»   » 'ಬಾಹುಬಲಿ-2' ಚಿತ್ರಕ್ಕೆ ಕರ್ನಾಟಕದಲ್ಲಿ ಮತ್ತೆ ಎದುರಾಗಿದೆ 2 ಸಂಕಷ್ಟ!

'ಬಾಹುಬಲಿ-2' ಚಿತ್ರಕ್ಕೆ ಕರ್ನಾಟಕದಲ್ಲಿ ಮತ್ತೆ ಎದುರಾಗಿದೆ 2 ಸಂಕಷ್ಟ!

Posted By:
Subscribe to Filmibeat Kannada

'ಕಟ್ಟಪ್ಪ' ಅಲಿಯಾಸ್ ತಮಿಳು ನಟ ಸತ್ಯರಾಜ್ ಕನ್ನಡಿಗರ ಬಗ್ಗೆ ಮಾತನಾಡಿದ್ದ ಅವಹೇಳನಕಾರಿ ಭಾಷಣಕ್ಕೆ ಸಂಬಂಧಪಟ್ಟಂತೆ ನಿನ್ನೆ ಮಧ್ಯಾಹ್ನ (ಏಪ್ರಿಲ್ 21) ವಿಡಿಯೋ ಮೂಲಕ ವಿಷಾದ ವ್ಯಕ್ತಪಡಿಸಿದ್ದರು. ಅಲ್ಲಿಗೆ 'ಬಾಹುಬಲಿ-2' ಸಿನಿಮಾ ಕರ್ನಾಟಕದಲ್ಲಿ ಬಿಡುಗಡೆಯಾಗುವುದು ಪಕ್ಕಾ ಎನ್ನಲಾಗಿತ್ತು. ಆದ್ರೆ, ಈ ವಿವಾದ ಈಗ ಮತ್ತೊಂದು ತಿರುವು ಪಡೆದುಕೊಂಡಿದ್ದು, 'ಬಾಹುಬಲಿ' ಚಿತ್ರ ಕರ್ನಾಟಕದಲ್ಲಿ ಬಿಡುಗಡೆಯಾಗುವುದು ಇನ್ನು ಅನುಮಾನವಾಗಿದೆ.[ಕನ್ನಡಿಗರನ್ನ ಉದ್ದೇಶಿಸಿ ಸತ್ಯರಾಜ್ ಮಾಡಿದ ತಮಿಳು ಭಾಷಣದಲ್ಲಿ ಏನಿದೆ.?]

ಹೌದು, ಸತ್ಯರಾಜ್ ಕನ್ನಡಿಗರಿಗೆ ವಿಷಾದ ವ್ಯಕ್ತಪಡಿಸುತ್ತಿದ್ದಂತೆ ತಮಿಳುನಾಡಿನಲ್ಲಿ ಪ್ರದರ್ಶನವಾಗುತ್ತಿದ್ದ ಕನ್ನಡ ಚಿತ್ರಗಳನ್ನ ರದ್ದುಗೊಳಿಸಲಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಇದಕ್ಕೆ ಪ್ರತಿಯಾಗಿ ಕರ್ನಾಟಕದಲ್ಲೂ ತಮಿಳು ಚಿತ್ರಗಳನ್ನ ರದ್ದುಗೊಳಿಸಲು ಕನ್ನಡ ಹೋರಾಟಗಾರು ಮುಂದಾಗಿದ್ದಾರೆ. ಹಾಗಾದ್ರೆ, ಮುಂದೇನು? ಕನ್ನಡ ಪರ ಸಂಘಟನೆಗಳ ನಿಲುವೇನು? ಇದಕ್ಕೆಲ್ಲ ಇಂದು ಮಧ್ಯಾಹ್ನ ಉತ್ತರ ಸಿಗಲಿದೆ. ಮುಂದೆ ಓದಿ.....

ಇಂದು ಕನ್ನಡ ಸಂಘಟನೆಗಳ ಸಭೆ!

ಎಸ್.ಎಸ್ ರಾಜಮೌಳಿ ನಿರ್ದೇಶನದ 'ಬಾಹುಬಲಿ-2' ಚಿತ್ರವನ್ನ ಕರ್ನಾಟಕದಲ್ಲಿ ಬಿಡುಗಡೆ ಮಾಡಬೇಕಾ? ಬೇಡವೋ? ಎಂದು ನಿರ್ಧರಿಸಲು ಇಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾರಾ ಗೋವಿಂದು ಮತ್ತು ಕನ್ನಡ ಪರ ಸಂಘಟನೆಗಳು ಸಭೆ ನಡೆಸಲಿವೆ. ಈ ಸಭೆಯ ಬಳಿಕ 'ಬಾಹುಬಲಿ-2' ಚಿತ್ರದ ಹಣೆ ಬರಹ ನಿರ್ಧಾರವಾಗಲಿದೆ.[ಕನ್ನಡಿಗರನ್ನ ಹೀಯಾಳಿಸುತ್ತಿರುವ ತಮಿಳರು: ಟ್ವಿಟ್ಟರ್ ನಲ್ಲಿ ಘೋರ ಯುದ್ಧ.!]

'ಬಾಹುಬಲಿ-2' ಮತ್ತೆ ಎದುರಾಗಿದೆ ಚಿತ್ರಕ್ಕೆ 2 ವಿಘ್ನ!

ಇಲ್ಲಿಯವರೆಗೂ ಕಟ್ಟಪ್ಪ ಕನ್ನಡಿಗರನ್ನ ಕ್ಷಮೆ ಕೇಳಬೇಕು ಎಂಬ ಬೇಡಿಕೆಯನ್ನ ಕನ್ನಡ ಪರ ಸಂಘಟನೆಗಳು ಇಟ್ಟಿದ್ದವು. ಅದರಂತೆ ತಮಿಳು ನಟ ಸತ್ಯರಾಜ್ ನಿನ್ನೆ ವಿಡಿಯೋ ಸಂದೇಶ ರವಾನಿಸಿದ್ದರು. ಆದ್ರೆ, ಅಲ್ಲಿಂದ ಈ ವಿವಾದ ಹೊಸ ತಿರುವು ಪಡೆದುಕೊಂಡಿದ್ದು, ಈಗ 2 ಸಂಕಷ್ಟಗಳು ಎದುರಾಗಿದೆ.[ಕನ್ನಡಿಗರ ಹೋರಾಟಕ್ಕೆ ಸಂದ ಜಯ: ಕಡೆಗೂ ತಲೆಬಾಗಿದ ಕಟ್ಟಪ್ಪ.!]

ತಮಿಳುನಾಡಿನಲ್ಲಿ ಕನ್ನಡ ಚಿತ್ರಗಳು ಬ್ಯಾನ್!

ಸತ್ಯರಾಜ್ ಕನ್ನಡಿಗರಿಗೆ ವಿಷಾದ ವ್ಯಕ್ತಪಡಿಸಿದ ಹಿನ್ನಲೆ ತಮಿಳುನಾಡಿನಲ್ಲಿ ಕನ್ನಡ ಚಿತ್ರಗಳ ಪ್ರದರ್ಶನವನ್ನ ರದ್ದು ಮಾಡಲಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಯಿತು. 'ಶುದ್ದಿ', 'ಚಕ್ರವರ್ತಿ' ಹಾಗೂ 'ಶ್ರೀನಿವಾಸ ಕಲ್ಯಾಣ' ಸೇರಿದಂತೆ ಹಲವು ಚಿತ್ರಗಳ ಪ್ರದರ್ಶನವನ್ನ ನಿಲ್ಲಿಸಲಾಗಿದೆ ಎಂದು ತಿಳಿದುಬಂದಿದೆ.[ಮುಂದುವರೆದ 'ಕಟ್ಟಪ್ಪ'ನ ವಿವಾದ: ತಮಿಳುನಾಡಿನಲ್ಲಿ ಕನ್ನಡ ಚಿತ್ರಗಳು ಬ್ಯಾನ್! ]

ಕರ್ನಾಟಕದಲ್ಲಿ ತಮಿಳು ಚಿತ್ರಗಳು ರದ್ದು!

ತಮಿಳುನಾಡಿನಲ್ಲಿ ಕನ್ನಡ ಚಿತ್ರಗಳ ಪ್ರದರ್ಶನ ರದ್ದು ಮಾಡಿರುವ ಹಿನ್ನಲೆ ಕರ್ನಾಟಕದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಹೀಗಾಗಿ, ನಮ್ಮ ರಾಜ್ಯದಲ್ಲೂ ತಮಿಳು ಚಿತ್ರಗಳ ಪ್ರದರ್ಶನವನ್ನ ರದ್ದುಗೊಳಿಸಲು ಕನ್ನಡ ಪರ ಸಂಘಟನೆಗಳು ಮುಂದಾಗಿದೆ.[ಕರ್ನಾಟಕದಲ್ಲಿ ತಮಿಳು ಚಿತ್ರಗಳ ಪ್ರದರ್ಶನಕ್ಕೆ ವಿರೋಧ!]

ಸತ್ಯರಾಜ್ ಕ್ಷಮೆ ಕೇಳೇ ಇಲ್ವಂತೆ!

ಮತ್ತೊಂದೆಡೆ ತಮಿಳು ನಟ ಸತ್ಯರಾಜ್ ಅವರು ಕನ್ನಡಿಗರನ್ನ ಕ್ಷಮೆ ಕೇಳಿಲ್ಲ. ಬದಲಾಗಿ ಕೇವಲ ವಿಷಾದ ವ್ಯಕ್ತಪಡಿಸಿದ್ದಾರೆ. ಇದು ಕನ್ನಡಿಗರಲ್ಲಿ ಮತ್ತಷ್ಟು ಬೇಸರ ಉಂಟು ಮಾಡಿದೆ. ಹೀಗಾಗಿ, ಹೋರಾಟಗಾರರ ಬೇಡಿಕೆಯಂತೆ ಕ್ಷಮೆ ಕೇಳಿಲ್ಲ ಎಂಬುವುದು 'ಬಾಹುಬಲಿ' ಚಿತ್ರಕ್ಕೆ ಮತ್ತೆ ಸಂಕಟ ಎದುರಾಗುವಂತೆ ಮಾಡಿದೆ.[ತಮಿಳುನಾಡಿಗೆ ಎಚ್ಚರಿಕೆ ನೀಡಿದ 'ಬಿಗ್ ಬಾಸ್' ಪ್ರಥಮ್!]

ಇದನ್ನೆಲ್ಲ ಮೀರಿ 'ಬಾಹುಬಲಿ' ರಿಲೀಸ್ ಆಗುತ್ತಾ!

ಈ ಎಲ್ಲ ಘಟನೆಗಳನ್ನ ಪರಿಗಣಿಸಿ ಇಂದು ವಾಣಿಜ್ಯ ಮಂಡಳಿ ಮತ್ತು ಕನ್ನಡ ಪರ ಸಂಘಟನೆಗಳು ಸಭೆ ನಡೆಸಲಿದೆ. ಕಟ್ಟಪ್ಪ ಕ್ಷಮೆ ಕೇಳದೆ ಇರುವುದು, ತಮಿಳುನಾಡಿನಲ್ಲಿ ಕನ್ನಡ ಚಿತ್ರವನ್ನ ರದ್ದು ಗೊಳಿಸಿರುವುದರಿಂದ ಬಹುತೇಕ 'ಬಾಹುಬಲಿ2' ಚಿತ್ರ ಬಿಡುಗಡೆ ಮಾಡುವುದು ಬಹುತೇಕ ಅನುಮಾನ. ಆದ್ರೂ ಸಭೆಯ ತೀರ್ಮಾನ ಕಾದು ನೋಡೋಣ

English summary
Again Problems For Baahubali 2 Release.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada