For Quick Alerts
  ALLOW NOTIFICATIONS  
  For Daily Alerts

  ಹೊಸ ಸಿನಿಮಾ ಶುರು ಮಾಡಿದ ಅಜಯ್ ರಾವ್

  |

  ನಟ ಅಜಯ್ ರಾವ್ 25 ಸಿನಿಮಾಗಳನ್ನು ಪೂರ್ಣ ಮಾಡಿದ್ದರು. 'ತಾಯಿಗೆ ತಕ್ಕ ಮಗ' ಅವರ 25ನೇ ಸಿನಿಮಾವಾಗಿದ್ದು, ಆ ಚಿತ್ರದ ಬಳಿಕ ಈಗ ಹೊಸ ಸಿನಿಮಾವನ್ನು ಅವರು ಶುರು ಮಾಡಿದ್ದಾರೆ.

  ಅಜಯ್ ರಾವ್ ಹೊಸ ಸಿನಿಮಾ ಶ್ರೀರಾಮ ನವಮಿ ಹಬ್ಬದ ವಿಶೇಷವಾಗಿ ಅನೌನ್ಸ್ ಆಗಿದೆ. ಈ ಸಿನಿಮಾವನ್ನು ಟಿ ಆರ್ ಚಂದ್ರಶೇಖರ್ ನಿರ್ಮಾಣ ಮಾಡುತ್ತಿದ್ದಾರೆ. ಚಂದ್ರಶೇಖರ್ ಮೊದಲ ಬಾರಿಗೆ ಅಜಯ್ ರಾವ್ ಚಿತ್ರಕ್ಕೆ ಹಣ ಹಾಕುತ್ತಿದ್ದಾರೆ.

  ಹುಟ್ಟುಹಬ್ಬಕ್ಕೆ ಕೃಷ್ಣ ಅಜಯ್ ರಾವ್ ಹೊಸ ಸಿನಿಮಾ

  ಈ ಹಿಂದೆ 'ಚಮಕ್', 'ಅಯೋಗ್ಯ' ಹಾಗೂ 'ಬೀರ್ ಬಲ್' ಸಿನಿಮಾಗಳನ್ನು ಚಂದ್ರಶೇಖರ್ ತಮ್ಮ ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ಬ್ಯಾನರ್ ನಲ್ಲಿ ನಿರ್ಮಾಣ ಮಾಡಿದ್ದರು.

  ಅಂದಹಾಗೆ, ಈ ಹೊಸ ಸಿನಿಮಾವನ್ನು ಹೊಸ ನಿರ್ದೇಶಕ ಬಿ ತಿಮ್ಮೇಗೌಡ ಜಾಕಿ ಡೈರೆಕ್ಟ್ ಮಾಡುತ್ತಿದ್ದಾರೆ. ಅನೇಕ ವರ್ಷಗಳಿಂದ ಚಿತ್ರರಂಗದಲ್ಲಿ ಅನುಭವ ಪಡೆದಿರುವ ಇವರು ಮೊದಲ ಬಾರಿಗೆ ನಿರ್ದೇಶಕರಾಗುತ್ತಿದ್ದಾರೆ.

  ಈ ಚಿತ್ರದ ಟೈಟಲ್ ಸದ್ಯಕ್ಕೆ ಇನ್ನು ಫಿಕ್ಸ್ ಆಗಿಲ್ಲ. ಪ್ರೊಡಕ್ಷನ್ ನಂಬರ್ 7 ಎಂಬ ಹೆಸರಿನಲ್ಲಿ ಚಿತ್ರ ಶುರುವಾಗಿದೆ. ಈ ಸಿನಿಮಾದ ಜೊತೆಗೆ ಮತ್ತೆರಡು ಚಿತ್ರಗಳಲ್ಲಿ ಅವರು ಬ್ಯುಸಿ ಇದ್ದಾರೆ.

  English summary
  Kannada actor Ajay Rao announced his new movie. The movie producing by T R Chandrashekar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X