twitter
    For Quick Alerts
    ALLOW NOTIFICATIONS  
    For Daily Alerts

    ಚಲನಚಿತ್ರೋತ್ಸವಗಳಲ್ಲಿ ಮೆಚ್ಚುಗೆ ಪಡೆದ ಬುದ್ಧಿಮಾಂದ್ಯ ಮಗುವಿನ ಕಥೆ ಹೇಳುವ 'ಜ್ಞಾನಂ’

    |

    ಬುದ್ಧಿಮಾಂದ್ಯ ಮಗುವಿನ ಹಿನ್ನಲೆಯಲ್ಲಿ ನಡೆಯುವ ಕಥಾಹಂದರವನ್ನು ಇಟ್ಟುಕೊಂಡು ಮಾಡಿರುವ ಚಿತ್ರ 'ಜ್ಞಾನಂ'. ವರದರಾಜ್‍ ವೆಂಕಟಸ್ವಾಮಿ ನಿರ್ದೇಶನದಲ್ಲಿ ತಯಾರಾಗಿರುವ ಈ ಚಿತ್ರ ಹಲವಾರು ಫಿಲ್ಮ್ ಫೆಸ್ಟಿವಲ್ ಗಳಲ್ಲಿ ಭಾಗವಹಿಸಿ ಮೆಚ್ಚಿಗೆ ಪಡೆದಿದೆ.

    ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ನಂಜುಂಡ ಕೃಷ್ಣ, ಪ್ರದೀಪ ವರ್ಮ ಮುಂತಾದ ನಿರ್ದೇಶಕರ ಬಳಿ ಕಲಿತಿರುವ ವರದರಾಜ್ ಪ್ರಯೋಗಾತ್ಮಕ ಚಿತ್ರಗಳನ್ನೇ ಮಾಡಬೇಕೆಂಬ ಧ್ಯೇಯ ಇಟ್ಟುಕೊಂಡವರು.

    ತಮ್ಮ ಮನೆಯ ನೆರೆಹೊರೆಯವರ ಕುಟಂಬವೊಂದರಲ್ಲಿ ಜನಿಸಿದ ಇಬ್ಬರು ಬುದ್ಧಿಮಾಂದ್ಯ ಮಕ್ಕಳನ್ನು ಹಾಗೂ ಅವರ ಪೋಷಕರು ಪಡುವ ನೋವು-ಅವಮಾನಗಳನ್ನು ಕಣ್ಣಾರೆ ಕಂಡ ವರದರಾಜ್, ಇದೇ ಎಳೆಯನ್ನು ಆಧಾರವಾಗಿಟ್ಟುಕೊಂಡು ಸಮಾಜಕ್ಕೆ ಸಂದೇಶ ಕೊಡುವಂತಹ ಸಿನಿಮಾವೊಂದನ್ನು ಸಿದ್ಧಪಡಿಸಿದ್ದಾರೆ. ಮುಂದೆ ಓದಿರಿ...

    ಚಿತ್ರದ ಕಥಾಹಂದರ

    ಚಿತ್ರದ ಕಥಾಹಂದರ

    ಎರಡು ಬೇರೆ ಬೇರೆ ಪ್ರದೇಶಗಳಲ್ಲಿ ಒಂದೇ ದಿನ ಹುಟ್ಟಿದ ಇಬ್ಬರು ಮಕ್ಕಳಲ್ಲಿ ಒಬ್ಬ ಅಸಮಾನ್ಯ ಬುದ್ಧಿವಂತನಾಗಿದ್ದರೆ ಮತ್ತೊಬ್ಬ ಹೊರ ಜಗತ್ತಿನ ಅರಿವೆ ಇಲ್ಲದಂತೆ ವರ್ತಿಸುವ ಬುದ್ಧಿಮಾಂದ್ಯ ಮಗುವಾಗಿರುತ್ತದೆ. ಇವರಿಬ್ಬರ ಕಥೆಯನ್ನು ಸಮಾಜಕ್ಕೆ ಮೆಸೇಜ್ ಕೊಡುವ ರೀತಿ ನಿರ್ದೇಶಕ ವರದರಾಜ್ ನಿರೂಪಿಸಿದ್ದಾರೆ.

    ಚಲನಚಿತ್ರೋತ್ಸವಗಳಲ್ಲಿ ಮೆಚ್ಚುಗೆ ಪಡೆದ ಚಿತ್ರ

    ಚಲನಚಿತ್ರೋತ್ಸವಗಳಲ್ಲಿ ಮೆಚ್ಚುಗೆ ಪಡೆದ ಚಿತ್ರ

    ಈಗಾಗಲೇ ಈ ಚಿತ್ರವು ಯು.ಎಸ್ ನ ಇಂಡಿ ಫೆಸ್ಟ್ ಫಿಲ್ಮ್ ಅವಾರ್ಡ್ಸ್ ನಲ್ಲಿ ಭಾಗವಹಿಸಿ ಬೆಸ್ಟ್ ಫಿಲ್ಮ್ ಪ್ರಶಸ್ತಿ ಪಡೆದುಕೊಂಡಿದೆ. ಅಲ್ಲದೆ ಕೋಲ್ಕತ್ತಾ ಫಿಲ್ಮ್ ಫೆಸ್ಟಿವಲ್ ನಲ್ಲಿ ಭಾಗವಹಿಸಿ ಆಚ್ಯೂಮೆಂಟ್ ಅವಾರ್ಡ್ ಪಡೆದುಕೊಂಡಿದೆ. ಈ ಚಿತ್ರದಲ್ಲಿ ಮೂರು ಕಥೆಗಳನ್ನು ಹೇಳಿಕೊಂಡು ಹೋಗಿರುವ ನಿರ್ದೇಶಕರು ಕೊನೆಯಲ್ಲಿ ಎಲ್ಲಾ ಕಥೆಗಳನ್ನು ಒಂದೇ ಕಡೆ ಸೇರಿಸುತ್ತಾರೆ.

    ತಾರಾಗಣದಲ್ಲಿ ಯಾರ್ಯಾರು ಇದ್ದಾರೆ.?

    ತಾರಾಗಣದಲ್ಲಿ ಯಾರ್ಯಾರು ಇದ್ದಾರೆ.?

    ಬುದ್ಧಿಮಾಂದ್ಯ ಮಗುವಿನ ಪಾತ್ರವನ್ನು ಧ್ಯಾನ್ ಎಂಬ ಬಾಲಕ ನಿರ್ವಹಿಸಿದ್ದರೆ, ಬುದ್ಧಿವಂತ ಹುಡುಗನಾಗಿ ಲೋಹಿತ್ ಅಭಿನಯಿಸಿದ್ದಾರೆ. ಸುದರ್ಶನ್ ರವರ ಪತ್ನಿ ಶೈಲಶ್ರೀ ಈ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಉಳಿದಂತೆ ಸಂತೋಷ್ ಕುಮಾರ್, ರಾಧಿಕಾ ಶೆಟ್ಟಿ, ಆಶಾ ಸುಜಯ್, ಜ್ಯೋತಿ ಮರೂರು ಅಭಿನಯಿಸಿದ್ದಾರೆ.

    ಚಿತ್ರತಂಡದ ಕುರಿತು...

    ಚಿತ್ರತಂಡದ ಕುರಿತು...

    ಈ ಚಿತ್ರವನ್ನು ವಸಂತ ಸಿನಿ ಕ್ರಿಯೇಷನ್ ಮೂಲಕ ಸಿ.ವೇಣು ಭಾರಧ್ವಾಜ್, ರಾಜು ಭಾರಧ್ವಾಜ್ ನಿರ್ಮಿಸಿದ್ದಾರೆ. ನಿರ್ಮಾಪಕ ವೇಣು ಈ ಚಿತ್ರದಲ್ಲಿ ಬುದ್ಧಿಮಾಂದ್ಯ ಮಗುವಿನ ತಂದೆಯಾಗಿ ಅಭಿನಯಿಸಿದ್ದಾರೆ. ರೋಹಿತ್ ರವರ ಸಂಗೀತ ಸಂಯೋಜನೆಯಲ್ಲಿ ಎರಡು ಹಾಡುಗಳು, ಎರಡು ಬಿಟ್ಸ್ ಚಿತ್ರದಲ್ಲಿ ಇದ್ದು, ನಿರ್ದೇಶಕರೇ ಸಾಹಿತ್ಯ ರಚಿಸಿದ್ದಾರೆ.

    ಚಿತ್ರ ಬಿಡುಗಡೆ ಯಾವಾಗ.?

    ಚಿತ್ರ ಬಿಡುಗಡೆ ಯಾವಾಗ.?

    ಸದ್ಯ ಅಹಮದಾಬಾದ್ ಫಿಲ್ಮ್ ಫೆಸ್ಟಿವೆಲ್ ಸೇರಿದಂತೆ ಇನ್ನೂ ಒಂದಷ್ಟು ಚಿತ್ರೋತ್ಸವಗಳಿಗೆ 'ಜ್ಞಾನಂ' ಸೆಲೆಕ್ಟ್ ಆಗಿದೆ. ಮೇ ಅಥವಾ ಜೂನ್ ನಲ್ಲಿ ಚಿತ್ರವನ್ನು ಬಿಡುಗಡೆ ಮಾಡುವ ಪ್ಲಾನ್ ಚಿತ್ರತಂಡಕ್ಕೆ ಇದೆ.

    English summary
    Here is the complete details about Kannada Movie Gnanam directed by Varadaraj Venkataswamy.
    Tuesday, February 12, 2019, 11:09
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X