For Quick Alerts
  ALLOW NOTIFICATIONS  
  For Daily Alerts

  ಶ್ವಾನದ ಮೇಲೆ ಹಲ್ಲೆ ಮಾಡಿದ ವ್ಯಕ್ತಿ: ಖಂಡಿಸಿದ ನಟಿ ಐಂದ್ರಿತಾ ರೇ

  |

  ಸಾಕು ಪ್ರಾಣಿಯ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ಮಾಡಿರುವ ವಿಡಿಯೋವೊಂದು ವೈರಲ್ ಆಗಿದ್ದು, ಭಾರಿ ಖಂಡನೆ ವ್ಯಕ್ತವಾಗಿದೆ. ಸಾಕು ಶ್ವಾನದ ಮೇಲೆ ಕ್ರೌರ್ಯ ಮೆರೆದಿರುವ ವ್ಯಕ್ತಿಯ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ನಟಿ ಐಂದ್ರಿತಾ ರೇ ಈ ಘಟನೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

  ಈ ವಿಡಿಯೋದಲ್ಲಿ ಶ್ವಾನವನ್ನು ಕಟ್ಟಿ ಹಾಕಲಾಗಿದೆ. ಬಲವಂತವಾಗಿ ಆ ನಾಯಿ ಮೇಲೆ ಹಲ್ಲೆ ಮಾಡುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ನನ್ನನ್ನು ಬಿಟ್ಟು ಬಿಡಿ ಎಂದು ಅಂಗಲಾಚಿ ಬೇಡಿಕೊಳ್ಳುವ ರೀತಿ ಆ ಶ್ವಾನವೂ ಮನವಿ ಮಾಡಿದರೂ ಅದರ ಮೇಲೆ ಆ ವ್ಯಕ್ತಿ ಹಲ್ಲೆ ಮಾಡಿದ್ದಾನೆ.

  ಫೋಟೋ ವೈರಲ್; ಬೀಚ್ ನಲ್ಲಿ ದಿಗಂತ್ ಮತ್ತು ಐಂದ್ರಿತಾ ದಂಪತಿಯ ಮಸ್ತಿಫೋಟೋ ವೈರಲ್; ಬೀಚ್ ನಲ್ಲಿ ದಿಗಂತ್ ಮತ್ತು ಐಂದ್ರಿತಾ ದಂಪತಿಯ ಮಸ್ತಿ

  ಈ ವಿಡಿಯೋ ಹಂಚಿಕೊಂಡಿರುವ ನಟಿ ಐಂದ್ರಿತಾ ''ಪ್ರಾಣಿಗಳ ಮೇಲೆ ನಡೆಯುವ ಕ್ರೌರ್ಯ ವಿರುದ್ಧ ಕಠಿಣವಾದ ಕಾನೂನು ಇದ್ದಿದ್ದರೆ ಹೀಗೆ ನಡೆಯುತ್ತಿರಲಿಲ್ಲ'' ಎಂದು ಅಸಮಾಧಾನ ಹೊರಹಾಕಿದ್ದಾರೆ.

  ''ಧ್ವನಿ ಇಲ್ಲದವರ ಮೇಲೆ ಮನುಷ್ಯರ ದಬ್ಬಾಳಿಕೆ ಮುಂದುವರಿದಿದೆ. ಈ ಬಗ್ಗೆ ರಾಜಕಾರಣಿಗಳು ಈ ಬಗ್ಗೆ ಯಾವುದೇ ನಿಲುವು ತೆಗೆದುಕೊಳ್ಳುವುದಿಲ್ಲ. ಯಾವುದೇ ಮಾದ್ಯಮಗಳು ತಲೆಕೆಡಿಸಿಕೊಳ್ಳುವುದಿಲ್ಲ'' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

  ಅಂದ್ಹಾಗೆ, ಐಂದ್ರಿತಾ ಮತ್ತು ದಿಗಂತ್ ದಂಪತಿ ಸಹ ತಮ್ಮ ಮನೆಯಲ್ಲಿ ಎರಡು ಶ್ವಾನವನ್ನು ಸಾಕಿದ್ದಾರೆ. ಆ ಶ್ವಾನಗಳ ಜೊತೆ ಐಂದ್ರಿತಾ ಕಾಣಿಸಿಕೊಂಡಿರುವ ಫೋಟೋಗಳು ಈ ಹಿಂದೆ ಹಲವು ಬಾರಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

  ಶೂಟಿಂಗ್ ಮುಂಚೆ ಕಾಫಿ ಬ್ರೇಕ್: ದಿಗಂತ್-ಐಂದ್ರಿತಾ ರೊಮ್ಯಾಂಟಿಕ್ ಫೋಟೋಶೂಟಿಂಗ್ ಮುಂಚೆ ಕಾಫಿ ಬ್ರೇಕ್: ದಿಗಂತ್-ಐಂದ್ರಿತಾ ರೊಮ್ಯಾಂಟಿಕ್ ಫೋಟೋ

  ಇದ್ದಕ್ಕಿದ್ದಂತೆ ಹೈದ್ರಾಬಾದ್ ಗೆ ಬಂದ ಧ್ರುವ ಸರ್ಜಾ, ನಂದಕಿಶೋರ್ | Filmibeat Kannada

  ಇನ್ನುಳಿದಂತೆ ಗರುಡ ಹಾಗೂ ಪ್ರೇಮ ಪೂಜ್ಯಂ ಸಿನಿಮಾಗಳಲ್ಲಿ ಐಂದ್ರಿತಾ ನಟಿಸಿದ್ದಾರೆ. ದಿಗಂತ್ ಜೊತೆ ''ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ'' ಸಿನಿಮಾದಲ್ಲೂ ಅಭಿನಯಿಸುತ್ತಿದ್ದಾರೆ.

  English summary
  Kannada actress Aindrita Ray Talks about No Law Implemented against Animal Cruelty.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X