For Quick Alerts
  ALLOW NOTIFICATIONS  
  For Daily Alerts

  'ಪೈಲ್ವಾನ್' ಬಳಿಕ ಹೊಸ ಪ್ರಾಜೆಕ್ಟ್ ಕೈಗೆತ್ತಿಕೊಂಡ ನಿರ್ದೇಶಕ ಕೃಷ್ಣ, ಹೀರೋ ಯಾರು?

  |

  ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ಸೂಪರ್ ಹಿಟ್ ಆಗಿತ್ತು. ಕಲೆಕ್ಷನ್‌ನಲ್ಲೂ ದಾಖಲೆ ನಿರ್ಮಿಸಿತ್ತು. ಪೈರಸಿ ಕಾಟಕ್ಕೆ ಸಿಲುಕಿಕೊಂಡಿದ್ದರೂ ಚಿತ್ರಮಂದಿರದಲ್ಲಿ ಅಭೂತಪೂರ್ವ ಯಶಸ್ಸು ಸಾಧಿಸಿತ್ತು.

  ಈ ಚಿತ್ರದ ಬಳಿಕ ನಿರ್ದೇಶಕ ಕೃಷ್ಣ ಯಾವ ಚಿತ್ರ ಮಾಡಲಿದ್ದಾರೆ ಎಂಬ ಕುತೂಹಲ ಕಾಡುತ್ತಿದೆ. ಈವರೆಗೂ ಮುಂದಿನ ಪ್ರಾಜೆಕ್ಟ್ ಬಗ್ಗೆ ಯಾವ ಮಾಹಿತಿಯೂ ಬಿಟ್ಟುಕೊಟ್ಟಿರಲಿಲ್ಲ. ಇದೀಗ, ನಿರ್ದೇಶಕ ಕೃಷ್ಣ ಮತ್ತು ಸ್ವಪ್ನ ಕೃಷ್ಣ ಅವರು ಸ್ಕ್ರಿಪ್ಟ್ ಮುಗಿಸಿ ಹೊಸ ಚಿತ್ರಕ್ಕೆ ಶುಭಾರಂಭ ಮಾಡಿದ್ದಾರೆ. ಯಾವುದು ಆ ಚಿತ್ರ? ಯಾರು ಹೀರೋ? ಮುಂದೆ ಓದಿ...

  ಸ್ಕ್ರಿಪ್ಟ್ ಕೆಲಸ ಮುಗಿದಿದೆ

  ಸ್ಕ್ರಿಪ್ಟ್ ಕೆಲಸ ಮುಗಿದಿದೆ

  ಗಜಕೇಸರಿ, ಹೆಬ್ಬುಲಿ ಹಾಗೂ ಪೈಲ್ವಾನ್ ಚಿತ್ರಗಳ ಯಶಸ್ಸಿನ ನಿರ್ದೇಶಕ ಕೃಷ್ಣ ಹೊಸ ಪ್ರಾಜೆಕ್ಟ್ ಕೈಗೆತ್ತಿಕೊಂಡಿದ್ದು, ಇತ್ತೀಚಿಗಷ್ಟೆ ಸ್ಕ್ರಿಪ್ಟ್ ಪೂಜೆ ಮುಗಿಸಿದ್ದಾರೆ. ಈ ಬಗ್ಗೆ ನಿರ್ಮಾಪಕಿ ಸ್ವಪ್ನ ಕೃಷ್ಣ ಟ್ವಿಟ್ಟರ್‌ನಲ್ಲಿ ಸಂತಸ ಹಂಚಿಕೊಂಡಿದ್ದು, ಶೀಘ್ರದಲ್ಲಿ ಸಿನಿಮಾ ಆರಂಭಿಸಲಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

  'ಪೈಲ್ವಾನ್' ಕೃಷ್ಣ ಮುಂದಿನ ಸಿನಿಮಾಗೆ ನಿಖಿಲ್ ನಾಯಕ

  ಹೀರೋ ಯಾರು?

  ಹೀರೋ ಯಾರು?

  ಯಶ್ ಜೊತೆ ಒಂದು ಸಿನಿಮಾ ಹಾಗೂ ಸುದೀಪ್ ಜೊತೆ ಎರಡು ಸಿನಿಮಾ ಮಾಡಿರುವ ನಿರ್ದೇಶಕ ಕೃಷ್ಣ ಮುಂದಿನ ಚಿತ್ರವನ್ನು ಯಾರ ಜೊತೆ ಮಾಡಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ. ಮತ್ತೆ ಸುದೀಪ್ ಜೊತೆಯಲ್ಲೇ ಸಿನಿಮಾ ಮಾಡಬಹುದು ಎಂಬ ಪ್ರಶ್ನೆಯೂ ಇದೆ. ಆದ್ರೆ, ನಾಯಕನ ಬಗ್ಗೆ ಮಾಹಿತಿ ಬಿಟ್ಟುಕೊಡುತ್ತಿಲ್ಲ.

  ನಿಖಿಲ್ ಕುಮಾರ್ ಜೊತೆ ಚಿತ್ರ!

  ನಿಖಿಲ್ ಕುಮಾರ್ ಜೊತೆ ಚಿತ್ರ!

  ಈ ಹಿಂದೆ ಸುದ್ದಿಯಾದಂತೆ ನಿಖಿಲ್ ಕುಮಾರ್ ಜೊತೆ ಕೃಷ್ಣ ಮುಂದಿನ ಸಿನಿಮಾ ಮಾಡಲಿದ್ದಾರೆ ಎಂದು ಹೇಳಲಾಗಿತ್ತು. ಲೈಕಾ ಪ್ರೊಡಕ್ಷನ್ ಈ ಚಿತ್ರಕ್ಕೆ ಬಂಡವಾಳ ಹಾಕಲಿದ್ದು, ಪೈಲ್ವಾನ್ ಖ್ಯಾತಿಯ ಕೃಷ್ಣ ಆಕ್ಷನ್ ಕಟ್ ಹೇಳಬಹುದು ಎಂದು ಸುದ್ದಿಯಾಗಿತ್ತು. ಈ ಬಗ್ಗೆಯೂ ನಿಖರವಾದ ಮಾಹಿತಿ ಲಭ್ಯವಾಗಿಲ್ಲ.

  RCB ಮೇಲೆ ಯಾಕಿಷ್ಟು ಕೋಪ ಗುರು | Filmibeat Kannada
  ಪೈಲ್ವಾನ್ ಕಲೆಕ್ಷನ್ ಬಗ್ಗೆ ಹೆಚ್ಚಿದ ಕುತೂಹಲ

  ಪೈಲ್ವಾನ್ ಕಲೆಕ್ಷನ್ ಬಗ್ಗೆ ಹೆಚ್ಚಿದ ಕುತೂಹಲ

  ಕೃಷ್ಣ ನಿರ್ದೇಶನ ಮಾಡಿದ ಪೈಲ್ವಾನ್ ಚಿತ್ರದ ಕಲೆಕ್ಷನ್ ಎಷ್ಟು ಎಂದು ಈಗಲೂ ಅಭಿಮಾನಿಗಳು ಕೇಳುತ್ತಿದ್ದಾರೆ. ಬಾಕ್ಸ್ ಆಫೀಸ್‌ನಲ್ಲಿ ಈ ಸಿನಿಮಾ ನೂರು ಕೋಟಿ ಕ್ಲಬ್ ಸೇರಿದೆ ಎಂದು ಸದ್ದು ಮಾಡಿತ್ತು. ಆದ್ರೆ, ಅದು ಎಷ್ಟರ ಮಟ್ಟಿಗೆ ನಿಜ ಎಂದು ತಿಳಿದಿಲ್ಲ. ಹಾಗಾಗಿ, ಕೃಷ್ಣ ಹಾಗು ಸ್ವಪ್ನ ದಂಪತಿಗೂ ಈಗಲೂ ಈ ಪ್ರಶ್ನೆ ಎದುರಾಗುತ್ತಲೇ ಇದೆ.

  English summary
  Pailwaan fame director krishna has start his new project. krishna and wife swapna done script pooja today.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X