»   » ಟ್ರಾಫಿಕ್ ಪೊಲೀಸರ ಕೈಗೆ ಸಿಕ್ಕಿ ಬಿದ್ದ ಸ್ಟಾರ್

ಟ್ರಾಫಿಕ್ ಪೊಲೀಸರ ಕೈಗೆ ಸಿಕ್ಕಿ ಬಿದ್ದ ಸ್ಟಾರ್

Posted By:
Subscribe to Filmibeat Kannada

ಆತ ಬೇರೆ ಎಲ್ಲಾ ನಾಯಕ ನಟರಿಗಿಂತ ಕೊಂಚ ವಿಭಿನ್ನ, ಬೈಕು, ಕಾರುಗಳ ರೇಸಿಂಗ್ ಎಂದರೆ ಹುಚ್ಚು, ಇತ್ತೀಚಿಗೆ ಸಾರ್ವಜನಿಕರಲ್ಲಿ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಲು ಮುಂದಾಗಿದ್ದ ನಟ ಟ್ರಾಫಿಕ್ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಅದರೆ, ದಾಖಲೆಗಳ ಪರಿಶೀಲನೆ ಮಾಡಿದ ಪೊಲೀಸರು ಹೆಲ್ಮೆಟ್ ತೆಗೆಯುವಂತೆ ಹೇಳಿದ್ದಾರೆ. ಹೆಲ್ಮೆಟ್ ತೆಗೆದು ಮುಗುಳ್ನಕ್ಕ ನಟ ಅಜಿತ್ ಕಂಡ ಪೊಲೀಸರು ಸಂಭ್ರಮದಿಂದ ಕೈ ಕುಲುಕಿದ್ದಾರೆ.

ತಮಿಳುನಾಡು-ಕರ್ನಾಟಕ ಗಡಿ ಭಾಗದಲ್ಲಿ ಟ್ರಾಫಿಕ್ ಪೊಲೀಸರು ನಿರಂತರವಾಗಿ ಚೆಕ್ ಅಪ್ ಮಾಡುವುದು ಎಲ್ಲರಿಗೂ ಗೊತ್ತಿರುವ ವಿಷಯ. ಅದೇ ರೀತಿ ಸೇಲಂ ಬಳಿ ಸಾಮಾನ್ಯ ವೇಗದಲ್ಲಿ ಬರುತ್ತಿದ್ದ ಬಿಎಂಡಬ್ಲ್ಯೂ ಎಸ್ ಎಸ್ 100 ಆರ್ ಆರ್ ಬೈಕು ಪೊಲೀಸರ ಗಮನ ಸೆಳೆದಿದೆ. ಎಲ್ಲರನ್ನು ತಡೆದು ನಿಲ್ಲಿಸುವಂತೆ ಆ ಬೈಕನ್ನು ನಿಲ್ಲಿಸಿದ್ದಾರೆ.

ಎಲ್ಲಾ ಪ್ರಜ್ಞಾವಂತ ನಾಗರೀಕರಂತೆ ಅಜಿತ್ ಅವರು ಸರತಿ ಸಾಲಿನಲ್ಲಿ ನಿಂತು ಪೊಲೀಸರ ಮುಂದೆ ಬಂದಿದ್ದಾರೆ. ಎಲ್ಲರಂತೆ ಬೈಕು ದಾಖಲೆ ಒದಗಿಸಿದ್ದಾರೆ. ನಂತರ ಹೆಲ್ಮೆಟ್ ತೆಗೆಯುವಂತೆ ಪೊಲೀಸರು ಸೂಚಿಸಿದ್ದಾರೆ. ಹೆಲ್ಮೆಟ್ ತೆಗೆದ ಅಜಿತ್ ನೋಡಿ ಪೊಲೀಸರಿಗೆ ಅಚ್ಚರಿಯಾಗಿದೆ.

ಮೊದಲೇ ಹೇಳಬಾರದಿತ್ತಾ ಸಾರ್ ಎಂದು ಹಲ್ಲುಗಿಂಜಿದ್ದಾರೆ. ರೂಲ್ಸ್ ಎಲ್ಲರಿಗೂ ಒಂದೇ ಅಲ್ವಾ ಎಂದು ನಕ್ಕ ಅಜಿತ್ ಅಲ್ಲಿಂದ ಹೊರಟ್ಟಿದ್ದಾರೆ. "It's better to sweat than bleed," ಎಂಬ ಧ್ಯೇಯ ವಾಕ್ಯದೊಡನೆ ಸುರಕ್ಷತೆ ಬಗ್ಗೆ ಅಜಿತ್ ಜಾಗೃತಿ ಮೂಡಿಸುತ್ತಿದ್ದಾರೆ. ಅಜಿತ್ ಅಭಿಮಾನ ಹಾಗೂ ಪ್ರಯಾಣ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ...

ಸುರಕ್ಷತೆಗೆ ಆದ್ಯತೆ

ಮಣಿಕಟ್ಟು, ಭುಜ, ತೋಳು ಹಾಗೂ ಮೊಣಕಾಲಿಗೆ ವಿಶೇಷ ದಿರಿಸನ್ನು ಹಾಕಿಕೊಂಡು ಹೋಗುತ್ತಿದ್ದ ಅಜಿತ್ ಹೇಳಿದ್ದಿಷ್ಟು ನಾನು ಸದ್ಯಕ್ಕೆ ರೇಸಿಂಗ್ ಮಾಡುತ್ತಿಲ್ಲ. ತಮಿಳುನಾಡಿನಿಂದ ಬೆಂಗಳೂರು ಕಡೆಗೆ ಸಾಮಾನ್ಯವಾಗಿ ಇದೇ ರೀತಿ ಪ್ರಯಾಣಿಸುತ್ತೇನೆ. ಆದರೆ, ಸುರಕ್ಷತೆ ಬಗ್ಗೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಜನರ ಗಮನ ಸೆಳೆಯಲು ಇದು ಅವಶ್ಯ ಎಂದಿದ್ದಾರೆ.

ಅತಿ ವೇಗ ಬೇಡ

ವೇಗದ ಹಿಂದೆ ಹೋಗುವ ಯುವಕರೇ ಎಚ್ಚರ ಎಂಆರ್ ಐ ಸ್ಕ್ಯಾನ್ ಮಾಡಿಸಲು ಸುಮಾರು 7000 ರು ಅಧಿಕ ಖರ್ಚಾಗುತ್ತದೆ.

ದುಡ್ಡು ಉಳಿಸಿ

ಬೈಕ್ ಪ್ರಿಯರೇ, ನೀವು ಕಷ್ಟಪಟ್ಟು ದುಡಿದ ದುಡ್ಡನ್ನು ಉಳಿಸಲು ಯತ್ನಿಸಿ ಬೈಕ್ ಮೇಲೆ ಖರ್ಚು ಮಾಡಿದರೂ ಅಡ್ಡಿಯಿಲ್ಲ ಆದರೆ, ರಸ್ತೆ ನಿಯಮ ಮೀರಿ ಅಪಘಾತವಾದರೆ ಹಣ, ಪ್ರಾಣ ಎರಡೂ ಹೋಗುತ್ತದೆ

ಚಿತ್ರಗಳಲ್ಲೂ ಜಾಗೃತಿ

ಚಿತ್ರಗಳಲ್ಲೂ ನಾಯಕರು ಬೈಕ್ ಸವಾರಿ ಸುರಕ್ಷ್ತೆ ನಿಯಮ ಮೀರದಂತೆ ಎಚ್ಚರಿಕೆ ವಹಿಸುವುದು ಅವಶ್ಯ. ಅಭಿಮಾನಿಗಳು ನಾಯಕರ ಬೈಕ್ ಸವಾರಿ ಶೈಲಿ ಅನುಕರಣೆ ಮಾಡಲು ಹೋಗಿ ಅಪಾಯಕ್ಕೀಡಾಗ ಬಾರದು

ಸೂಪರ್ ಬೈಕ್ ಸವಾರ

18ನೇ ವಯಸ್ಸಿನಿಂದ ಸೂಪರ್ ಬೈಕ್, ರೇಸಿಂಗ್ ಕಾರು ಓಡಿಸುತ್ತಿರುವ ಅಜಿತ್ ಅವರಿಗೆ ಚಿತ್ರರಂಗ ಬಿಟ್ಟರೆ ರೇಸಿಂಗ್ ಎಂದರೆ ಪ್ರಾಣ. ರಾಷ್ಟ್ರಮಟ್ಟದಲ್ಲೂ ರೇಸಿಂಗ್ ಮಾಡಿರುವ ಸಾಧನೆ ಮಾಡಿದ್ದಾರೆ ಕೂಡಾ

ಸರಳ ಸವಾರ

ಅಜಿತ್ ಹಾಗೂ ಅವರ ಪತ್ನಿ ಶಾಲಿನಿ, ನಾದಿನಿ ಶ್ಯಾಮಿಲಿ(ಬೇಬಿ ಶ್ಯಾಮಿಲಿ) ಅವರು ಬೆಂಗಳೂರಿಗೆ ಹೋಗಿ ಬರುವುದು ಮಾಮೂಲಿ. ಆದರೆ, ಬೈಕ್ ಹತ್ತಿ ಸವಾರ ಮಾಡಿದ್ದು ಎಲ್ಲಿಗೆ ಎಂಬುದನ್ನು ಹೇಳಿಲ್ಲ ಆದರೆ, ಕಟ್ಟುಕೊಟೈ ಎಂಬ ಗ್ರಾಮದ ಸಣ್ಣ ಹೋಟೆಲ್ ನಲ್ಲಿ ಕಾಣಿಸಿಕೊಂಡಿದ್ದರು.

English summary
It is known fact that Tamil superstar Ajith Kumar has a passion for biking. The actor was recently spotted near a small village in Salem while he was on his way to Bangalore from Chennai on his new hunk BMW ss100rr.
Please Wait while comments are loading...