಕೊಳ್ಳುತ್ತಾರೆ.

English summary
After I purchase new cars, Ambareesh will take first ride said kannada actor Yash in an interview

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X