»   » ಕನ್ನಡಕ್ಕೆ ದೆಹಲಿಯಿಂದ ಮತ್ತೊಬ್ಬ ಬೆಡಗಿ ಆಮದು

ಕನ್ನಡಕ್ಕೆ ದೆಹಲಿಯಿಂದ ಮತ್ತೊಬ್ಬ ಬೆಡಗಿ ಆಮದು

Posted By:
Subscribe to Filmibeat Kannada

ಕನ್ನಡಕ್ಕೆ ಮತ್ತೊಬ್ಬ ಉತ್ತರಮುಖಿಯ ಆಗಮವಾಗಿದೆ. ಇಷ್ಟು ದಿನ ಮುಂಬೈನಿಂದ ಬೆಡಗಿಯರ ಆಗಮನಾಗುತ್ತಿತ್ತು. ಈ ಬಾರಿ ಬೆಡಗಿಯೊಬ್ಬಳು ನವದೆಹಲಿಯಿಂದ ಇಂಪೋರ್ಟ್ ಆಗಿದ್ದಾರೆ. ಹೆಸರು ಅಹನಾ. ನೋಡಲು ಓಹೋ ಆಹಾ ಎನ್ನುವಷ್ಟು ಇಲ್ಲದಿದ್ದರೂ ಪ್ರತಿಭಾವಂತೆ ಎನ್ನಬಹುದು.

ಕೆನಡಾದಲ್ಲಿ ಎರಡು ವರ್ಷಗಳ ಕಾಲ ಕೆಲಸ ಮಾಡಿ ಈಗ ಕನ್ನಡದ 'ಜಗ್ಗಿ' ಚಿತ್ರಕ್ಕೆ ಅಡಿಯಿಟ್ಟಿದ್ದಾರೆ. ಹೊಸಬರಾದ ಸುನಿಲ್ ರಾಜ್ ಚಿತ್ರದ ಹೀರೋ. ಈ ಚಿತ್ರಕ್ಕೆ ಚೊಚ್ಚಲ ಬಾರಿ ಆಕ್ಷನ್ ಕಟ್ ಹೇಳುತ್ತಿರುವವರು ಸುಲ್ತಾನ್ ರಾಜ್. ಚಿತ್ರದ ನಿರ್ಮಾಪಕ ಎಸ್ಎನ್ಎಸ್ ಶ್ರೀನಿವಾಸ್ ಅವರಿಗೂ ಇದು ಮೊದಲ ಚಿತ್ರ.

Ahana debuts in Kannada Jaggi

ಈಗಾಗಲೆ ಹಿಂದಿಯ ಮಕ್ಕಳ ಚಿತ್ರ 'ಮ್ಯಾಜಿಕ್ ಬಾಕ್ಸ್' ಚಿತ್ರದಲ್ಲಿ ಅಹನಾ ಅಭಿನಯಿಸಿದ್ದಾರೆ. ಅದಾದ ಬಳಿಕ ಅವರು ನಟನೆಯಲ್ಲಿ ತರಬೇತಿ ಪಡೆದು ಈಗ 'ಜಗ್ಗಿ' ಚಿತ್ರದ ಕನ್ನಡಕ್ಕೆ ಅಡಿಯಿಟ್ಟಿದ್ದಾರೆ. ಸಲ್ಸಾ ಹಾಗೂ ಭರತನಾಟ್ಯ ನೃತ್ಯಗಳಲ್ಲೂ ಅಹನಾ ತರಬೇತಿ ಪಡೆದಿದ್ದಾರೆ.

'ಜಗ್ಗಿ' ಚಿತ್ರ ಕೌಟುಂಬಿಕ ಮೌಲ್ಯಗಳುಳ್ಳ ಕಥಾಹಂದರ ಚಿತ್ರಕ್ಕಿದೆ. ಎಲ್ವಿನ್ ಜೋಶ್ವಾ ಅವರ ಸಂಗೀತ ಚಿತ್ರಕ್ಕಿದೆ. ಮಡಿಕೇರಿ, ಬೆಂಗಳೂರು, ಸಕಲೇಶಪುರದ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಯಲಿದೆ. ಅತ್ತ ಪೋಷಕರು ಹಾಗೂ ಇತ್ತ ಮಕ್ಕಳಿಗೆ ಒಂದು ಒಳ್ಳೆಯ ಸಂದೇಶ ಚಿತ್ರದಲ್ಲಿದೆ ಎನ್ನುತ್ತಾರೆ ನಿರ್ದೇಶಕರು.

ಸುನಿಲ್ ರಾಜ್ ಅವರು ಅಂಗಾರಕ, ದರೋಡೆ, ಶಿವಾಜಿನಗರ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರದಲ್ಲಿ ಫೈಟ್ಸ್, ಡಾನ್ಸ್ ಜೊತೆಗೆ ಒಳ್ಳೆಯ ಅಭಿನಯವೂ ಇದೆ ಎನ್ನುತ್ತಾರೆ ಸುನಿಲ್. ಚಿತ್ರದಲ್ಲಿ ವಿಶ್ವ ಹಾಗೂ ಕೆಂಪೇಗೌಡ ಕಾಮಿಡಿ ಪಾತ್ರಗಳನ್ನು ಪೋಷಿಸಿದ್ದಾರೆ. (ಏಜೆನ್ಸೀಸ್)

English summary
New Delhi beauty Ahana debuts in Kannada movie Jaggi. The newcomer Sunil Raj as hero and debut director Sultan Raju and first time producer SNS Srinivas.
Please Wait while comments are loading...