»   » ಚಿತ್ರಮಂದಿರದಿಂದ ಹೊರ ಬಂದ ಮೇಲೆಯೂ ಕಾಡುತ್ತಿರುವ 'ಟಗರು' ಪಾತ್ರಗಳು

ಚಿತ್ರಮಂದಿರದಿಂದ ಹೊರ ಬಂದ ಮೇಲೆಯೂ ಕಾಡುತ್ತಿರುವ 'ಟಗರು' ಪಾತ್ರಗಳು

Posted By:
Subscribe to Filmibeat Kannada

ಒಂದು ಸಿನಿಮಾ ನೋಡಿದ ಮೇಲೆ ಅದು ಪ್ರೇಕ್ಷಕರ ಮನಸಿನಲ್ಲಿ ಜಾಗ ಪಡೆಯಬೇಕು. ಚಿತ್ರಮಂದಿರದಿಂದ ಆಚೆ ಬಂದ ಮೇಲೆಯೂ ಆ ಸಿನಿಮಾ ಕಾಡುತ್ತಿರಬೇಕು. ಸಿನಿಮಾ ಕಥೆ, ನಟನೆ, ಪಾತ್ರಗಳು, ಹಾಡುಗಳು ಯಾವುದಾದರು ಅಂಶಗಳು ನೋಡುಗರಿಗೆ ಹತ್ತಿರ ಆಗಬೇಕು. ಅದು ಒಂದು ಒಳ್ಳೆಯ ಸಿನಿಮಾಗೆ ಇರಲೇಬೇಕಾದ ಅಂಶ.

ಸದ್ಯ ಶಿವರಾಜ್ ಕುಮಾರ್ ಅಭಿನಯದ 'ಟಗರು' ಸಿನಿಮಾ ಕಳೆದ ವಾರ ಬಿಡುಗಡೆಯಾಗಿದೆ. ಕೆಲವರು ಸಿನಿಮಾವನ್ನು ಎರಡು ಮೂರು ಬಾರಿ ನೋಡುತ್ತಿದ್ದಾರೆ. ಇನ್ನು ಕೆಲವರು ಸಿನಿಮಾ ಯಾಕೋ ಅರ್ಥ ಆಗುತ್ತಿಲ್ಲ ಎನ್ನುತ್ತಿದ್ದಾರೆ. ಬಹುಪಾಲು ಜನರು ಸ್ಕ್ರೀನ್ ಪ್ಲೇ ಯನ್ನು ಹೊಗಳುತ್ತಿದ್ದಾರೆ. ಆದರೆ ಎಲ್ಲದಕ್ಕಿಂತ ಹೆಚ್ಚಾಗಿ 'ಟಗರು' ಸಿನಿಮಾದ ಪಾತ್ರಗಳು ಈಗ ಚರ್ಚೆ ಆಗುತ್ತಿವೆ. ಹೀರೋ ಹಿರೋಯಿನ್ ಪಾತ್ರದ ರೀತಿ ಸಿನಿಮಾದ ಪ್ರತಿ ಪಾತ್ರಗಳ ಬಗ್ಗೆ ಜನರು ಮಾತನಾಡುತ್ತಿದ್ದಾರೆ. ಅಂದಹಾಗೆ, 'ಟಗರು' ಸಿನಿಮಾದ ಕೆಲವು ಹೈಲೈಟ್ ಆದ ಪಾತ್ರಗಳು ಮುಂದಿದೆ ಓದಿ..


ಟಗರು ಶಿವ

ಸಿನಿಮಾದ ಲೀಡ್ ಪಾತ್ರವಾದ ಟಗರು ಶಿವ ಪಾತ್ರವನ್ನು ಸೆಂಚುರಿ ಸ್ಟಾರಿ ಶಿವಣ್ಣ ಅಮೋಘವಾಗಿ ನಿಭಾಯಿಸಿದ್ದಾರೆ. ಒಮ್ಮೆ ಪೊಲೀಸ್ ಅಧಿಕಾರಿಯಾಗಿ ಮತ್ತೊಮ್ಮೆ ಲಾಂಗ್ ಹಿಡಿದು ಎಂದಿನಂತೆ ಶಿವಣ್ಣ ತೆರೆ ಮೇಲೆ ಶಿವತಾಂಡವ ಹಾಡಿದ್ದಾರೆ.


ಡಾಲಿ

'ಟಗರು' ಸಿನಿಮಾದಲ್ಲಿ ನಾಯಕನ ಪಾತ್ರದಷ್ಟೇ ತಾಕತ್ತು ಇರುವ ಪಾತ್ರ ಡಾಲಿ. ಡಾಲಿ ಒಬ್ಬ ಕೆಟ್ಟ ರೌಡಿ. ಸಿನಿಮಾದಲ್ಲಿ ಅವನೇ ಕೇಳುವಂತೆ ಡಾಲಿ ಅಂದರೆ ಕ್ರೂರಿ. ಈ ಪಾತ್ರವನ್ನು ಮೈ ಮೇಲೆ ಎಳೆದುಕೊಂಡಂತೆ ನಟ ಧನಂಜಯ್ ನಟಿಸಿದ್ದಾರೆ.


ಕಾನ್ಸ್ ಟೇಬಲ್ ಸರೋಜ

ಕಾನ್ಸ್ ಟೇಬಲ್ ಸರೋಜ ಪಾತ್ರ ಸಿನಿಮಾದ ಕೆಲವೇ ದೃಶ್ಯದಲ್ಲಿ ಇದೆ. ಅಲ್ಲದೆ ಈ ಪಾತ್ರಕ್ಕೆ ಇರುವುದೇ ಮೂರೋ ನಾಲ್ಕೋ ಡೈಲಾಗ್ ಗಳು ಮಾತ್ರ. ಆದರೂ ಇಂತಹ ಸಣ್ಣ ಪಾತ್ರ ಪ್ರೇಕ್ಷಕರ ಗಮನ ಸೆಳೆದಿದೆ. ಸಾಮಾಜಿಕ ಜಾಲತಾಣದಲ್ಲಿ ಕಾನ್ಸ್ ಟೇಬಲ್ ಸರೋಜ ಪಾತ್ರವನ್ನು ಮಾಡಿದ್ದ ತ್ರಿವೇಣಿ ರಾವ್ ಜನಪ್ರಿಯತೆ ದಿನೇ ದಿನೇ ಹೆಚ್ಚಾಗುತ್ತದೆ.


'ಟಗರು' ಸಿನಿಮಾದ 'ಕಾನ್ಸ್ ಟೇಬಲ್ ಸರೋಜ' ಯಾರು ಗೊತ್ತಾ ?


ಚಿಟ್ಟೆ

ಕವನ ಬರೆಯುವ ಸಾಮಾನ್ಯ ಹುಡುಗ ಆಕಸ್ಮಿಕವಾಗಿ ಚಿಟ್ಟೆ ಎಂಬ ರೌಡಿ ಆಗಿ ಬದಲಾಗುತ್ತಾನೆ. ನಟ ವಸಿಷ್ಟ ಸಿಂಹ ಈ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.


ಕಾಕ್ರೋಚ್

ಕ್ರೂರಿ ಡಾಲಿಯ ಪ್ರೀತಿಯ ತಮ್ಮನಾಗಿ ಸಿನಿಮಾದಲ್ಲಿ ಕಾಕ್ರೋಚ್ ಪಾತ್ರ ಬರುತ್ತದೆ. ಈ ಪಾತ್ರ ಕೂಡ ಪ್ರೇಕ್ಷಕರಿಂದ ಶಿಳ್ಳೆ ಚಪ್ಪಾಳೆ ಗಿಟ್ಟುಸುತ್ತದೆ. ಈ ಪಾತ್ರದ ಹೆಸರೇ ಎಲ್ಲರಿಗೂ ತುಂಬ ಇಷ್ಟ ಆಗಿದೆ.


ವಿಮರ್ಶೆ: ಟಗರು ಖದರು, ಡಾಲಿ ಪೊಗರು, ಸ್ಕ್ರೀನ್ ಪ್ಲೇ ಸೂಪರ್ರು


ಅಂಕಲ್

ಡಾಲಿ, ಚಿಟ್ಟೆ ಸೇರಿದಂತೆ ಅನೇಕ ರೌಡಿಗಳನ್ನು ಸಾಕಿಕೊಂಡಿರುವ ಬಾಸ್ ಪಾತ್ರವೇ ಅಂಕಲ್. ಮುಖ್ಯವಾಗಿ ಈ ಅಂಕಲ್ ಪಾತ್ರ ಬೇರೆ ಸಿನಿಮಾಗಿಂತ ತುಂಬ ವಿಶೇಷವಾಗಿದೆ. ಅಂಕಲ್ ಪಾತ್ರದ ಲುಕ್ ಸಿಂಪಲ್ ಆಗಿ ಇದ್ದರೂ ಅದರಲ್ಲಿ ಅದೆನೋ ಆಕರ್ಷಣೆ ಇದೆ.


ಭಾವನಾ ಮತ್ತು ಮಾನ್ವಿತಾ ಹರೀಶ್

ಸಿಕ್ಕಾಪಟ್ಟೆ ಪೊಗರು ಇರುವ ಈ ಟಗರಿಗೆ ನಾಯಕಿಯರಾಗಿ ಭಾವನಾ ಮತ್ತು ಮಾನ್ವಿತಾ ಹರೀಶ್ ಕಾಣಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ಬರುವ ಡಾಲಿಯ ಅಟ್ಟಹಾಸ, ರಕ್ತಪಾತದ ನಡುವೆಯೂ ಭಾವನ ತೆರೆ ಮೇಲೆ ಬಂದಾಗ ನೋಡುಗರಿಗೆ ಏನೋ ಆನಂದ ಆಗುತ್ತದೆ.


English summary
All about Kannada actor Shiva Rajkumar's Tagaru kannada movie characters. The movie is directed by Duniya Suri.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada